Singham Again VS Bhool Bhulaiyaa 3 ; ಅಜಯ್ ದೇವಗನ್ ಮತ್ತು ಕಾರ್ತಿಕ್ ಆರ್ಯನ್ ನಡುವೆ ಗೆದ್ದವರು ಯಾರು ?

ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಈ ಕಾರಣಕ್ಕೆ ಒಂದೇ ದಿನ ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ.

ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ. ಅದರಲ್ಲಿಯೂ ಹಬ್ಬ ಹರಿದಿನ ಬಂದರೆ ಸಾಕು ಹಿಂದಡಿ ಇಡುವ ಪ್ರಶ್ನೆಯೇ ಇರಲ್ಲ. ಜಿದ್ದಿಗೆ ಬಿದ್ದವರಂತೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಹೀಗೆ ಬಿಡುಗಡೆ ಮಾಡಿದಾಗೆಲ್ಲ ಬಹುತೇಕ ಬಾರಿ ಒಬ್ಬರಿಗೆ ಸೋಲಾಗಿದೆ. ಆದರೆ ಈ ಬಾರಿ ಮಾತ್ರ ಇಬ್ಬರಿಗೂ ಭರ್ಜರಿ ಲಾಭವಾಗಿದೆ.

Singham Again vs Bhool Bhulaiyaa 3 Box Office Collection Day 3 Who s winning the Diwali 2024 battle

ಹೌದು, ಈ ದೀಪಾವಳಿ ಹಬ್ಬದ ಪ್ರಯುಕ್ತ ಬಾಲಿವುಡ್‌ನಲ್ಲಿ ಎರಡು ದೊಡ್ಡ ಚಿತ್ರಗಳು ತೆರೆಗೆ ಬಂದಿವೆ. ಆ ಪೈಕಿ ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಒಂದಾದರೆ, ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲಯ್ಯ 3 ಮತ್ತೊಂದು. ವಿಶೇಷ ಅಂದರೆ ದೀಪಾವಳಿ ಹಬ್ಬದ ತೆರೆಗೆ ಬಂದ ಈ ಎರಡು ಮಲ್ಟಿ ಸ್ಟಾರ್ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಯನ್ನು ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ಬಾಲಿವುಡ್‌ನಲ್ಲಿ ಹೊಸದೊಂದು ಇತಿಹಾಸವನ್ನು ಈ ಎರಡು ಚಿತ್ರಗಳು ನಿರ್ಮಿಸಿವೆ. ಮೊದಲ ದಿನ ₹35.5 ಕೋಟಿಯನ್ನು ಗಳಿಸಿದ್ದ ಭೂಲ್ ಭುಲಯ್ಯ 3 ಎರಡನೇ ದಿನ ₹37 ಕೋಟಿಯನ್ನು ಗಳಿಸಿದೆ. ಈ ಮೂಲಕ ಎರಡು ದಿನದಲ್ಲಿ ₹72.5 ಕೋಟಿಯನ್ನು ದೋಚುವಲ್ಲಿ ಯಶಸ್ವಿಯಾಗಿದೆ. ಇನ್ನೂ ನಿನ್ನೆ ಈ ಚಿತ್ರದ ಗಳಿಕೆಯಲ್ಲಿ ಚೂರು ಕುಸಿತ ಕಂಡಿದೆ. ಭಾನುವಾರದಂದು ಚಿತ್ರ ₹33.5 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಮೂರು ದಿನದಲ್ಲಿ ₹106 ಕೋಟಿಯನ್ನು ಚಿತ್ರ ಗಳಿಸಿದೆ.

