ಪಾಕಿಸ್ತಾನದಲ್ಲಿ ಹಾಡಿದಕ್ಕೆ ಬಾಲಿವುಡ್ ನಿಂದ ಬ್ಯಾನ್ ಆದ ಭಾರತದ ಗಾಯಕ

Recommended Video

ಬಾಲಿವುಡ್ ನಿಂದ ಬ್ಯಾನ್ ಆದ ಭಾರತದ ಗಾಯಕ | FILMIBEAT KANNADA

ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಪಾಕ್ ಭಾರತ ಜೊತೆಗಿನ ಹಲವು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಈ ಸಮಯದಲ್ಲಿ ಬಾಲಿವುಡ್ ಗಾಯಕ ಮಿಕ ಸಿಂಗ್ ಪಾಕಿಸ್ತಾನಕ್ಕೆ ಹೋಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಕಾರಣ ಬಾಲಿವುಡ್ ನಿಂದ ಬ್ಯಾನ್ ಆಗಿದ್ದಾರೆ.

ಇತ್ತೀಚಿಗೆ ಪಾಕಿಸ್ತಾನದ ಕರಾಚಿಯಲ್ಲಿ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಅವರ ಸಂಬಂಧಿಕರ ಕಾರ್ಯಕ್ರಮದಲ್ಲಿ ಮಿಕ ಸಿಂಗ್ ಬಾಗಿಯಾಗಿದ್ದರು. ಅಲ್ಲದೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ದುಡ್ಡಿಗಾಗಿ ಮಿಕ ಸಿಂಗ್ ಪಾಕ್ ಗೆ ಹೋಗಿ ಹಾಡಿರುವ ಕಾರಣ "ಆಲ್ ಇಂಡಿಯ ಸಿನಿ ವರ್ಕರ್ಸ್ ಅಸೋಸಿಯೇಶನ್" ಮಿಕ ಅವರನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದೆ.

ಎಐಸಿಡಬ್ಲ್ಯೂಎ ಸಿನಿಮಾ ನಿರ್ಮಾಣ ಸಂಸ್ಥೆ, ಸಂಗೀತಾ ಸಂಸ್ಥೆ, ಆನ್ ಲೈನ್ ಸಂಗೀತ ಸಂಸ್ಥೆ, ಎಂಟರ್ ಟೈನ್ ಮೆಂಟ್ ಕಂಪನಿಗಳು, ಸಿನಿಮಾ ಸೇರಿದಂತೆ ಯಾವುದೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಇಲ್ಲ.

Singer Mika Singh Banned From Bollywood For Performed In Pakistan

ಎಐಸಿಡಬ್ಲ್ಯೂಎ ಹೊರಡಿಸಿರುವ ಆದೇಶವನ್ನು ಮೀರಿ ಯಾರಾದರು ಮಿಕ ಸಿಂಗ್ ಜೊತೆ ಕೆಲಸ ಮಾಡಿದ್ದೆ ಅದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಐಸಿಡಬ್ಲ್ಯೂಎ ಅಧ್ಯಕ್ಷ ಸುರೇಶ್ ಗುಪ್ತ ಹೇಳಿದ್ದಾರೆ.

ಮಿಕಾ ಸಿಂಗ್ ಜೊತೆಗೆ ಒಟ್ಟು 14 ಜನರನ್ನು ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಿಕ ಸಿಂಗ್ ಬರೋಬ್ಬರಿ ಒಂದು ಕೋಟಿ ಚಾರ್ಜ್ ಮಾಡಿದ್ದಾರೆ. ಕರಾಚಿ ಮಾತ್ರವಲ್ಲದೆ ಲಾಹೋರ್ ಮತ್ತು ಇಸ್ಲಮಬಾದ್ ನಲ್ಲಿಯೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಲ್ಲಿಯೂ ಬಾಗಿಯಾಗಲಿದ್ದಾರೆ. ಹಾಗಾಗಿ ಮಿಕ ಸಿಂಗ್ ಗೆ ಸುಮಾರು 30 ದಿನಗಳು ವೀಸಾ ನೀಡಲಾಗಿದೆಯಂತೆ.

English summary
Bollywood singer Mika Singh banned by All India Cine workers Association for performed in Pakistan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X