Singham Again Box Office Day 2 ; ಹೊಸ ದಾಖಲೆಯತ್ತ ಅಜಯ್ ದೇವಗನ್ ಚಿತ್ತ, ಎರಡನೇ ದಿನ ಸಿಂಗಂ ಗಳಿಸಿದ್ದೆಷ್ಟು ?
ಬಾಲಿವುಡ್‌ಗೆ ದೀಪಾವಳಿ ಮೊದಲಿಂದ ತುಂಬಾನೇ ಲಕ್ಕಿ. ಈ ದಿನದಂದು ಬಿಡುಗಡೆಯಾದ ಬಹುತೇಕ ಚಿತ್ರಗಳು ಗೆದ್ದಿವೆ. ಇನ್ನೂ ಕೆಲವು ಐತಿಹಾಸಿಕ ದಾಖಲೆಯನ್ನು ಕೂಡ ಬರೆದಿವೆ. ಈ ಸಾಲಿಗೆ ಈಗ ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಕೂಡ ಸೇರಿಕೊಂಡಿದೆ.
ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಸಿಂಗಂ ಅಗೇನ್ ಚಿತ್ರಕ್ಕೆ ಕುಬೇರ ವರ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುತ್ತಿದೆ. ಮೊದಲ ದಿನ ಭಾರತದಲ್ಲಿ ₹43.50 ಕೋಟಿ ಹಣ ಕೊಳ್ಳೆ ಹೊಡೆದ ಸಿಂಗಂ ಅಗೇನ್ ಎರಡನೇ ದಿನ ಅಂದರೆ ನಿನ್ನೆ ₹43.50 ಕೋಟಿ ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ಚಿತ್ರ ₹85 ಕೋಟಿ ಗಳಿಸಿದೆ. ಇನ್ನೂ ಇಂದು ಈ ಚಿತ್ರದ ಗಳಿಕೆ ಮೊದಲೆರಡು ದಿನಕ್ಕಿಂತ ಹೆಚ್ಚಾಗುನ ನಿರೀಕ್ಷೆ ಬಾಲಿವುಡ್ ಪಂಡಿತರಿಗಿದೆ. ಚಿತ್ರದ ಒಟ್ಟಾರೆ ಗಳಿಕೆ ಇಂದು ₹125 ಕೋಟಿಯನ್ನು ತಲುಪುವ ಭರವಸೆ ಕೂಡ ಇದೆ.

ಇನ್ನೂ ಅಜಯ್ ದೇವಗನ್ ಅಭಿನಯದ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಮೂನ್ನೂರು ಕೋಟಿಯ ಗಡಿಯನ್ನು ತಲುಪಿಲ್ಲ. ದಾಟಿಲ್ಲ. ನಾಲ್ಕು ವರ್ಷದ ಹಿಂದೆ ಬಂದ ತಾನಾಜಿ ₹277.75 ಕೋಟಿ ಹಣವನ್ನು ಗಳಿಸಿತ್ತು. ಈ ಚಿತ್ರವನ್ನು ಹೊರತು ಪಡಿಸಿದರೆ ದೃಶ್ಯಂ-02 ₹239.67 ಕೋಟಿ ಗಳಿಸಿದ್ದರೆ ಸಿಂಗಂ ಅಗೇನ್ ಚಿತ್ರದ ನಿರ್ದೇಶಕ ರೊಹೀತ್ ಶೆಟ್ಟಿ ಜೊತೆ ಮಾಡಿದ್ದ ಗೋಲ್‌ಮಾಲ್ ಅಗೇನ್ ₹205.69 ಕೋಟಿ ಗಳಿಸಿತ್ತು.
ಈ ಮೂರು ಚಿತ್ರಗಳ ದಾಖಲೆಯನ್ನು ಸಿಂಗಂ ಅಗೇನ್ ಮುರಿಯುವ ನಿರೀಕ್ಷೆ ಇದೆ. ₹300 ಕೋಟಿ ಗಳಿಸಿದ ಅಜಯ್ ದೇವಗನ್ ವೃತ್ತಿ ಬದುಕಿನ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಸಿಂಗಂ ಅಗೇನ್ ಪಾತ್ರವಾಗುತ್ತೆ ಅನ್ನುವ ಭವಿಷ್ಯವಾಣಿ ಕೂಡ ಸದ್ಯಕ್ಕೆ ಕೇಳಿ ಬರುತ್ತಿದೆ. ಇದು ನಿಜಾ ಆಗಿದ್ದೇ ಆದಲ್ಲಿ ಹೊಸದೊಂದು ದಾಖಲೆ ಅಜಯ್ ದೇವಗನ್ ಖಾತೆಗೆ ಜಮೆಯಾದಂತೆ ಆಗಲಿದೆ.
