For Quick Alerts
  ALLOW NOTIFICATIONS  
  For Daily Alerts

  ರಾನು ಮೊಂಡಲ್ ಮೇಕಪ್ ಫೋಟೋ ಫೇಕ್: ಬೇಸರ ವ್ಯಕ್ತಪಡಿಸಿದ ಮೇಕಪ್ ಆರ್ಟಿಸ್ಟ್

  |

  'ತೇರಿ..ಮೇರಿ..' ಹಾಡಿನ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿ ಸಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಗಾಯಕಿ ರಾನು ಮೊಂಡಾಲ್, ಇತ್ತೀಚಿಗೆ ಓವರ್ ಮೇಕಪ್ ವಿಚಾರವಾಗಿ ಟ್ರೋಲಿಗರಿಗೆ ಆಹಾರವಾಗಿದ್ದರು. ರಾನು ಮೊಂಡಲ್ ಓವರ್ ಮೇಕಪ್ ಫೋಟೋಗಳು ತರಹೇವಾರಿ ರೀತಿಯಲ್ಲಿ ಟ್ರೋಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ.

  ರಾನು ಮೊಂಡಲ್ ಮೇಕಪ್ ಮಾಡಿಕೊಂಡಿದ್ದು 'ಈ' ಕಾರಣಕ್ಕೆ! ಶಾಕ್ ಆಗ್ಬೇಡಿ!ರಾನು ಮೊಂಡಲ್ ಮೇಕಪ್ ಮಾಡಿಕೊಂಡಿದ್ದು 'ಈ' ಕಾರಣಕ್ಕೆ! ಶಾಕ್ ಆಗ್ಬೇಡಿ!

  ಸಂಪೂರ್ಣವಾಗಿ ಬದಲಾದ ರಾನು ಮೊಂಡಲ್ ನೋಡಿ ನಟ್ಟಿಗರು ಬೆರಗಾಗಿದ್ದಾರೆ. ಓವರ್ ಮೇಕಪ್, ಹೆಲಂಗಾ, ರ್ಯಾಂಪ್ ವಾಕ್, ಹೀಗೆ ಏಕಾಏಕಿ ಸ್ಟೈಲೀಶ್ ಆದ ರಾನು ನೋಡಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುತ್ತಿದ್ದರು. ಅಲ್ಲದೆ ರಾನುಗೆ ಈ ರೀತಿ ಮೇಕಪ್ ಮಾಡಿದ ಮೇಕಪ್ ಆರ್ಟಿಸ್ಟ್ ಯಾರು ಎನ್ನುವ ಹುಡುಕಾಟದಲ್ಲಿ ಇದ್ದರು. ಆದರೀಗ ಈ ಬಗ್ಗೆ ಮೇಕಪ್ ಆರ್ಟಿಸ್ಟ್ ಮೌನ ಮುರಿದು ಇದು ಫೇಕ್ ಮೇಕಪ್ ಫೋಟೋ ಎಂದು ಸ್ಪಷ್ಟಪಡಿಸಿದ್ದಾರೆ.

  'ಸಂಧ್ಯಾಸ್ ಮೇಕ್ ಓವರ್'ನ ಮೇಕಪ್ ಆರ್ಟಿಸ್ಟ್

  'ಸಂಧ್ಯಾಸ್ ಮೇಕ್ ಓವರ್'ನ ಮೇಕಪ್ ಆರ್ಟಿಸ್ಟ್

  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರಾನು ಫೋಟೋ ಫೇಕ್ ಎಂದು ಹೇಳಿ ರಿಯಲ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಉತ್ತರ ಪ್ರದೇಶದ ಪ್ರಸಿದ್ಧ ಮೇಕಪ್ ಆರ್ಟಿಸ್ಟ್ 'ಸಂಧ್ಯಾಸ್ ಮೇಕ್ ಓವರ್'ನವರು ರಾನು ಮೊಂಡಲ್ ಗೆ ಮೇಕಪ್ ಮಾಡಿದ್ದಾರೆ. ಅವರು ಮಾಡಿದ ಮೇಕಪ್ ಸಹಜವಾಗಿಯೆ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ರಾನು ಮೇಕಪ್ ಫೋಟೋವೆ ಬೇರೆ.

