For Quick Alerts
  ALLOW NOTIFICATIONS  
  For Daily Alerts

  ರಾನು ಮೊಂಡಲ್ ಮೇಕಪ್ ಮಾಡಿಕೊಂಡಿದ್ದು 'ಈ' ಕಾರಣಕ್ಕೆ! ಶಾಕ್ ಆಗ್ಬೇಡಿ!

  |
  ಮತ್ತೆ ಟ್ರೋಲಿಗರಿಗೆ ಆಹಾರವಾದ ರಾನು ಮಂಡಲ್ | Filmibeat Kannada

  ಇಂಟರ್ ನೆಟ್ ಮತ್ತು ಸೋಷಿಯಲ್ ಮೀಡಿಯಾ ಯಾರನ್ನ ಬೇಕಾದರೂ ದೊಡ್ಡ 'ಸೆಲೆಬ್ರಿಟಿ' ಮಾಡುತ್ತೆ ಅನ್ನೋದಕ್ಕೆ ಸ್ಪಷ್ಟ ನಿದರ್ಶನ ರಾನು ಮೊಂಡಲ್.!

  ಕೆಲವೇ ಕೆಲವು ದಿನಗಳ ಹಿಂದಿನ ಮಾತು... ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ಸ್ಟೇಷನ್ ನಲ್ಲಿ 'ಏಕ್ ಪ್ಯಾರ್ ನಗ್ಮಾ ಹೇ' ಹಾಡನ್ನ ಬಡ ಗಾಯಕಿ ರಾನು ಮೊಂಡಲ್ ಹಾಡುತ್ತಿದ್ದರು. ಅದನ್ನ ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದೇ ತಡ.. ರಾತ್ರೋ ರಾತ್ರಿ ರಾನು ಮೊಂಡಲ್ ಫೇಮಸ್ ಆಗ್ಬಿಟ್ಟರು. ಅಲ್ಲಿಂದ, ಏಕ್ದಂ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ರಾನು ಮೊಂಡಲ್ ಗೆ ಸಿಕ್ಕೇಬಿಡ್ತು.

  ರಾನು ಮೊಂಡಲ್ ಗಾನಸುಧೆಗೆ ಬೆರಗಾದ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಮಿಯಾ ತಮ್ಮ ಚಿತ್ರದಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ಒಂದ್ಕಡೆ ಅದೃಷ್ಟ, ಇನ್ನೊಂದು ಕಡೆ ಅತಿರೇಕದ ವರ್ತನೆಯಿಂದ ಸದ್ದು ಮಾಡುತ್ತಿರುವ ರಾನು ಮೊಂಡಲ್ ಮೇಕಪ್ ಮಾಡಿಕೊಂಡಿರುವ ಫೋಟೋವೊಂದು ನಿನ್ನೆ ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಅಸಲಿಗೆ, ರಾನು ಮೊಂಡಲ್ ಅಷ್ಟೊಂದು ಮೇಕಪ್ ಮಾಡಿಕೊಂಡಿದ್ದು ಯಾಕೆ ಅಂತೀರಾ.. ಅದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ, ಓದಿರಿ...

  ಕ್ಯಾಟ್ ವಾಕ್ ಮಾಡಿದ ರಾನು ಮೊಂಡಲ್.!

  ಕ್ಯಾಟ್ ವಾಕ್ ಮಾಡಿದ ರಾನು ಮೊಂಡಲ್.!

  ರಾನು ಮೊಂಡಲ್ 'ಅತಿ' ಎನಿಸುವಷ್ಟು ಮೇಕಪ್ ಮಾಡಿಕೊಂಡಿದ್ದು ಉತ್ತರ ಪ್ರದೇಶದಲ್ಲಿರುವ ಖಾನ್ ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕಾಗಿ. ಇದೇ ಕಾರ್ಯಕ್ರಮದಲ್ಲಿ ರಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿದ್ದಾರೆ ರಾನು ಮೊಂಡಲ್. ಪೀಚ್ ಬಣ್ಣದ ಲೆಹಂಗಾ ಧರಿಸಿದ್ದ ರಾನು ಮೊಂಡಲ್ ಪ್ರಿಯಾಂಕಾ ಛೋಪ್ರಾ ಅಭಿನಯದ 'ಫ್ಯಾಶನ್' ಚಿತ್ರದ ಹಾಡಿಗೆ ರಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