ಇನ್ನೊಂದು ಕಡೆ ಮೊದಲ ದಿನ ₹43.5 ಕೋಟಿಯನ್ನು ಗಳಿಸಿದ್ದ ಸಿಂಗಂ ಅಗೇನ್ ಶನಿವಾರ ₹42.5 ಕೋಟಿಯನ್ನು ಗಳಿಸಿದೆ. ಇನ್ನೂ ನಿನ್ನೆ ಭಾನುವಾರ ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇತ್ತಾದರೂ ಚಿತ್ರದ ಗಳಿಕೆ ಕುಸಿತ ಕಂಡಿದೆ. ಮೂರನೇ ದಿನ ಕಲಿಯುಗದ ರಾಮಾಯಣದಂತೆ ಭಾಸವಾಗುವ ಸಿಂಗಂ ಅಗೇನ್ ₹35 ಕೋಟಿಯನ್ನು ಗಳಿಸಿದೆ. ಮೂರನೇ ದಿನದ ಪೈಪೋಟಿಯಲ್ಲಿ ಭೂಲ್ ಭುಲಯ್ಯ ಚಿತ್ರಕ್ಕಿಂತ ಹಿಂದೆ ಬಿದ್ದಿದೆ. ಸದ್ಯ ಸಿಂಗಂ ಅಗೇನ್ ಚಿತ್ರದ ಮೂರು ದಿನದ ₹121 ಕೋಟಿ ಗಡಿಯನ್ನು ತಲುಪಿದೆ. ಇನ್ನೂ ಇಂದು ದೀಪಾವಳಿ ಹಬ್ಬದ ರಜೆ ಮುಕ್ತಾಯವಾದ ಹಿನ್ನೆಲೆ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೂ ಕೂಡ ಇಂದು ಕೂಡ ಎರಡು ಚಿತ್ರಗಳು ₹20 ಪ್ಲಸ್ ಕೋಟಿ ಹಣವನ್ನಂತೂ ಗಳಿಸಲಿವೆ ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ.

ಇನ್ನೂ ಭೂಲ್ ಭುಲಯ್ಯ 3 ಚಿತ್ರದ ಮೂಲಕ ಕಾರ್ತಿಕ್ ಆರ್ಯನ್ ಮೂರು ಬಾರಿ ಸೆಂಚ್ಯೂರಿ ಹೊಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇವರ ಹಿಂದಿನ ಭೂಲ್ ಭುಲಯ್ಯ 2 ಬಾಕ್ಸಾಫೀಸ್‌ನಲ್ಲಿ ₹184.32 ಕೋಟಿಯನ್ನು ಗಳಿಸಿತ್ತು.ಸೋನು ಕೆ ಟಿಟು ಕಿ ಸ್ವೀಟಿ ಚಿತ್ರ ₹102 ಕೋಟಿಯನ್ನು ದೋಚಿತ್ತು.ಇನ್ನೂ ಅಜಯ್ ದೇವಗನ್ ಅಭಿನಯದ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಮೂನ್ನೂರು ಕೋಟಿಯ ಗಡಿಯನ್ನು ತಲುಪಿಲ್ಲ. ದಾಟಿಲ್ಲ. ನಾಲ್ಕು ವರ್ಷದ ಹಿಂದೆ ಬಂದ ತಾನಾಜಿ ₹277.75 ಕೋಟಿ ಹಣವನ್ನು ಗಳಿಸಿತ್ತು. ಈ ಚಿತ್ರವನ್ನು ಹೊರತು ಪಡಿಸಿದರೆ ದೃಶ್ಯಂ-02 ₹239.67 ಕೋಟಿ ಗಳಿಸಿದ್ದರೆ ಸಿಂಗಂ ಅಗೇನ್ ಚಿತ್ರದ ನಿರ್ದೇಶಕ ರೊಹೀತ್ ಶೆಟ್ಟಿ ಜೊತೆ ಮಾಡಿದ್ದ ಗೋಲ್‌ಮಾಲ್ ಅಗೇನ್ ₹205.69 ಕೋಟಿ ಗಳಿಸಿತ್ತು.

More from Filmibeat

Read more about: ajay devgn box office bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X