ಅಂದ್ಹಾಗೇ ಮೊದಲೆರಡು ದಿನ ಬಾಕ್ಸಾಫೀಸ್‌ನಲ್ಲಿ ನಲವತ್ತು ಕೋಟಿ ಹಣವನ್ನು ಗಳಿಸಿರುವ ಸಿಂಗಂ ಅಗೇನ್ ನಿಜವಾದ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದೆ. ಸೋಮವಾರದಿಂದ ಈ ಚಿತ್ರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಈ ಚಿತ್ರದ ಮುಂದಿನ ಫಲಿತಾಂಶವನ್ನು ಕೂಡ ನಿರ್ಧರಿಸಲಿದೆ. ಸೋಮವಾರ ಕೂಡ ಚಿತ್ರಮಂದಿರದಲ್ಲಿ ಶೇಕಡಾ 50 % ಕ್ಕಿಂತ ಹೆಚ್ಚಿನ ಜನ ಇದ್ದರೆ ಚಿತ್ರ ಅನಾಯಾಸವಾಗಿ 300 ಕೋಟಿ ತಲುಪುತ್ತೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಇನ್ನೂ ಎರಡನೇ ದಿನ ಬೇರೆ ಎಲ್ಲೆಡೆ ಇರುವಂತೆ ಕರುನಾಡಿನಲ್ಲಿ ಕೂಡ ಸಿಂಗಂ ಅಗೇನ್ ಚಿತ್ರಕ್ಕೆ ಬೇಡಿಕೆ ಕಂಡು ಬಂದಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಈ ಚಿತ್ರವನ್ನು ಶೇಕಡಾ 51 % ಜನ ನಿನ್ನೆ ಕಣ್ತುಂಬಿಕೊಂಡಿದ್ದಾರೆ. ಇಂದು ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆಯಾದರೂ ಕರ್ನಾಟಕದಲ್ಲಿ ಸಿಂಗಂ ಅಗೇನ್ ಚಿತ್ರಕ್ಕೆ ನಮ್ಮ ಕನ್ನಡದ ಬಘೀರ ತೀವೃ ಸ್ಪರ್ಧೆಯನ್ನು ಕೊಡುತ್ತಿರುವುದು ಸುಳ್ಳಲ್ಲ.
ಇನ್ನುಳಿದಂತೆ ಸಿಂಗಂ ಅಗೇನ್ ಚಿತ್ರದ ಎದುರು ಬಿಡುಗಡೆಯಾದ ಭೂಲ್ ಭೂಲಯ್ಯ ಎರಡನೇ ದಿನ ₹36.50 ಕೋಟಿಯನ್ನು ಗಳಿಸಿದೆ. ಮೊದಲೆರಡು ದಿನದ ಗಳಿಕೆ ₹72 ಕೋಟಿಯ ಗಡಿಯನ್ನು ತಲುಪಿದೆ. ಕಾರ್ತಿಕ್ ಆರ್ಯನ್ ವೃತ್ತಿ ಬದುಕಿನಲ್ಲಿ ದೊಡ್ಡ ಓಪನಿಂಗ್ ಪಡೆದ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಭೂಲ್ ಭೂಲಯ್ಯ 3 ಪಾತ್ರವಾಗಿದೆ. ಒಟ್ನಲ್ಲಿ ಸದ್ಯಕ್ಕೆ ಸಿಂಗಂ ಅಗೇನ್ 85 ಕೋಟಿಯನ್ನು ಗಳಿಸುವ ಮೂಲಕ ಭೂಲ್ ಭೂಲಯ್ಯ 3 ಚಿತ್ರಕ್ಕಿಂತ ಮುಂದಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಮಲ್ಟಿಸ್ಟಾರ್‌ಗಳನ್ನೊಂದಿರುವ ಸಿಂಗಂ ಅಗೇನ್ ಎಷ್ಟು ಹಣ ಗಳಿಸುತ್ತೆ ಎನ್ನುವುದು ಸದ್ಯದ ಕುತೂಹಲ.


Click it and Unblock the Notifications











