»   » ಅಭಿನಯದತ್ತ ಮುಖ ಮಾಡಿದ್ರು ಖ್ಯಾತ ಗಾಯಕ ಅದ್ನಾನ್ ಸಮಿ

ಅಭಿನಯದತ್ತ ಮುಖ ಮಾಡಿದ್ರು ಖ್ಯಾತ ಗಾಯಕ ಅದ್ನಾನ್ ಸಮಿ

Posted By:
Subscribe to Filmibeat Kannada

ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಅದ್ನಾನ್ ಸಮಿ ಈಗ ನಟನೆಯತ್ತ ಮುಖ ಮಾಡಿದ್ದಾರೆ. ಹಿಂದಿ ಚಿತ್ರಗಳಿಗೆ ಹಾಡುವುದರ ಮೂಲಕ, ಸಂಗೀತ ನಿರ್ದೇಶನ ಮಾಡುವ ಮೂಲಕ ಜನಪ್ರಿಯರಾಗಿರುವ ಅದ್ನಾನ್ ಸಮಿ ಈಗ ಬಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.

ರಾಧಿಕ ರಾವ್ ಮತ್ತು ವಿನಯ್ ಸಪ್ರು ರವರು ನಿರ್ದೇಶನ ಮಾಡಲಿರುವ 'ಆಫ್ಘಾನ್-ಇನ್ ಸರ್ಚ್ ಆಫ್ ಎ ಹೋಮ್' ಎಂಬ ಚಿತ್ರದ ಮೂಲಕ ಅದ್ನಾನ್ ಸಮಿ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೊಂದು ವಿಶೇಷತೆ ಎಂದರೆ ಅದ್ನಾನ್ ಈ ಚಿತ್ರದಲ್ಲಿಯೂ ಸಂಗೀತಗಾರನಾಗಿಯೇ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದ್ದು, ಅದ್ನಾನ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Singer Adnan Sami to make his acting debut

ಗಾಯಕ ಹಾಗೂ ಸಂಗೀತ ನಿರ್ದೇಶಕರಾಗಿರುವ ಅದ್ನಾನ್ ಸಮಿ ಈ ಹಿಂದೆ 'ಲಕ್ಕಿ.. ನೊ ಟೈಮ್ ಫಾರ್ ಲವ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ವರ್ಕ್ ಮಾಡಿದ್ದರು.

ಅದ್ನಾನ್ ಸಮಿ ಅಭಿನಯಿಸಲಿರುವ 'ಆಪ್ಘಾನ್-ಇನ್ ಸರ್ಚ್ ಆಫ್ ಎ ಹೋಮ್' ಚಿತ್ರವು ಆಫ್ಘಾನಿಸ್ತಾನದಲ್ಲಿ ಯುದ್ಧ ಸಮಯದಲ್ಲಿ ದೇಶ ತೊರೆದು ಬರುವ ಒಬ್ಬ ನಿರಾಶ್ರಿತ ಸಂಗೀತಗಾರ, ತನ್ನನ್ನು ಗುರುತಿಸಿಕೊಳ್ಳಲು ಮತ್ತು ಮನೆ ಹುಡುಕಲು ಪ್ರಯತ್ನಿಸುವ ಕರುಣಾಜನಕ ಸ್ಟೋರಿಯನ್ನು ಒಳಗೊಂಡಿದೆ. ಚಿತ್ರ ಅಷ್ಟೇ ಭಾವನಾತ್ಮಕವಾಗಿ ಇರಲಿದೆ.

ಚಿತ್ರದ ಕಥೆಯನ್ನು ಕೇಳಿದ ತಕ್ಷಣ ಅದ್ನಾನ್ ಸಮಿ ಅಭಿನಯಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿದಿದೆ. ಅದ್ನಾನ್ ಸಮಿ, ನಿರ್ದೇಶಕರಾದ ರಾಧಿಕ ರಾವ್ ಮತ್ತು ವಿನಯ್ ಸಪ್ರು ಈ ಹಿಂದೆ 'ಲಕ್ಕಿ.. ನೊ ಟೈಮ್ ಫಾರ್ ಲವ್' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು.

English summary
Singer Adnan Sami is set to make his acting debut in Bollywood with "Afghan-In Search Of A Home", directed by Radhika Rao and Vinay Sapru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada