For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕ ಮಿಕಾ ಸಿಂಗ್ ಮ್ಯಾನೇಜರ್ ಸೌಮ್ಯ ಆತ್ಮಹತ್ಯೆ

  |

  ಬಾಲಿವುಡ್ ನ ಖ್ಯಾತ ಗಾಯಕ, ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದ ಮಿಕಾ ಸಿಂಗ್ ಮತ್ತೆ ಸುದ್ದಿಯಾಗಿದ್ದಾರೆ. ಮಿಕಾ ಸಿಂಗ್ ಮ್ಯಾನೇಜರ್ ಸೌಮ್ಯ ಜೊಹೆಬ್ ಖಾನ್ ಶವವಾಗಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮಿಕಾ ಸಿಂಗ್ ಅಂಧೇರಿ ಸ್ಟೂಡಿಯೋದಲ್ಲಿ ಸೌಮ್ಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ.

  ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಯ್ತು ಯುವ ಗಾಯಕರ ಸಂಖ್ಯೆ | Sandalwood | Songers | Filmibeat Kannada

  ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟಿರ ಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿದ್ದಾರೆ. ಸೌಮ್ಯಾ ಖಾನ್ ಅಂಧೇರಿ ಸ್ಟೂಡಿಯೋದ ಮೊದಲ ಮಹಡಿಯಲ್ಲಿ ವಾಸವಿದ್ದರು. ಎಷ್ಟು ಸಮಯವಾದರು ಮನೆಯಿಂದ ಹೊರಬಾರದ ಕಾರಣ ಕೆಲಸದವರು ಹೋಗಿ ನೋಡಿದಾಗ ಸೌಮ್ಯ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಮಲಗಿದ್ದರಂತೆ. ನಂತರ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಗಲೆ ಸೌಮ್ಯ ಮೃತಪಟ್ಟಿದ್ದರು ಎಂದು ಪೋಲಿಸರು ಹೇಳಿದ್ದಾರೆ.

  'ಕಿಶೋರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ನಟ ಶಾರುಖ್ ಭಾವುಕ ನುಡಿ'ಕಿಶೋರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ನಟ ಶಾರುಖ್ ಭಾವುಕ ನುಡಿ

  ಮೂಲಗಳ ಪ್ರಕಾರ ಸೌಮ್ಯ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಾಗುತ್ತಿದೆ. ಕುಟುಂಬದ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿದ್ದರು, ಅಲ್ಲದೆ ಒಬ್ಬರೆ ವಾಸವಿದ್ದರು. ಅತಿಯಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಗಾಯಕ ಮಿಕಾ ಸಿಂಗ್ ಸೌಮ್ಯಾ ಆತ್ಮಕ್ಕೆ ಶಾಂತಿ ಕೋರಿದ್ದಾರೆ. "ಈ ವಿಚಾರವನ್ನು ಹೇಳಲು ತುಂಬ ದಃಖವಾಗುತ್ತಿದೆ. ಸೌಮ್ಯಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಅಧ್ಬುತವಾದ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ" ಎಂದು ಬರೆದುಕೊಂಡಿದ್ದಾರೆ.

  ಸೌಮ್ಯ ಖಾನ್ ಮೃತದೇಹವನ್ನು ಪಂಜಾಬ್ ನಲ್ಲಿರುವ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪಂಜಾಬ್ ನಲ್ಲಿ ಸೌಮ್ಯ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  English summary
  Bollywood famous Singer Mikha Singh Manager Sowmya found dead. Police suspected that she died of drug overdose.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X