Lucky Ali on Halal Row: ಹಲಾಲ್ ಮಾಂಸ ಮುಸ್ಲಿಮೇತರರಿಗೆ ಅಲ್ಲ: ಗಾಯಕ ಲಕ್ಕಿ ಅಲಿ

ರಾಜ್ಯದಲ್ಲಿ ಆರಂಭವಾದ ಹಲಾಲ್ ಮಾಂಸದ ವಿರುದ್ಧ ಅಭಿಯಾನ ದೇಶದೆಲ್ಲೆಡೆ ವ್ಯಾಪಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ಗಾಯಕ ಲಕ್ಕಿ ಅಲಿ ಪ್ರತಿಕ್ರಿಯಿರಿಸಿದ್ದಾರೆ. 'ಹಲಾಲ್' ಕಡ್ಡಾಯವಾಗಿ ಮುಸ್ಲಿಮೇತರರಿಗೆ ಅಲ್ಲ' ಎಂದಿದ್ದಾರೆ.

''ಭಾರತದ ಪ್ರಿಯ ಸೋದರ, ಸೋದರಿಯರೆ, ನೀವೆಲ್ಲ ಚೆನ್ನಾಗಿದ್ದೀರೆಂದು ಭಾವಿಸಿದ್ದೇನೆ. ನಾನಿಂದು ಒಂದು ವಿಷಯವನ್ನು ನಿಮಗೆ ವಿವರಿಸಲಿಕ್ಕಿದ್ದೇನೆ. 'ಹಲಾಲ್' ಖಂಡಿತವಾಗಿ ಇಸ್ಲಾಮೇತರರಿಗೆ ಅಲ್ಲ. ಇಸ್ಲಾಂ ಪಾಲಿಸುವಾತ ಹಲಾಲ್ ಅಲ್ಲದ ವಸ್ತುಗಳನ್ನು ಖರೀದಿಸುವುದಿಲ್ಲ. ಜ್ಯುಯಿಷ್ ಜನರಿಗೆ ಚೆನ್ನಾಗಿ ಅರ್ಥವಾಗುತ್ತಿದೆ. ಅವರು ಹಲಾಲ್‌ ಅನ್ನೇ ಹೋಲುವ ಕೋಶರ್ ಪದ್ಧತಿ ಪಾಲಿಸುತ್ತಾರೆ. ಕೋಶರ್ ನಿಯಮದ ಅನುಸಾರ ತಯಾರಿಸಲಾದ ಆಹಾರವನ್ನಷ್ಟೆ ಅವರು ಸೇವಿಸುತ್ತಾರೆ'' ಎಂದಿದ್ದಾರೆ ಲಕ್ಕಿ ಅಲಿ.

''ಸಂಸ್ಥೆಗಳು ಮುಸ್ಲಿಂ, ಜ್ಯುಯಿಷ್ ಜನರು ಸೇರಿದಂತೆ ಎಲ್ಲರಿಗೂ ತಮ್ಮ ಉತ್ಪನ್ನ ಮಾರಾಟ ಮಾಡಬೇಕಾಗಿರುವ ಕಾರಣ ಅವರು ಹಲಾಲ್ ಸರ್ಟಿಫಿಕೇಟ್ ಹಾಗೂ ಕೋಶರ್ ಸರ್ಟಿಫಿಕೇಟ್ ಪಡೆದು ಅದರ ನಿಯಮಗಳ ರೀತಿಯಲ್ಲಿಯೇ ಆಹಾರ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಇಸ್ಲಾಮೇತರರಿಗೆ ಹಲಾಲ್ ಅಥವಾ ಕೋಶರ್ ವಸ್ತುಗಳನ್ನು ಖರೀದಿಸುವುದು ಇಷ್ಟವಿಲ್ಲದಿದ್ದಲ್ಲಿ ಖರೀದಿಸುವುದು ಬೇಡ. ಕಂಪೆನಿಗಳು ಸಹ ಹಲಾಲ್, ಕೋಶರ್ ಸರ್ಟಿಫೈಡ್ ಎಂದು ಮುದ್ರಿಸುವುದು ಬೇಡ'' ಎಂದು ಸಲಹೆ ನೀಡಿದ್ದಾರೆ ಗಾಯಕ ಲಕ್ಕಿ ಅಲಿ.

Singer Lucky Ali Facebook Post About Halal Meet

''ಆದರೆ ಹಾಗೊಂದು ವೇಳೆ ಕಂಪೆನಿಗಳು ಹಲಾಲ್, ಕೋಶರ್ ಮುದ್ರಣಗಳನ್ನು ತಮ್ಮ ಪ್ರಾಡಕ್ಟಿನ ಮೇಲಿಂದ ತೆಗೆದು ಅದೇ ವಸ್ತುವನ್ನು ಇಸ್ಲಾಂ ಪಾಲಕರು, ಜ್ಯುಯಿಷ್ ಜನರೂ ಕೊಳ್ಳಬೇಕು ಎಂದು ಒತ್ತಾಯಿಸುವುದು ಸೂಕ್ತವಲ್ಲ. ಆದರೆ ಕಂಪೆನಿಗಳು ಹಲಾಲ್, ಕೋಶರ್ ಅನ್ನು ತೆಗೆದ ಬಳಿಕ ಅವರ ವ್ಯಾಪಾರ ಮೊದಲಿನಂತೆ ಇರಲಿದೆ ಎಂದು ಮಾತ್ರ ಹೇಳಲಾಗದು'' ಎಂದಿದ್ದಾರೆ.

Singer Lucky Ali Facebook Post About Halal Meet

ಗಾಯಕ ಲಕ್ಕಿ ಅಲಿ ಹಿಂದಿಯಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ನೀಡಿದ್ದಾರೆ. ಬಾಲಿವುಡ್‌ನ ದಂತಕತೆಗಳಲ್ಲಿ ಒಬ್ಬರಾಗಿರುವ ಕಮಿಡಿಯನ್ ಮೊಹಮೂದ್‌ರ ಪುತ್ರನಾಗಿರುವ ಲಕ್ಕಿ ಅಲಿ ಧರ್ಮ ಸಾಮರಸ್ಯದ ಬಗ್ಗೆ ಆಗಾಗ್ಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

More from Filmibeat

English summary
Singer Lucky Ali Facebook post about Halal meet. He said Halal is not necessary for non Islam believer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X