  ಎಡಿಟೆಡ್ ಫೋಟೋ ವೈರಲ್

  ಎಡಿಟೆಡ್ ಫೋಟೋ ವೈರಲ್

  ರಾನು ಮೇಕಪ್ ಫೋಟೋವನ್ನು ಯಾರೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರಂತೆ. ರಾನು ಮಾಡಿಕೊಂಡಿದ್ದ ಮೇಕಪ್ ಗೆ ಮತ್ತಷ್ಟು ಮೇಕ್ ಓವರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಈ ಎಡಿಟೆಡ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರು ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡಿ ಹಾಸ್ಯ ಮಾಡಿದ್ದಾರೆ. ಈ ಬಗ್ಗೆ ಮೇಕಪ್ ಅರ್ಟಿಸ್ಟ್ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

  ರಾನು ಮೊಂಡಲ್ ಹೊಸ ಅವತಾರ ಸಖತ್ ವೈರಲ್: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್ರಾನು ಮೊಂಡಲ್ ಹೊಸ ಅವತಾರ ಸಖತ್ ವೈರಲ್: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

  ಇನ್ನೊಬ್ಬರ ಭಾವನೆಗಳನ್ನು ನೋವಿಸಬೇಡಿ

  ಇನ್ನೊಬ್ಬರ ಭಾವನೆಗಳನ್ನು ನೋವಿಸಬೇಡಿ

  "ನೀವು ಈ ಫೋಟೋದಲ್ಲಿ ವ್ಯತ್ಯಾಸ ಗುರುತಿಸ ಬಹುದು. ನಾವು ಮಾಡಿದ ಮೇಕಪ್ ಮತ್ತು ಎಡಿಟ್ ಮಾಡಿದ ನಕಲಿ ಫೋಟೋ ಯಾವುದು ಅಂತ. ಎಲ್ಲಾ ಟ್ರೋಲ್ ಮತ್ತು ಹಾಸ್ಯಗಳು ನಮ್ಮನ್ನು ನಗಿಸುತ್ತವೆ. ಆದರೆ ಇನ್ನೊಬ್ಬರ ಭಾವನೆಗಳನ್ನು ಅಷ್ಟೆ ನೋವಿಸುತ್ತೆ. ಆದರೆ ಇದು ಒಳ್ಳೆಯದಲ್ಲ. ಖಂಡಿತವಾಗಿ ನೀವು ನಿಜ ಯಾವುದು ಎಂದು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾವು ಭಾವಿಸಿದ್ದೇವೆ. ನಾವು ಕೇಳುವುದು ಅಷ್ಟೆ" ಎಂದು ಹೇಳಿದ್ದಾರೆ. ಇದರ ಜೊತೆಗೆ ರಾನು ಮೊಂಡಲ್ ನಿಜವಾದ ಮೇಕಪ್ ವಿಡಿಯೋವನ್ನು ಶೇರ್ ಮಾಡಿದ್ದಾರೆ.

  ಅಭಿಮಾನಿ ಸೆಲ್ಫಿ ಕೇಳಿದ್ರೆ ರಂಪ ಮಾಡಿದ ರಾನು ಮೊಂಡಲ್ಅಭಿಮಾನಿ ಸೆಲ್ಫಿ ಕೇಳಿದ್ರೆ ರಂಪ ಮಾಡಿದ ರಾನು ಮೊಂಡಲ್

  ಚರ್ಚೆಗೆ ಕಾರಣವಾಗಿದ್ದ ರಾನು ವರ್ತನೆ

  ಚರ್ಚೆಗೆ ಕಾರಣವಾಗಿದ್ದ ರಾನು ವರ್ತನೆ

  ದಿಢೀರ್ ಅಂತ ಸ್ಟಾರ್ ಆದ ರಾನು ಮೊಂಡಲ್ ತಮ್ಮ ವರ್ತನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಮಾರ್ಕೆಟ್ ವೊಂದಲ್ಲಿ ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಬಂದ ಅಭಿಮಾನಿಯನ್ನು 'ಡೋಂಟ್ ಟಚ್ ಮಿ' ಅಂತ ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲೆ ಈಗ ಫ್ಯಾಶನ್ ಲೋಕಕ್ಕೂ ರಾನು ಮೊಂಡಲ್ ಕಾಲಿಟ್ಟಿದ್ದು, ಅಲ್ಲದೆ ಓವರ್ ಮೇಕಪ್ ಮಾಡಿಕೊಂಡ ವಿಚಾರಗಳು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  English summary
  Social media sensational singer Ranu Mondal makeup photo is fake. makeup artist clarified about fake photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X