For Quick Alerts
  ALLOW NOTIFICATIONS  
  For Daily Alerts

  ತಾಯಿಯಾದ ಶ್ರೇಯಾ ಘೋಷಾಲ್: ಸಿಹಿ ಸುದ್ದಿ ನೀಡಿದ ಗಾಯಕಿಗೆ ಅಭಿನಂದನೆಗಳ ಮಳೆ

  |

  ಖ್ಯಾತ ಗಾಯಕಿ ಶ್ರೆಯಾ ಘೋಷಾಲ್ ತಾಯಿಯಾಗಿದ್ದಾರೆ. ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವಿಬ್ಬರೂ ಆರೋಗ್ಯದಿಂದಿದ್ದಾರೆ.

  ಸಂತಸದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಶ್ರೆಯಾ ಘೋಷಾಲ್, 'ದೇವರ ಆಶೀರ್ವಾದದಿಂದ ಇಂದು ಗಂಡು ಮಗು ಪ್ರಾಪ್ತಿಯಾಗಿದೆ' ಎಂದಿದ್ದಾರೆ.

  'ನಾನು ಎಂದೂ ಇಷ್ಟು ಭಾವುಕ ಆಗಿರಲಿಲ್ಲ. ಪತಿ ಶಿಲಾದಿತ್ಯ ಸೇರಿ ನನ್ನ ಕುಟುಂಬದವರೆಲ್ಲ ಅತೀವ ಖುಷಿಯಲ್ಲಿದ್ದೇವೆ. ನಿಮ್ಮ ಅಗಣಿತ ಆಶೀರ್ವಾದಗಳಿಗೆ ಧನ್ಯವಾದ' ಎಂದಿದ್ದಾರೆ ಶ್ರೆಯಾ.

  ಶ್ರೆಯಾ ಹಾಗೂ ಶಿಲಾದಿತ್ಯ ಅವರಿಗೆ ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ ಸಾಮಾಜಿಕ ಜಾಲತಾಣದಲ್ಲಿ. ನಟ, ನಟಿಯರು, ಗಾಯಕರು, ಸಂಗೀತ ನಿರ್ದೇಶಕರುಗಳು ಸಹ ಶ್ರೆಯಾ-ಶಿಲಾದಿತ್ಯ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್, 15 ಸಾವಿರಕ್ಕೂ ಹೆಚ್ಚು ಕಮೆಂಟ್ಸ್‌ ಶ್ರೆಯಾ ಅವರ ಪೋಸ್ಟ್‌ಗೆ ಫೇಸ್‌ಬುಕ್‌ನಲ್ಲಿ ಧಕ್ಕಿದೆ.

  ಶ್ರೆಯಾ ಹಾಗೂ ಶಿಲಾದಿತ್ಯ 2005 ರಲ್ಲಿ ವಿವಾಹವಾಗಿದ್ದರು. ಮದುವೆಗೆ ಮುನ್ನಾ ಇಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿದ್ದರು. ಮಾರ್ಚ್ 28 ರಂದು ತಾವು ತಾಯಿಯಾಗುತ್ತಿರುವುದಾಗಿ ಶ್ರೆಯಾ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದರು.

  Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada

  ಮಧುರ ಕಂಠದ ಶ್ರೆಯಾ ಘೋಷಾಲ್ ಅವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಾಯಕನಕ್ಕಾಗಿ ಶ್ರೆಯಾ ಪಡೆದಿದ್ದಾರೆ.

  English summary
  Famous singer Shreya Ghoshal blessed with baby boy. Congragulation messeges pouring on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X