ಶಾಕಿಂಗ್ ಸುದ್ದಿ: ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ.!

ಬಾಲಿವುಡ್ ಅಂಗಳದಲ್ಲಿ ಸದ್ಯ ತನುಶ್ರೀ ದತ್ತಾ ಸಿಡಿಸಿರುವ 'ಕಾಸ್ಟಿಂಗ್ ಕೌಚ್' ಬಾಂಬ್ ದೊಡ್ಡ ಸಂಚಲನ ಸೃಷ್ಟಿಸಿದೆ. ಖ್ಯಾತ ನಟ ನಾನಾ ಪಾಟೇಕರ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಈ ವಿಷ್ಯ ಈಗ ಬಿಟೌನ್ ಇಂಡಸ್ಟ್ರಿಯ ದೊಡ್ಡ ನಟ, ನಿರ್ದೇಶಕರನ್ನ ಬೆಚ್ಚಿ ಬೀಳಿಸಿದೆ. ಹೀಗಿರುವಾಗ, ಪ್ರಖ್ಯಾತ ಗಾಯಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ಹಿಂದಿ ಸೇರಿದಂತೆ ಕನ್ನಡ, ತಲುಗು, ತಮಿಳು ಹೀಗೆ ಭಾರತ ಸಿನಿರಂಗದಲ್ಲಿ ತನ್ನ ಗಾಯನದ ಮೂಲಕ ಬಹುದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ಕೈಲಾಶ್ ಖೇರ್ ಮೇಲೆ ಈಗ ಯುವತಿಯೊಬ್ಬಳು ದೌರ್ಜನ್ಯದ ಅರೋಪ ಮಾಡಿದ್ದಾರೆ. ಅಷ್ಟಕ್ಕೂ, ಕೈಲಾಶ್ ಖೇರ್ ವಿರುದ್ಧ ಬಾಂಬ್ ಸಿಡಿಸಿರುವ ಆ ಯುವತಿ ಯಾರು.? ಯಾವಾಗ ಕಿರುಕುಳ ಅನುಭವಿಸಿದ್ದರು.? ಮುಂದೆ ಓದಿ....

ಫೋಟೋ ಜರ್ನಲಿಸ್ಟ್ ಆರೋಪ

ಫೋಟೋ ಜರ್ನಲಿಸ್ಟ್ ಆರೋಪ

ಗಾಯಕ ಕೈಲಾಶ್ ಖೇರ್ ವಿರುದ್ಧ ಮುಂಬೈನ ಫೋಟೋ ಜರ್ನಲಿಸ್ಟ್ ಯುವತಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಕೈಗೊಂಡಿರುವ #Meetoo ಅಭಿಯಾನದ ಹಿನ್ನೆಲೆ ಈ ಸ್ಫೋಟಕ ಸಂಗತಿಯನ್ನ ಬಹಿರಂಗಪಡಿಸಿದ್ದಾರೆ.

ಸಂದರ್ಶನಕ್ಕೆ ಹೋಗಿದ್ದ ವೇಳೆ ಕಿರುಕುಳ

ಸಂದರ್ಶನಕ್ಕೆ ಹೋಗಿದ್ದ ವೇಳೆ ಕಿರುಕುಳ

2006 ರಲ್ಲಿ ಸಂದರ್ಶನಕ್ಕೆ ಎಂದು ಕೈಲಾಶ್ ಖೇರ್ ನಿವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನಟಶಾ ಹೇಮ್ರಾಜನ್ ಎಂಬ ಫೋಟೋ ಜರ್ನಲಿಸ್ಟ್ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದರಂತೆ. ಈ ವೇಳೆ ತನ್ನ ಜೊತೆ ಮತ್ತೊರ್ವ ಸಹದ್ಯೋಗಿ ಇದ್ದರು ಎಂದು ಹೇಳಿಕೊಂಡಿದ್ದಾರೆ.

ನನ್ನ ತೊಡೆ ಮುಟ್ಟಿದ್ದ ಕೈಲಾಶ್

ನನ್ನ ತೊಡೆ ಮುಟ್ಟಿದ್ದ ಕೈಲಾಶ್

ಸಂದರ್ಶನದ ಫೋಟೋ ಕ್ಲಿಕ್ಕಿಸಲು ನನ್ನ ಸಹದ್ಯೋಗಿ ನನ್ನನ್ನು ಕಳುಹಿಸಿದ್ದರು. ಹಾಗಾಗಿ, ನಾನು ವರದಿಗಾರ್ತಿಯ ಜೊತೆ ಹೋಗಿದ್ದೆ. ಸಂದರ್ಶನದ ವೇಳೆ ನಮ್ಮ ಮಧ್ಯೆ ಕುಳಿತುಕೊಂಡ ಕೈಲಾಶ್ ಖೇರ್ ನನ್ನ ತೊಡೆಯನ್ನ ಗಟ್ಟಿಯಾಗಿ ಹಿಡಿದುಕೊಂಡರು. ನನಗೆ ಭಯವಾಯಿತು. ಬೇಗ ಅಲ್ಲಿಂದ ಸಂದರ್ಶನ ಮುಗಿಸಿಕೊಂಡು ಹೊರಗೆ ಬಂದೆವು ಎಂದು ಬಹಿರಂಗಪಡಿಸಿದ್ದಾರೆ.

ಕನ್ನಡದಲ್ಲಿ ಕೈಲಾಶ್ ಖೇರ್ ಗಾನ

ಕನ್ನಡದಲ್ಲಿ ಕೈಲಾಶ್ ಖೇರ್ ಗಾನ

ಕೈಲಾಶ್ ಖೇರ್ ಕನ್ನಡದ ಸೂಪರ್ ಹಿಟ್ ಗೀತೆಗಳನ್ನ ಹಾಡಿದ್ದಾರೆ. ಜಂಗ್ಲಿ ಚಿತ್ರದ 'ಹಳೇ ಪಾತ್ರೆ ಹಳೇ ಕಬ್ಬಿಣ', ಜಾಕಿ ಚಿತ್ರದ 'ಎಕ್ಕ ರಾಜ ರಾಣಿ', ಸಾರಥಿ ಚಿತ್ರದ 'ವಜ್ರ ಬಲ್ಲಾಳರಾಯ', ಇತ್ತೀಚಿಗೆ ದಿ ವಿಲನ್ ಚಿತ್ರದ 'ಟಿಕ್ ಟಿ'ಕ್ ಹಾಡು ಸೇರಿದಂತೆ ಹಲವರು ಹಾಡುಗಳನ್ನ ಹಾಡಿದ್ದಾರೆ. ಇಂತಹ ಗಾಯಕನ ವಿರುದ್ಧ ಈ ಆರೋಪ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಎಂಬುದು ಕುತೂಹಲ ಮೂಡಿಸಿದೆ.

More from Filmibeat

English summary
Over the past couple of days, a lot of victims have opened up being sexually harassed by famous personalities. A photojournalist recently opened up about being harassed by famous singer Kailash Kher.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X