ಕದ್ದು ಮುಚ್ಚಿ ಮದುವೆಯಾಗಿದ್ದ ಖ್ಯಾತ ಗಾಯಕಿ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 08 ವರ್ಷದ ದಾಂಪತ್ಯ !

ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಗಿಯಾಗುತ್ತಿದ್ದಾರೆ.

ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.

Singer Monali Thakur s Marriage on the Rocks The Instagram Clue Sparking Divorce Rumours

ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್‌ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಈ ಸಾಲಿಗೆ ಈಗ ''ಮೊನಾಲಿ ಠಾಕೂರ್'' ಕೂಡ ಸೇರಿಕೊಂಡಿದ್ದಾರೆ.

ಹೌದು, ಮೊನಾಲಿ ಠಾಕೂರ್.. ಭಾರತದ ಪ್ರಖ್ಯಾತ ಗಾಯಕಿ. ಬೆಂಗಾಲಿ ಚಿತ್ರ ''ಸಜೋನಿ ಅಮರ್ ಸೊಹಾಗ್'' ಚಿತ್ರದ ಮೂಲಕ ಹಾಡುಗಾರಿಕೆಯನ್ನು ಶುರು ಮಾಡಿದ ಮೊನಾಲಿ ಕೇವಲ ಬೆಂಗಾಲಿ ಮಾತ್ರ ಅಲ್ಲ ಹಿಂದಿಯಲ್ಲಿ ಕೂಡ ಹಲವು ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ''ಧಮ್ ಲಗಾ ಕೇ ಐಸಾ'' ಚಿತ್ರದ ''ಮೋಹ್ ಮೋಹ್ ಕೇ ಧಾಗೆ'' ಹಾಡು ಇವತ್ತು ಕೂಡ ಹಲವರ ನೆಚ್ಚಿನ ಗೀತೆ. ಈ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದರು ಮೊನಾಲಿ ಠಾಕೂರ್.

ಇಂಥಾ ಮೊನಾಲಿ ಠಾಕೂರ್ 2017ರಲ್ಲಿ ''ಫಾರಿನ್'' ಚೆಲುವ ''ಮೈಕ್ ರಿಕ್ಟರ್'' ಅವರನ್ನು ಮುಂಬೈನಲ್ಲಿ ಮದುವೆ ಆಗಿದ್ದರು. ತುಂಬಾನೇ ಗೌಪ್ಯವಾಗಿ ನಡೆದಿದ್ದ ಮದುವೆ ಇದು. ತಮ್ಮ ಮದುವೆ ವಿಚಾರವನ್ನು ಮುಚ್ಚಿಡುವ ಪ್ರಯತ್ನವನ್ನು ಕೂಡ ಮೊನಾಲಿ ಮಾಡಿದ್ದರಾದರೂ ಅಷ್ಟರಲ್ಲಿ ಅವರ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣದ ಪ್ರವೀಣರು ಮೊನಾಲಿ ಮದುವೆಯಾದ ವಿಚಾರವನ್ನು ಪತ್ತೆ ಹಚ್ಚಿದ್ದರು.

ಹೀಗೆ 2017ರಲ್ಲಿ ಮದುವೆಯಾದ ಮೊನಾಲಿ ಸದ್ಯ ತಮ್ಮ ದಾಂಪತ್ಯಕ್ಕೆ ಗುಡ್ ಬೈ ಹೇಳಲು ಮುಂದಾದಂತೆ ಇದೆ. ಇದರ ಮುನ್ಸೂಚನೆ ಎನ್ನುವಂತೆ ಮೊನಾಲಿ ಸದ್ಯ ತಮ್ಮ ಗಂಡ ಮೈಕ್ ರಿಕ್ಟರ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇಷ್ಟೇ ಅಲ್ಲ ಫೋಟೊಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ.

Singer Monali Thakur s Marriage on the Rocks The Instagram Clue Sparking Divorce Rumours

ಇನ್ನು ಮೊನಾಲಿ ಅವರನ್ನು ಮೈಕ್ ರಿಕ್ಟರ್ ತಮ್ಮ ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ್ದಾರಾ..? ಇಲ್ವಾ..? ಗೊತ್ತಿಲ್ಲ. ಯಾಕೆಂದರೆ.. ಮೈಕ್ ತಮ್ಮ ಖಾತೆಯನ್ನು ಪ್ರೈವೇಟ್ ಮಾಡಿದ್ದಾರಾದರೂ,ಇನ್‌ಸ್ಟಾಗ್ರಾಮ್‌ ಹಲವು ತಾರೆಯರ ಡಿವೋರ್ಸ್‌ನ ಸುಳಿವನ್ನು ಈ ಹಿಂದೆ ನೀಡಿದೆ. ಈ ಹಿನ್ನೆಲೆ.. ''ಟೈಮ್ಸ್ ಆಫ್ ಇಂಡಿಯಾ'' ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು ನಿಜಾ, ಸರಿಯಾದ ಸಮಯಕ್ಕೆ ಮೊನಾಲಿ ಈ ವಿಚಾರವನ್ನು ಅಧಿಕೃತವಾಗಿ ಹೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯನ್ನು ಮಾಡಿದೆ.

ಅಂದ್ಹಾಗೇ ಮೈಕ್ ರಿಕ್ಟರ್ ವಾಸ ಮಾಡುವುದು ಸ್ವಿಜರ್‌ಲ್ಯಾಂಡ್‌ನಲ್ಲಿ. ಮೊನಾಲಿ ತಮ್ಮ ಬದುಕಿನ ಹೆಚ್ಚು ಸಮಯ ಕಳೆಯುವುದು ಭಾರತದಲ್ಲಿ. ಇಲ್ಲಿ ಹಾಡು..ಸಂಗೀತ ಕಾರ್ಯಕ್ರಮ..ಎಂದು ಮೊನಾಲಿ ಬ್ಯುಸಿಯಾಗಿರುತ್ತಾರೆ. ಈ ಸಪ್ತಸಾಗರಗಳ ಅಂತರವೇ ಮೈಕ್ ರಿಕ್ಟರ್ ಮತ್ತು ಮೊನಾಲಿ ಠಾಕೂರ್ ಸಂಬಂಧ ಮುರಿದು ಬೀಳಲು ಪ್ರಮುಖ ಕಾರಣ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯನ್ನು ಮಾಡಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊನಾಲಿ ಠಾಕೂರ್ ಆಗಲಿ ಅಥವಾ ಮೈಕ್ ರಿಕ್ಟರ್ ಆಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮೌನಂ ಸಮ್ಮತಿ ಲಕ್ಷಣಂ ಆಗಿರಬಹುದಾದರೂ ಶೀಘ್ರದಲ್ಲಿಯೇ ಈ ವಿಚಾರದ ಕುರಿತು ಮೊನಾಲಿ ಮಾತನಾಡುವ ಸಾಧ್ಯತೆಗಳಿವೆ.

More from Filmibeat

English summary
Fans are left wondering if all is well in Monali Thakur's marriage to Maik Richter. The 'Moh Moh Ke Dhaage' singer's recent unfollow on social media has sparked a frenzy of divorce speculation.
Read more about: divorce singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X