ತಮಗಿಂತ 2 ವರ್ಷ ದೊಡ್ಡವಳ ಜೊತೆ ಗುಟ್ಟಾಗಿ ಮದುವೆಯಾದ ಚಕ್ರವರ್ತಿ ಚಿತ್ರದ ಗಾಯಕ ಅರ್ಮಾನ್ ಮಲಿಕ್..!

ಒಂದು ಮಳೆ ಬಿಲ್ಲು ಹಾಡಿನ ಮೂಲಕವೇ ಕರುನಾಡಿನೆಲ್ಲೆಡೆ ಮನೆ ಮಾತಾದವರು ಅರ್ಮಾನ್ ಮಲಿಕ್. ತಮ್ಮ ಚಿನ್ನದ ಕಂಠದಿಂದ ಅನೇಕರ ಹೃದಯವನ್ನು ಗೆದ್ದ ಅರ್ಮಾನ್ ಮಲಿಕ್ ಸದ್ಯ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಬಹುಕಾಲದ ಗೆಳತಿ ಆಶ್ನಾ ಜೊತೆ ಹೊಸ ಬದುಕಿಗೆ ಮುನ್ನಡಿಯನ್ನು ಬರೆದಿದ್ದಾರೆ.

ತಮ್ಮ ಮದುವೆಯ ಫೋಟೋಗಳನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅರ್ಮಾನ್ ಮಲಿಕ್ ತು ಹಿ ಮೇರಾ ಘರ್ ಎಂದು ಬರೆದುಕೊಂಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಪೀಚ್-ಬಣ್ಣದ ಉಡುಪಿನಲ್ಲಿ ಅರ್ಮಾನ್ ಮಲಿಕ್ ಕಂಗೊಳಿಸಿದರೆ, ಕಿತ್ತಳೆ ಬಣ್ಣದ ಲೆಹೆಂಗಾದಲ್ಲಿ ಆಶ್ನಾ ಶ್ರಾಫ್ ಮಿಂಚಿದ್ದಾರೆ. ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್ ಅವರ ಕುಟುಂಬ ವರ್ಗ ಮತ್ತು ಕೆಲವೇ ಕೆಲ ಸ್ನೇಹಿತರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅರ್ಮಾನ್ ಮಲಿಕ್ ಅವರ ಮದುವೆ ಫೋಟೊಗಳು ವೈರಲ್ ಆಗಿದ್ದು ಚಿತ್ರರಂಗದ ಅನೇಕರು ಅರ್ಮಾನ್ ಮಲಿಕ್ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಅಭಿಮಾನಿಗಳು ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.

Singer Armaan Malik Ties the Knot with Social Media Influencer Aashna Shroff

ಅಂದ್ಹಾಗೇ ಫ್ಯಾಷನ್ ಪ್ರಪಂಚದಲ್ಲಿ ಹೆಸರುವಾಸಿಯಾಗಿರುವ ಆಶ್ನಾ ಶ್ರಾಫ್ ಅವರ ಜೊತೆ 2017ರಲ್ಲಿ ಅರ್ಮಾನ್ ಮಲಿಕ್ ಪ್ರೀತಿಯಲ್ಲಿ ಬಿದ್ದಿದ್ದರು. ಅಂದಿನಿಂದ ಇಂದಿನವರೆಗೆ ಹಲವು ಕಡೆ ಕಾಣಿಸಿಕೊಂಡಿರುವ ಇಬ್ಬರು ಎರಡು ವರ್ಷದ ಹಿಂದೆ 2023ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಇನ್ನು ಫ್ಯಾಷನ್ ಇನ್ಫ್ಲೂಯನ್ಸರ್ ಆಗಿ ಅಲ್ಲದೇ ಯೂಟ್ಯೂಬರ್ ಆಗಿ ಕೂಡ ಗುರುತಿಸಿಕೊಂಡಿರುವ ಆಶ್ನಾ ಶ್ರಾಫ್ ಅವರಿಗಾಗಿ ಅರ್ಮಾನ್ ಮಲಿಕ್ ಕಸಂ ಸೆ - ದಿ ಪ್ರಪೋಸಲ್ ಎಂಬ ಹಾಡನ್ನು ಕೂಡ ಈ ಹಿಂದೆ ಅರ್ಪಿಸಿದ್ದರು. ಬಿಡುಗಡೆ ಮಾಡಿದ್ದರು. ಇನ್ನೂ ಅರ್ಮಾನ್ ಮಲಿಕ್ ಅವರಿಗಿಂತ ಆಶ್ನಾ ಶ್ರಾಫ್ ಎರಡು ವರ್ಷ ದೊಡ್ಡವರು ಅನ್ನುವುದು ವಿಶೇಷ. ಇಂಡಿಯಾ ಟುಡೇ ವರದಿಯ ಪ್ರಕಾರ ನ್ಯೂಜಿಲ್ಯಾಂಡ್‌ನಲ್ಲಿ ಶಿಕ್ಷಣವನ್ನು ಪಡೆದಿರುವ ಆಶ್ನಾ ಶ್ರಾಫ್ 37 ಕೋಟಿಯ ಆಸ್ತಿಯ ಒಡತಿ ಕೂಡ ಹೌದು.

