For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ರಾಕ್ಷಸನ ಬೆಂಬಲಕ್ಕೆ ನಿಂತ ಸೋನು ನಿಗಮ್: ಗಾಯಕಿಯ ಆರೋಪ

  |

  ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಗಾಯಕಿ ಸೋನಾ ಮಹಾಪಾತ್ರ ಟ್ವಿಟ್ಟರ್‌ನಲ್ಲಿ ಬಹಿರಂಗವಾಗಿ ಆರೋಪ ಮಾಡಿದ್ದಾರೆ.

  ತಮ್ಮನ್ನು ತಾವು ಜಂಟಲ್‌ಮ್ಯಾನ್ ಎಂದು ಕರೆದುಕೊಳ್ಳುವ ಗಾಯಕ ಸೋನು ನಿಗಮ್, ಮೀಟೂ ಆರೋಪ ಹೊತ್ತ ಸಂಗೀತ ನಿರ್ದೇಶಕರ ಪರ ವಹಿಸಿ ಮಾತನಾಡಿದ್ದರು. ಲೈಂಗಿಕ ದೌರ್ಜನ್ಯ ಆರೋಪಿಗಳ ಪರ ವಕಾಲತ್ತು ವಹಿಸಿದ್ದರು ಎಂದಿದ್ದಾರೆ.

  ಗಾಯಕಿ ಸೋನು ಪಾತ್ರ ಕೆಲವು ತಿಂಗಳುಗಳ ಹಿಂದೆ ಮೀಟೂ ಅಭಿಯಾನ ನಡೆಯುತ್ತಿದ್ದಾಗ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಹಾಗೂ ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅದು ಭಾರಿ ವಿವಾದವಾಗಿತ್ತು.

  ನಿಖಿತಾ ಥೋಮರ್ ಬಗ್ಗೆ ಸೋನಾ ಮಹಾಪಾತ್ರ ಟ್ವೀಟ್

  ನಿಖಿತಾ ಥೋಮರ್ ಬಗ್ಗೆ ಸೋನಾ ಮಹಾಪಾತ್ರ ಟ್ವೀಟ್

  ಕೆಲವು ದಿನಗಳ ಹಿಂದೆ ತೌಸೀಫ್ ಎಂಬುವನಿಂದ ಹತ್ಯೆಯಾದ ಯುವತಿ ನಿಖಿತಾ ಥೋಮರ್ ಬಗ್ಗೆ ಟ್ವೀಟ್ ಮಾಡಿದ್ದ ಸೋನಾ ಮಹಾಪಾತ್ರ, 'ನಿಖಿತಾ, ತೌಸೀಫ್ ವಿರುದ್ಧ ದೂರು ನೀಡಿದ್ದಳು, ಎಚ್ಚರಿಕೆಯಿಂದಲೂ ಇದ್ದಳು ಆದರೂ ಸಹ ಪುರುಷ ದೌರ್ಜನ್ಯವನ್ನು ತಡೆಯಲಾಗಲಿಲ್ಲ' ಎಂದಿದ್ದಾರೆ.

  'ಆರೋಪ ಮಾಡಿದಾಗ ಸಾಕಷ್ಟು ಸಲಹೆಗಳು ಬರುತ್ತವೆ'

  'ಆರೋಪ ಮಾಡಿದಾಗ ಸಾಕಷ್ಟು ಸಲಹೆಗಳು ಬರುತ್ತವೆ'

  ಮುಂದುವರೆದು, ಮಹಿಳೆಯರು ದೌರ್ಜನ್ಯದ ಆರೋಪ ಮಾಡಿದಾಗ, 'ಇರಲಿ ಬಿಡು' 'ಇದನ್ನೆಲ್ಲಾ ದೊಡ್ಡದು ಮಾಡಬೇಡ', 'ಅದೇನು ದೊಡ್ಡ ವಿಷಯವೇ', 'ಪೊಲೀಸ್ ದೂರು ನೀಡು', 'ಕಾನೂನು ಬದ್ಧ ಹೋರಾಟ ಮಾಡು' ಎಂಬ ಸಲಹೆಗಳು ಬರುತ್ತವೆ ಆದರೆ ಅವು ಆಕೆಯನ್ನು ಬಲಹೀನಗೊಳಿಸಲು ನೀಡಿರುವ ಸಲಹೆಗಳಾಗಿರುತ್ತವೆ ಎಂದಿದ್ದಾರೆ ಸೋನಾ ಮಹಾಪಾತ್ರ.

  'ಲೈಂಗಿಕ ರಾಕ್ಷಸ ಅನು ಮಲ್ಲಿಕ್ ಅನ್ನು ಬೆಂಬಲಿಸಿದ ಸೋನು ನಿಗಮ್'

  'ಲೈಂಗಿಕ ರಾಕ್ಷಸ ಅನು ಮಲ್ಲಿಕ್ ಅನ್ನು ಬೆಂಬಲಿಸಿದ ಸೋನು ನಿಗಮ್'

  ನೇರವಾಗಿ ಸೋನು ನಿಗಂ ಹೆಸರು ಎತ್ತಿರುವ ಮಹಾಪಾತ್ರ, ನಾನು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, ಸೋನು ನಿಗಮ್, ಅನು ಮಲ್ಲಿಕ್ ಅನ್ನು ಬಹಿರಂಗವಾಗಿ ಬೆಂಬಲಿಸಿದರು. ಇನ್ನು ಕೈಲಾಶ್ ಖೇರ್ ಸರ್ಕಾರದ ಸಹಾಯದಿಂದಲೇ ಬಚಾವಾದರು ಎಂದಿದ್ದಾರೆ ಸೋನಾ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada
  ಸೋನಾ ಮಹಾಪಾತ್ರಗೆ ಕೊಲೆ ಬೆದರಿಕೆ

  ಸೋನಾ ಮಹಾಪಾತ್ರಗೆ ಕೊಲೆ ಬೆದರಿಕೆ

  ಕೆಲವು ದಿನಗಳ ಹಿಂದಷ್ಟೆ ಇದೇ ಸೋನಾ ಮಹಾಪಾತ್ರ, ಸಲ್ಮಾನ್ ಖಾನ್ ವಿರುದ್ಧವೂ ಸಿಡಿದೆದ್ದಿದ್ದರು. ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದು ಸಲ್ಮಾನ್ ಖಾನ್ ವಿರುದ್ಧ ಆಕ್ರೋಶಗೊಂಡು ಟ್ವೀಟ್ ಮಾಡಿದ್ದರು. ಸಲ್ಮಾನ್ ಅಭಿಮಾನಿಗಳು ಮಹಾಪಾತ್ರಗೆ ಕೊಲೆ ಬೆದರಿಕೆ ಸಹ ಹಾಕಿದ್ದರು.

  English summary
  Singer Sona Mahapatra slams Sonu Nigam for defending Anu Mallik. She accused Anu Mallik and Kailash Kher for sexual harassment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X