  ರಾನು ಮೊಂಡಲ್ ಹೊಸ ಅವತಾರ ಸಖತ್ ವೈರಲ್: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್ರಾನು ಮೊಂಡಲ್ ಹೊಸ ಅವತಾರ ಸಖತ್ ವೈರಲ್: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

  ಸಿಕ್ಕಾಪಟ್ಟೆ ಟ್ರೋಲ್ ಆದ ರಾನು ಮೊಂಡಲ್

  ಸಿಕ್ಕಾಪಟ್ಟೆ ಟ್ರೋಲ್ ಆದ ರಾನು ಮೊಂಡಲ್

  ಅಷ್ಟಕ್ಕೂ ರಾನು ಮೊಂಡಲ್ ಗೆ ಮೇಕಪ್ ಮಾಡಿದ್ದು ಓರ್ವ ಮೇಕಪ್ ಆರ್ಟಿಸ್ಟ್. ಆದರೂ, ಓವರ್ ಮೇಕಪ್ ಮಾಡಿಕೊಂಡ ರಾನು ಮೊಂಡಲ್ ಫೋಟೋ ವೈರಲ್ ಆಗುತ್ತಿದ್ದಂತೆ ಟ್ರೋಲಿಗರಿಗೆ ಆಹಾರವಾಯಿತು. ಭಿನ್ನ ವಿಭಿನ್ನ ಮೀಮ್ ಗಳ ಮೂಲಕ ಟ್ರೋಲಿಗರು ರಾನು ಮೊಂಡಲ್ ಕಾಲೆಳೆದಿದ್ದಾರೆ.

  ಅಭಿಮಾನಿ ಸೆಲ್ಫಿ ಕೇಳಿದ್ರೆ ರಂಪ ಮಾಡಿದ ರಾನು ಮೊಂಡಲ್ಅಭಿಮಾನಿ ಸೆಲ್ಫಿ ಕೇಳಿದ್ರೆ ರಂಪ ಮಾಡಿದ ರಾನು ಮೊಂಡಲ್

  ಜೋಕರ್ ರಾನು ಮೊಂಡಲ್.!

  ಜೋಕರ್ ರಾನು ಮೊಂಡಲ್.!

  ರಾನು ಮೊಂಡಲ್ ಬಗ್ಗೆ ಹೇಗೆಲ್ಲಾ ಟ್ರೋಲ್ ಆಗುತ್ತಿದೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್ ಇದೀಗ ಜೋಕರ್ ಆಗಿದ್ದಾರಾ.? ಈ ಒಂದು ಮೀಮ್ ನಲ್ಲಿ ವಿವರಿಸಲು ಸಾಧ್ಯವಾಗದ ಹಲವು ಅರ್ಥಗಳಿವೆ.

  ಚರ್ಚೆಯೋ ಚರ್ಚೆ.!

  ಚರ್ಚೆಯೋ ಚರ್ಚೆ.!

  ದಿಢೀರ್ ಅಂತ ಸ್ಟಾರ್ ಆದ ರಾನು ಮೊಂಡಲ್ ತಮ್ಮ ವರ್ತನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಮಾರ್ಕೆಟ್ ವೊಂದಲ್ಲಿ ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಬಂದ ಅಭಿಮಾನಿಯನ್ನು 'ಡೋಂಟ್ ಟಚ್ ಮಿ' ಅಂತ ರಾನು ಮೊಂಡಲ್ ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಫ್ಯಾಶನ್ ಲೋಕಕ್ಕೂ ರಾನು ಮೊಂಡಲ್ ಕಾಲಿಟ್ಟಿದ್ದು, ಆಕೆಯ ಕಾಲನ್ನ ನೆಟ್ಟಿಗರು ಎಳೆಯುತ್ತಿದ್ದಾರೆ.

  English summary
  Singer Ranu Mondal walks on the ramp with heavy makeup.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X