ಇನ್ನುಳಿದಂತೆ ಬಹುಭಾಷಾ ಗಾಯಕನಾಗಿ ಹೆಸರು ಮಾಡಿರುವ ಅರ್ಮಾನ್ ಮಲಿಕ್, 2007ರಿಂದ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ನೂರಕ್ಕೂ ಅಧಿಕ ಹಿಂದಿ ಚಿತ್ರಗಳ ಹಾಡನ್ನು ಹಾಡಿರುವ ಅರ್ಮಾನ್ ಮಲಿಕ್ 50ಕ್ಕೂ ಅಧಿಕ ಆಲ್ಬಂ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕೇವಲ ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಕನ್ನಡದ ಹಾಡುಗಳಿಗೆ ಕೂಡ ಅರ್ಮಾನ್ ಮಲಿಕ್ ತಮ್ಮ ಚಿನ್ನದಂತಹ ಕಂಠವನ್ನು ಕುಣಿಸಿದ್ದಾರೆ. ತೆಲುಗುದಲ್ಲಿ ಇಲ್ಲಿಯವರೆಗೆ 59 ಹಾಡುಗಳನ್ನು ಹಾಡಿರುವ ಅರ್ಮಾನ್ ಮಲ್ಲಿಕ್ ತಮಿಳಿನಲ್ಲಿ 17 ಹಾಡುಗಳನ್ನು ಹಾಡಿದ್ದಾರೆ.

ಇನ್ನು ಕನ್ನಡದಲ್ಲಿ ಈ ಸಂಖ್ಯೆ ಹತ್ ಹತ್ರ 55ರವರೆಗೆ ಬಂದು ತಲುಪುತ್ತೆ. ಆ ಪೈಕಿ ಚಕ್ರವರ್ತಿಯ ಒಂದು ಮಳೆ ಬಿಲ್ಲು, ಮುಂಗಾರು ಮಳೆ 2 ಚಿತ್ರದ ಸರಿಯಾಗಿ ನೆನಪಿದೆ ನನಗೆ, ಹೆಬ್ಬುಲಿ ಚಿತ್ರದ ದೇವರೆ, ದಿ ವಿಲನ್ ಚಿತ್ರದ ನೋಡಿವಳ ಅಂದವಾ, ಐ ಲವ್ ಯೂ ಚಿತ್ರದ ಮಾತನಾಡಿ ಮಾಯವಾದೆ, ಯುವರತ್ನ ಚಿತ್ರದ ನೀನಾದೇನಾ, ಬನಾರಸ್ ಚಿತ್ರದ ಮಾಯಗಂಗೆ ಮತ್ತು ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ತಾರೆ ನಿಹಾರೆ ಹಾಡುಗಳು ಪ್ರಮುಖವಾದವು.

More from Filmibeat

Read more about: singer marriage bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X