»   » ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ಸುನಿಧಿ ಚೌಹಾಣ್

ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ಸುನಿಧಿ ಚೌಹಾಣ್

Posted By:
Subscribe to Filmibeat Kannada

ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ಸೋಮವಾರ ಸಂಜೆ ಮುಂಬೈನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮಿ ನೀಡಿದ್ದು, ಅಮ್ಮ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜನವರಿ 1, 2018ರಂದು ಸೋಮವಾರ ಸಂಜೆ 5.30ಕ್ಕೆ ಸುನಿಧಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯ ಭೂಪೇಂದ್ರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಗಾಯಕಿ ಸುನಿಧಿ ಚೌಹಾಣ್ ಹೊಸ ವರ್ಷದ ಸಂಭ್ರಮವನ್ನ ತಮ್ಮ ಮಗುವಿನ ಜೊತೆ ಸಂಭ್ರಮಿಸಿದ್ದಾರೆ.

Singer Sunidhi Chauhan

ಅಂದ್ಹಾಗೆ, ಸುನಿಧಿ ಚೌಹಾಣ್ ಮತ್ತು ನಿರ್ದೇಶಕ ಹಿತೇಶ್ ಸೋನಿಕ್ ಕಳೆದ ಐದು ವರ್ಷದ ಹಿಂದೆ ಮದುವೆ ಆಗಿದ್ದರು. ಇದೀಗ, ಮೊದಲ ಮಗುವನ್ನ ಖುಷಿಯಿಂದ ಬರಮಾಡಿಕೊಂಡಿದ್ದಾರೆ.

ಸುನಿಧಿ ಅವರು ಕೇವಲ ಗಾಯಕಿ ಮಾತ್ರವಲ್ಲ, ರಿಯಾಲಿಟಿ ಶೊಗಳನ್ನ ನಿರೂಪಣೆ ಮಾಡಿದ್ದಾರೆ. ಟಿವಿ ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ. ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 'ಶೀಲಾ ಕಿ ಜವಾನಿ', 'ರಬ್ ನೇ ಬನಾದೇ ಜೋಡಿ', ಸೇರಿದಂತೆ ಅನೇಕ ಹಾಡುಗಳು ಇವರ ಧ್ವನಿಯಲ್ಲಿ ಮೂಡಿದೆ.

English summary
Bollywood Singer Sunidhi Chauhan gave birth to her first child a boy in a hospital on Monday evening. Sunidhi and husband, music composer Hitesh Sonik, have been married for five years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X