For Quick Alerts
  ALLOW NOTIFICATIONS  
  For Daily Alerts

  ಪ್ರೀತಿ ವಿಷಯ ಬಹಿರಂಗಗೊಳಿಸಿದ ಗಾಯಕಿ ನೇಹಾ ಕಕ್ಕರ್

  |

  ಖ್ಯಾತ ಗಾಯಕಿ ನೇಹಾ ಕಕ್ಕರ್ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ತಾವು ಪ್ರೀತಿಸುತ್ರಿರುವ ಹುಡುಗನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ನೇಹಾ ಕಕ್ಕರ್.

  ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಕಕ್ಕರ್, ಮತ್ತೊಬ್ಬ ಯುವ ಗಾಯಕನಿಗೇ ಮನಸು ಕೊಟ್ಟಿದ್ದಾರೆ. ಗಾಯಕ ರೋಹನ್‌ಪ್ರೀತ್ ಸಿಂಗ್ ಜೊತೆ ಪ್ರೀತಿಯಲ್ಲಿದ್ದಾರೆ ನೇಹಾ ಕಕ್ಕರ್.

  'ಈಕೆಯೇ ನನ್ನ ಜೀವನ' ಎಂದು ರೋಹನ್ ಪ್ರೀತ್ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದರೆ, 'ಐ ಲವ್ ಯೂ' ಎಂದು ನೇಹಾ ಕಕ್ಕರ್ ಪೋಸ್ಟ್ ಹಾಕಿದ್ದಾರೆ. ಇಬ್ಬರಿಗೂ ಬಾಲಿವುಡ್ ಗಾಯಕರು, ಸಂಗೀತ ನಿರ್ದೇಶಕರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.

  ನೇಹಾ ಕಕ್ಕರ್ ಹಾಗೂ ಉದಿತ್ ನಾರಾಯಣ್ ಪುತ್ರ ಆದಿತ್ಯಾ ನಾರಾಯಣ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿತ್ತು. ಇಬ್ಬರೂ ಶೀಘ್ರದಲ್ಲಿಯೇ ಮದುವೆ ಸಹ ಆಗಲಿದ್ದಾರೆ ಎನ್ನಲಾಗಿತ್ತು. ರಿಯಾಲಿಟಿ ಶೋ ಒಂದರಲ್ಲಿ ಇಬ್ಬರಿಗೂ ತಮಾಷೆ ಮದುವೆ ಸಹ ಮಾಡಲಾಗಿತ್ತು.

  ಆದರೆ ಅಚಾನಕ್ಕಾಗಿ ನೇಹಾ ಕಕ್ಕರ್ ತಮ್ಮ ಬಾಯ್‌ಫ್ರೆಂಡ್ ರೋಹನ್ ಪ್ರೀತ್ ಎಂದು ಹೇಳಿರುವುದು ಕೆಲವರಲ್ಲಿ ಆಶ್ಚರ್ಯ ಸಹ ಉಂಟು ಮಾಡಿದೆ.

  ಮೇಕಪ್ ಇಲ್ಲದೆ ಬಂದು ಒಂದೊಳ್ಳೆ ಸಂದೇಶ ಕೊಟ್ಟ Madhubala | Filmibeat Kannada

  ನೇಹಾ ಕಕ್ಕರ್ ಬಾಲಿವುಡ್‌ನ ಖ್ಯಾತ ಗಾಯಕಿ ಆಗಿದ್ದಾರೆ. 'ಮೇರಿ ಮಾ' ಎಂಬ ಹಾಡಿನ ಮೂಲಕ ಖ್ಯಾತಿ ಗಳಿಸಿದ ನೇಹಾ ಆ ನಂತರ ದಿಲ್‌ಬರಾ ಸೇರಿದಂತೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.

  English summary
  Singer Neha Kakkar is in relation with young singer Rohanpreet Singh. Both opened up about their relationship in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X