ರಾನು ಮೊಂಡಲ್ ಹೊಸ ಅವತಾರ ಸಖತ್ ವೈರಲ್: ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್
ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತ, ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ ರಾನು ಮೊಂಡಲ್ ಫೋಟೋವೊಂದು ಸಖತ್ ವೈರಲ್ ಆಗಿದೆ. ರಾನು ಓವರ್ ಮೇಕಪ್ ಫೋಟೋ ವೈರಲ್ ಆಗಿದ್ದಲ್ಲದೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚಿಗೆ ರಾನು ಮೊಂಡಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾನು ಈಗ ಲೆಹಂಗ ಧರಿಸಿ, ಓವರ್ ಮೇಕಪ್ ಮಾಡಿಕೊಂಡು ಹಾಜರಾಗಿದ್ದರು. ರಾನು ಮೇಕ್ ಓವರ್ ಫೋಟೋ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಟ್ರೋಲ್ ಗಳು ಓಡಾಡುತ್ತಿವೆ. ಹಳೆ ರಾನು ಮಂಡೋಲ್ ಮತ್ತು ಸದ್ಯ ಮೇಕ್ ಓವರ್ ಆಗಿರುವ ರಾನು ಫೋಟೋಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಜಕ್ಕು ರಾನು ಮಂಡಲೇನಾ ಅಥವಾ ಫೋಟೋಶಾಪ್ ಮಾಡಿರುವುದಾ ಎಂದು ಕೇಳುತ್ತಿದ್ದಾರೆ.

ಇತ್ತೀಚಿಗೆ ಅಭಿಮಾನಿಯೊಬ್ಬರು ರಾನು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಾಗ, ಅಭಿಮಾನಿಯ ಜೊತೆ ರಾನು ನೆಡೆದುಕೊಂಡ ರೀತಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮುಟ್ಟಿ ಮಾತನಾಡಿಸಬೇಡಿ ಎಂದು ರಾನು ರೊಚ್ಚಿಗೆದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾನು ವರ್ತನೆ ಸಾರ್ವಜನಿಕವಾಗಿ ಭಾರಿ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೆ ರಾನು ಟ್ರೋಲಿಗರಿಗೆ ಆಹಾರವಾಗಿದ್ದಾರೆ.


Click it and Unblock the Notifications











