twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಮೇಲಿನ ಆರೋಪಗಳೆಲ್ಲವೂ ಕಟ್ಟುಕಥೆ: ಗಾಯಕಿ ಕನಿಕಾ ಕಪೂರ್ ಸ್ಪಷ್ಟನೆ

    |

    ಲಂಡನ್‌ನಿಂದ ಬಂದ ಬಳಿಕ ಮನೆಯಲ್ಲಿ ಕ್ವಾರೆಂಟೀನ್ ಆಗಿ ಉಳಿಯದೆ ಪಾರ್ಟಿ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್, ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

    ಲಂಡನ್‌ನಿಂದ ಲಕ್ನೋಗೆ ಬರುವಾಗ ತಪಾಸಣೆಗೆ ಅಧಿಕಾರಿಗಳೊಂದಿಗೆ ಸಹಕರಿಸಿರಲಿಲ್ಲ. ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದರೂ ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಕೊನೆಗೆ ಕೊರೊನಾ ವೈರಸ್ ಇರುವುದು ದೃಢಪಟ್ಟ ಬಳಿಕವೂ ಆಸ್ಪತ್ರೆಯಲ್ಲಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕಿರಿಕ್ ಮಾಡಿದ್ದರು. ತೀವ್ರ ಟೀಕೆಗೆ ಒಳಗಾಗಿದ್ದ ಅವರ ವಿರುದ್ಧ ಪ್ರಕರಣಗಳೂ ದಾಖಲಾಗಿವೆ. ಈಗ ತಮ್ಮ ವಿರುದ್ಧದ ಆರೋಪಗಳಿಗೆ ಕನಿಕಾ ಕಪೂರ್ ಸುದೀರ್ಘ ವಿವರಣೆ ನೀಡಿದ್ದಾರೆ. ಮುಂದೆ ಓದಿ...

    ಸುಳ್ಳು ಕಥೆಗಳು ಹರಿದಾಡುತ್ತಿವೆ

    ಸುಳ್ಳು ಕಥೆಗಳು ಹರಿದಾಡುತ್ತಿವೆ

    'ನನ್ನ ಬಗ್ಗೆ ಅನೇಕ ರೀತಿಯ ಕಥೆಗಳು ಹರಿದಾಡುತ್ತಿವೆ ಎನ್ನುವುದು ನನಗೆ ಗೊತ್ತು. ನಾನು ಇದುವರೆಗೂ ಮೌನವಾಗಿ ಇರಲು ಬಯಸಿರುವುದು ಇವುಗಳಲ್ಲಿ ಕೆಲವಕ್ಕೆ ಇನ್ನಷ್ಟು ಎಣ್ಣೆ ಎರೆದಂತೆ ಆಗಿದೆ. ನಾನು ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕೆ ನಾನು ಸುಮ್ಮನಿಲ್ಲ. ಇಲ್ಲಿ ತಪ್ಪು ಭಾವನೆ ಮತ್ತು ತಪ್ಪು ಮಾಹಿತಿಗಳ ಹಂಚಿಕೆ ನಡೆದಿದೆ ಎನ್ನುವುದು ಚೆನ್ನಾಗಿ ಗೊತ್ತು' ಎಂದು ಹೇಳಿದ್ದಾರೆ.

    ಬಾಲಿವುಡ್ ಟಾಪ್ ನಾಯಕಿಯರನ್ನೇ ಹಿಂದಿಕ್ಕಿದ ಗಾಯಕಿ ಕನ್ನಿಕಾ ಕಪೂರ್!ಬಾಲಿವುಡ್ ಟಾಪ್ ನಾಯಕಿಯರನ್ನೇ ಹಿಂದಿಕ್ಕಿದ ಗಾಯಕಿ ಕನ್ನಿಕಾ ಕಪೂರ್!

    ನೀವು ಸುರಕ್ಷಿತರಾಗಿರಿ

    ನೀವು ಸುರಕ್ಷಿತರಾಗಿರಿ

    'ಸತ್ಯ ಹೊರಬರುವುದಕ್ಕೆ ಮತ್ತು ಜನರು ತಮ್ಮದೇ ರೀತಿಯಲ್ಲಿ ವಾಸ್ತವವನ್ನು ಅರ್ಥ ಮಾಡಿಕೊಳ್ಳಲಿ ಎಂದು ನಾನು ಸಮಯ ನೀಡುತ್ತಿದ್ದೇನೆ. ನಾನು ಮಾತನಾಡಲು ಸಿದ್ಧಳಾಗಲು ಅವಕಾಶ ನೀಡಿದ್ದಕ್ಕಾಗಿ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ಧನ್ಯವಾದಗಳು. ಈ ಸಮಯದಲ್ಲಿ ನೀವೆಲ್ಲರೂ ಸುರಕ್ಷಿತರಾಗಿರಿ ಮತ್ತು ಜಾಗೃತರಾಗಿರಿ' ಎಂದಿದ್ದಾರೆ.

