For Quick Alerts
  ALLOW NOTIFICATIONS  
  For Daily Alerts

  ಸುಮಧುರ ಕಂಠದ ಗಾಯಕ ಅರಿಜಿತ್ ಸಿಂಗ್‌ಗೆ ಮಾತೃ ವಿಯೋಗ

  |

  ಭಾರತ ಸಿನಿಮಾರಂಗದ ಬ್ಯುಸಿಯೆಸ್ಟ್ ಗಾಯಕರಲ್ಲಿ ಪ್ರಮುಖರಾಗಿರುವ ಅರಿಜಿತ್ ಸಿಂಗ್‌ ಅವರ ತಾಯಿ ಅದಿತಿ ಸಿಂಗ್ ನಿನ್ನೆ ರಾತ್ರಿ (ಮೇ 19) ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

  ಅರಿಜಿತ್ ಸಿಂಗ್ ಅವರ ತಾಯಿ ಕೊರೊನಾ ಕಾರಣಕ್ಕೆ ಕೊಲ್ಕತ್ತದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ತೀವ್ರ ಅನಾರೋಗ್ಯದಿಂದಿದ್ದ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳ ಚಿಕಿತ್ಸೆ ಬಳಿಕ ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು. ಆದರೆ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

  ಅರಿಜಿತ್ ಅವರ ತಾಯಿಯವರು ಸೆರೆಬ್ರಲ್ ಸ್ಟ್ರೋಕ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ವಾರದ ಹಿಂದಷ್ಟೆ ನಟಿ ಸ್ವಸ್ಥಿಕ್ ಮುಖರ್ಜಿ ಅವರು 'ಅರಿಜಿತ್ ಸಿಂಗ್‌ರ ತಾಯಿ ಕೊಲ್ಕತ್ತದ ಎಎಂಆರ್‌ಐ ಡುಕುರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರಿಗೆ ರಕ್ತದಾನದ ಅವಶ್ಯಕತೆ ಇದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ನೆರವು ಕೋರಿದ್ದರು. ಸ್ವಸ್ಥಿಕ್ ಮುಖರ್ಜಿ ಮನವಿಗೆ ಹಲವಾರು ಮಂದಿ ಸ್ಪಂದಿಸಿದ್ದರು.

  ಅರಿಜಿತ್ ಸಿಂಗ್ ಕುಟುಂಬದವರು ಅದಿತಿ ಸಿಂಗ್ ಸಾವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

  Kiccha Sudeep ಅವರ ಪ್ರೀತಿಗೆ ತಲೆಬಾಗಿದ ಸಿನಿರಂಗ | Filmibeat Kannada

  ಅರಿಜಿತ್ ಸಿಂಗ್ ಅವರು 'ಆಶಿಖಿ 2' ನ 'ತುಮ್‌ ಹಿ ಹೋ', 'ಚನ್ನಾ ಮೇರೆಯಾ' ಇನ್ನೂ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಸಲ್ಮಾನ್ ಖಾನ್ ವಿರೋಧ ಕಟ್ಟಿಕೊಂಡರೂ ಸಹ ಅರಿಜಿತ್ ಸಿಂಗ್ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸಿದ್ದು ವಿಶೇಷ.

  English summary
  Famous singer Arijit Singh's mother Adithi Sigh passed away on May 19 due to cerebral stroke.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X