ರಾನು ಮೊಂಡಲ್ ಮಾತು ಕೇಳಿ ಕಣ್ಣೀರಿಟ್ಟ ಹಿಮೇಶ್ ರೇಶಮಿಯಾ
Recommended Video
ರಾನು ಮೊಂಡಲ್ ಸಾಮಾಜಿಕ ಜಾಲತಾಣದ ಮೂಲಕ ರಾತ್ರಿ ಬೆಳಗಾಗೋದ್ರಲ್ಲಿ ಸ್ಟಾರ್ ಆದ ಗಾಯಕಿ. ರೈಲ್ವೆ ಸ್ಟೇಷನ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಇಂದು ಸ್ಟಾರ್ ಗಾಯಕಿಯಾಗಿದ್ದಾರೆ. ತೇರೆ ಮೇರಿ ಹಾಡಿನ ಮೂಲಕ ಭಾರತೀಯರ ಮನೆ ಮಾತಾಗಿದ್ದಾರೆ ರಾನು.
ರಾನು ಮೊಂಡಲ್ ಈ ಖ್ಯಾತಿಗೆ ಗಾಯಕ ಹಿಮೇಶ್ ರೇಶಮಿಯಾ ಕಾರಣ. ರಾನುಗೆ ಹಾಡಲು ಅವಕಾಶ ಕೊಟ್ಟು, ಸ್ಟಾರ್ ಮಾಡಿದ ಹಿಮೇಶ್ ಇತ್ತೀಚಿಗೆ ಪತ್ರೀಕಾಗೋಷ್ಠಿಯಲ್ಲಿ ಗಳಗಳನೆ ಕಣ್ಣೀರಿಟ್ಟಿದ್ದಾರೆ. ತೇರಿ ಮೇರಿ ಹಾಡಿನ ರಿಲೀಸ್ ಪತ್ರಿಕಾಗೋಷ್ಠಿಯಲ್ಲಿ ರಾನು ಮಾತು ಕೇಳಿ ಹಿಮೇಶ್ ಭಾವುಕರಾಗಿದ್ದಾರೆ.
"ಈ ಪತ್ರಿಕಾಗೋಷ್ಠಿಗೆ ಬರಲು ಮುಖ್ಯ ಕಾರಣ ಹಿಮೇಶ್ ಅವರಿಗಾಗಿಯೆ ನಾನು ಇವತ್ತು ಇಲ್ಲಿಗೆ ಬಂದಿದ್ದೇನೆ" ಎಂದು ರಾನು ಹೇಳುತ್ತಿದ್ದಂತೆ ಹಿಮೇಶ್ ಕಣ್ಣೀರಾಕಿದ್ದಾರೆ. "ನನಗೆ ದೇವರ ದಯೆ ಇಲ್ಲದಿದ್ದರೆ ಹಾಡಲು ಅವಕಾಶ ಸಿಗುತ್ತಿರಲ್ಲಿವೇನೂ, ನನ್ನ ಮೇಲೆ ದೇವರ ದಯೆ ಇದೆ. ಅದಕ್ಕಾಗಿ ನಾನು ಹಾಡಬಲ್ಲೆ" ಎಂದು ಹೇಳಿದ್ದಾರೆ.

"ಹ್ಯಾಪಿ ಹಾರ್ಡಿ ಆಂಡ್ ಹೀರ್" ಸಿನಿಮಾಗಾಗಿ ಹಿಮೇಶ್ ರಾನು ಅವರ ಬಳಿ ಮೂರು ಹಾಡು ಹಾಡಿಸಿದ್ದಾರೆ. ಸದ್ಯ ತೇರಿ ಮೇರಿ ಹಾಡನ್ನು ರಿಲೀಸ್ ಮಾಡಲಾಗಿದೆ. "ಹ್ಯಾಪಿ ಹಾರ್ಡಿ ಆಂಡ್ ಹೀರ್" ಸಿನಿಮಾದಲ್ಲಿ ಹಿಮೇಶ್ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಜವಾಜ್ದಾರಿಯನ್ನು ಹೊತ್ತುಕೊಂಡಿದ್ದಾರೆ. ರಾನು ಮೊಂಡಲ್ ಬಳಿ ಹಾಡಿಸಿರುವ ಇನ್ನು ಎರಡು ಹಾಡುಗಳು ಸಧ್ಯದಲ್ಲೆ ತೆರೆಗೆ ಬರಲಿದೆ.


Click it and Unblock the Notifications