    ಯಾರಲ್ಲಿಯೂ ಸೋಂಕು ಲಕ್ಷಣ ಪತ್ತೆಯಾಗಿಲ್ಲ

    ಯಾರಲ್ಲಿಯೂ ಸೋಂಕು ಲಕ್ಷಣ ಪತ್ತೆಯಾಗಿಲ್ಲ

    ನಾನು ಲಂಡನ್, ಮುಂಬೈ ಅಥವಾ ಲಕ್ನೋದಲ್ಲಿ ಸಂಪರ್ಕಕ್ಕೆ ಬಂದ ಯಾರಲ್ಲಿಯೂ ಕೋವಿಡ್ 19 ಲಕ್ಷಣಗಳು ಕಂಡುಬಂದಿಲ್ಲ. ಅಷ್ಟೇ ಅಲ್ಲ ಅವರೆಲ್ಲರಿಗೂ ಸೋಂಕು ನೆಗೆಟಿವ್ ಬಂದಿದೆ. ನಾನು ಮಾರ್ಚ್ 10ರಂದು ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸಿದ್ದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್‌ಗೆ ಒಳಗಾಗಿದ್ದೆ.

    ಕೊರೊನಾ ವೈರಸ್‌ನಿಂದ ಗುಣಮುಖರಾದರೂ ಕನಿಕಾ ಕಪೂರ್‌ಗೆ ತಪ್ಪದ ಸಂಕಷ್ಟಕೊರೊನಾ ವೈರಸ್‌ನಿಂದ ಗುಣಮುಖರಾದರೂ ಕನಿಕಾ ಕಪೂರ್‌ಗೆ ತಪ್ಪದ ಸಂಕಷ್ಟ

    ಸೂಚನೆ ನೀಡಿರಲಿಲ್ಲ

    ಸೂಚನೆ ನೀಡಿರಲಿಲ್ಲ

    ನಾನು ಸ್ವಯಂ ದಿಗ್ಬಂಧನಕ್ಕೆ ಒಳಗಾಗಬೇಕು ಎಂದು ಸೂಚಿಸುವ ಯಾವುದೇ ಅಡ್ವೈಸರಿ ನೀಡಿರಲಿಲ್ಲ. ನನ್ನಲ್ಲಿ ಯಾವ ಅಸ್ವಸ್ಥತೆಯೂ ಕಾಣಿಸದ ಕಾರಣ ನಾನು ಕ್ವಾರೆಂಟೀನ್‌ಗೆ ಒಳಗಾಗಲಿಲ್ಲ. ಮರುದಿನ ಮಾರ್ಚ್ 11ರಂದು ನನ್ನ ಕುಟುಂಬವನ್ನು ನೋಡಲು ಲಕ್ನೋಗೆ ಮುಂಬೈನಿಂದ ತೆರಳಿದೆ. ಡೊಮೆಸ್ಟಿಕ್ ವಿಮಾನಗಳಲ್ಲಿ ಯಾವುದೇ ಸ್ಕ್ರೀನಿಂಗ್ ಇರಲಿಲ್ಲ. ಮಾರ್ಚ್ 14 & 15ರಂದು ನಾನು ಸ್ನೇಹಿತರೊಬ್ಬರ ಲಂಚ್ ಮತ್ತು ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದೆ.

    ಪಾರ್ಟಿ ಆಯೋಜಿಸಿರಲಿಲ್ಲ

    ಪಾರ್ಟಿ ಆಯೋಜಿಸಿರಲಿಲ್ಲ

    ನನ್ನಿಂದ ಯಾವುದೇ ಪಾರ್ಟಿ ಆಯೋಜನೆಗೊಂಡಿರಲಿಲ್ಲ. ಹಾಗೆಯೇ ನನ್ನ ಆರೋಗ್ಯ ಸಂಪೂರ್ಣವಾಗಿ ಚೆನ್ನಾಗಿತ್ತು. ನನಗೆ ಮಾರ್ಚ್ 17 & 18ರಂದು ನನಗೆ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆಗೆ ಒಳಪಡುವಂತೆ ಸೂಚಿಸಿದರು. ಮಾರ್ಚ್ 19ರಂದು ತಪಾಸಣೆಗೆ ಒಳಪಟ್ಟೆ. ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾದೆ. ಮೂರು ನೆಗೆಟಿವ್ ವರದಿಗಳ ಬಳಿಕ 21 ದಿನಗಳಿಂದ ಮನೆಯಲ್ಲಿಯೇ ಇದ್ದೇನೆ ಎಂದಿರುವ ಅವರು, ಒಬ್ಬ ವ್ಯಕ್ತಿಯ ವಿರುದ್ಧ ತೂರುವ ನಕಾರಾತ್ಮಕತೆ ಸತ್ಯವನ್ನು ಬದಲಿಸಲಾಗುವುದಿಲ್ಲ. ನೀವು ಈ ಸಂಗತಿಯನ್ನು ಪ್ರಾಮಾಣಿಕತೆ ಮತ್ತು ಸಂವೇದನೆಯಿಂದ ಪರಿಗಣಿಸುತ್ತೀರಿ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.

    English summary
    Singer Kanika Kapoor clarified that she has not hosted any party. She did not have coronavirus symptoms earlier.
    Sunday, April 26, 2020, 18:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X