Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪದೇ ಪದೇ ಟೆಸ್ಟ್ ಮಾಡಿಸಿದರೂ ಕೊವಿಡ್ ಪಾಸಿಟಿವ್ ಬರುತ್ತಿದೆ': ಗಾಯಕ ಸೋನು ನಿಗಂ
ವಿಶ್ವದೆಲ್ಲೆಡೆ ಮತ್ತೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಓಮಿಕ್ರಾನ್ ಆತಂಕ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅದರಲ್ಲೂ ಬಾಲಿವುಡ್ ಮಂದಿ ಒಬ್ಬೊಬ್ಬರಾಗಿಯೇ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಸಾಲಿಗೆ ಈಗ ಗಾಯಕ ಸೋನು ನಿಗಂ ಕೂಡ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸೋನು ನಿಗಂ ಹಾಗೂ ಅವರ ಫ್ಯಾಮಿಲಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ.
ಬಹುಭಾಷೆಯ ಗಾಯಕ ಸೋನು ನಿಗಂ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಹಾಡಿದ್ದಾರೆ. ಎಲ್ಲಾ ಭಾಷೆಗಳಲ್ಲಿಯೂ ಸೋನು ನಿಗಂಗೆ ಅಪಾರ ಅಭಿಮಾನಿಗಳಿದ್ದಾರೆ. ದೇಶ-ವಿದೇಶದಲ್ಲಿ ಈ ಗಾಯಕ ಲೈವ್ ಶೋಗಳನ್ನು ನೀಡುತ್ತಾರೆ. ಹೀಗಾಗಿ ಸೋನು ನಿಗಂ ನಿನ್ನೆ (ಜನವರಿ 04) ತನಗೆ ಹಾಗೂ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿರುವುದನ್ನು ಸ್ಪಷ್ಟಪಡಿಸಿದ ಕೂಡಲೇ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಸೋನು ನಿಗಂಗೆ ಕೊರೊನಾ ಪಾಸಿಟಿವ್
ಕೊರೊನಾ ಮತ್ತೆ ಭಾರತದ ಸಿನಿಮಾ ತಾರೆಯರ ಮೇಲೆ ಸವಾರಿ ಮಾಡಲು ಶುರು ಮಾಡಿದೆ. ಅದಲ್ಲೂ ಬಾಲಿವುಡ್ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗ ಬಹುಭಾಷಾ ಗಾಯಕ ಸೋನು ನಿಗಂ, ಅವರ ಪತ್ನಿ ಮಧುರಿಮಾ ಮತ್ತು ಪುತ್ರನಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ (ಜನವರಿ 04) ಸ್ವತಃ ಸೋನು ನಿಗಂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, "ತಮ್ಮ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದ್ದು, ನಾವು ಕ್ವಾರಂಟೈನ್‌ನಲ್ಲಿ ಇದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ದುಬೈನಲ್ಲಿ ಸೋನು ನಿಗಂ ಕ್ವಾರಂಟೈನ್
ಗಾಯಕ ಸೋನು ನಿಗಂ ಸದ್ಯಕ್ಕೀಗ ದುಬೈನಲ್ಲಿದ್ದು, ಅಲ್ಲೇ ಕ್ವಾರಂಟೈನ್ ಆಗಿದ್ದಾರೆ. ಪುತ್ರ ನಿವಾನ್ ನಿಗಂ ದುಬೈನಲ್ಲಿ ಓದುತ್ತಿರುವುದರಿಂದ ಹೆಚ್ಚು ಸಮಯವನ್ನು ದುಬೈನಲ್ಲಿಯೇ ಕಳೆಯುತ್ತಾರೆ. ಆದರೆ, ಸೋನು ನಿಗಂ ಭುವನೇಶ್ವರ್‌ಗೆ ಶೋ ನೀಡಲು ಬರಬೇಕಿತ್ತು. ಕೊರೊನಾ ಸೋಂಕಿನಿಂದ ಆ ಶೋ ನಡೆಯುತ್ತಿಲ್ಲ. ಹೀಗಾಗಿ ಆಯೋಜಕರಿಗೆ ಗಾಯಕ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಸೂಪರ್ ಸಿಂಗರ್ ಸೀಸನ್ 3ನಲ್ಲೂ ಸೋನು ನಿಗಂ ಭಾಗವಹಿಸಬೇಕಿತ್ತು. ಅದು ಕೂಡ ಸಾಧ್ಯವಾಗುತ್ತಿಲ್ಲ.
ಪದೇ ಪದೆ ಟೆಸ್ಟ್ ಮಾಡಿಸಿದರೂ ಪಾಸಿಟಿವ್
ಸೋನು ನಿಗಂ ಸ್ವಯಂ ಪ್ರೇರಿತರಾಗಿ ಕೊವಿಡ್ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕಿ ಇರುವುದು ಪತ್ತೆಯಾಗಿದೆ. ಹೀಗಾಗಿ ಮತ್ತೆ ಟೆಸ್ಟ್ ಮಾಡಿಸಿದ್ದರು. ಆಗಲೂ ಕೊರೊನಾ ಸೋಂಕು ತಲುಲಿರುವುದು ಪತ್ತೆಯಾಗಿದೆ. " ನಾನು ಪದೇ ಪದೇ ಕೊರೊನಾ ಪರೀಕ್ಷೆ ಮಾಡಿಸಿದ್ದೆ, ಆದರೂ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ನನಗೆ ಅನಿಸುತ್ತೆ ಜನರು ಇದರೊಂದಿಗೆ ಬದುಕಬೇಕಾಗಿದೆ. ನನ್ನ ಕಂಠ ಕೂಡ ಚೆನ್ನಾಗಿದೆ. ನನ್ನಿಂದ ನಷ್ಟ ಅನುಭವಿಸಿದವರಿಗೆ ನಾನು ಕ್ಷಮೆ ಕೇಳುತ್ತೇನೆ. ಇದು ತುಂಬಾ ವೇಗವಾಗಿ ಹರಡುತ್ತಿದೆ.

ಕೆಲಸ ಕಳೆದುಕೊಂಡವರ ಮೇಲೆ ಅನುಕಂಪ
ಕೊರೊನಾದಿಂದ ಸಾಕಷ್ಟು ಜನರ ಬದುಕಿನ ಮೇಲೆ ಪರಿಣಾಮ ಬೀರಿದೆ. ಕೆಲಸ ಕಳೆದುಕೊಂಡು ಕಂಗಾಲಾಗಿರುವ ಜನರ ಮೇಲೆ ಸೋನು ನಿಗಂ ಅನುಕಂಪ ವ್ಯಕ್ತಪಡಿಸಿದ್ದಾರೆ. "ಈಗ ತಾನೇ ಕೆಲಸ ಆರಂಭ ಆಗುತ್ತಿದೆ. ಸಿನಿಮಾ ನಿರ್ಮಾಪಕರು, ಥಿಯೇಟರ್‌ನಲ್ಲಿ ಕೆಲಸ ಮಾಡುವವರು ಬಗ್ಗೆ ನೆನೆಸಿಕೊಂಡರೆ ನನಗೆ ಬೇಸರವಾಗುತ್ತದೆ. ಯಾಕಂದರೆ, ಕಳೆದ ಎರಡು ವರ್ಷಗಳಿಂದ ಕೆಲಸದ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆ ಇದೆ." ಎಂದು ಕೊನೆಯಲ್ಲಿ ಆಶಾಭಾವವನ್ನು ಸೋನು ನಿಗಂ ವ್ಯಕ್ತಪಡಿಸಿದ್ದಾರೆ.