ಅಜಯ್‌ ದೇವಗನ್‌ಗೆ ಸೆಡ್ಡು ಹೊಡೆದರಾ ಕಾರ್ತಿಕ್ ಆರ್ಯನ್, ಯಾರ ಮುಡಿಗೆ ₹200 ಕೋಟಿ ಕಿರೀಟ..?

ಯಶ್, ಪ್ರಭಾಸ್ ಸೇರಿ ದಕ್ಷಿಣದ ಅನೇಕ ತಾರೆಯರು ಪ್ಯಾನ್ ಇಂಡಿಯಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಎರಡು ಮೂರು ವರ್ಷಕ್ಕೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಬಾಲಿವುಡ್‌ನವರು ಇದಕ್ಕೆ ತದ್ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಂತಹ ಹಿರಿಯ ಕಲಾವಿದರು ವರ್ಷಕ್ಕೆ ನಾಲ್ಕು ಚಿತ್ರಗಳನ್ನು ಮಾಡುವ ಮೂಲಕ ಚಿತ್ರರಂಗದ ಹಿತವನ್ನು ಕಾಪಾಡುತ್ತಿದ್ದಾರೆ. ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ.

ವಿಶೇಷ ಅಂದರೆ ಹೀಗೆ ವರ್ಷಕ್ಕೆ ನಾಲ್ಕು ಬಾರಿ ಬೆಳ್ಳಿತೆರೆಯ ಮೇಲೆ ಇವರು ದರ್ಶನ ನೀಡಿದರೂ ಕೂಡ ಪ್ರೇಕ್ಷಕರಿಗೆ ಇವರ ಮುಖ ಕಂಡು ಬೋರ್ ಆಗುತ್ತಿಲ್ಲ. ನಿಜಾ.. ಅಕ್ಷಯ್ ಕುಮಾರ್ ಅದೃಷ್ಟ ಕೈ ಕೊಟ್ಟಿದೆ. ಒಂದಾದ ಮೇಲೊಂದು ಸಿನಿಮಾ ಸೋಲುತ್ತಿವೆ. ಆದರೆ, ಅಜಯ್ ದೇವಗನ್ ಇವತ್ತು ಕೂಡ ಗೆಲ್ಲುವ ಕುದುರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಐದೇ ದಿನದಲ್ಲಿ ₹200 ಕೋಟಿಯನ್ನು ಕೊಳ್ಳೆ ಹೊಡೆದಿದೆ.

Singham Again vs Bhool Bhulaiyaa 3 Box Office Day 5 Which Film Hit the 200 Crore MarkSingham Again vs Bhool Bhulaiyaa 3 Box Office Day 5 Which Film Hit the 200 Crore Mark

ಹೌದು, ಮೊದಲ ದಿನ ₹43.5 ಕೋಟಿಯನ್ನು ಗಳಿಸಿದ್ದ ಸಿಂಗಂ ಅಗೇನ್ ಶನಿವಾರ ₹42.5 ಕೋಟಿಯನ್ನು ಗಳಿಸಿತ್ತು. ಇನ್ನೂ ಭಾನುವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡರೂ ಕೂಡ ₹35 ಕೋಟಿಯನ್ನು ಚಿತ್ರ ಗಳಿಸುವಲ್ಲಿ ಯಶಸ್ವಿಯಾಯ್ತು. ಈ ಮೂಲಕ ಮೂರು ದಿನದಲ್ಲಿ ₹121 ಕೋಟಿ ಹಣವನ್ನು ಗಳಿಸಿತು. ಇನ್ನೂ ದೀಪಾವಳಿಯ ರಜೆ ಮುಗಿದ ಹಿನ್ನೆಲೆ ನಾಲ್ಕನೇ ದಿನ ಅಂದರೆ ಸೋಮವಾರದಂದು ಚಿತ್ರದ ಗಳಿಕೆ ಕಡಿಮೆಯಾಗುತ್ತೆ ಎಂದು ಬಾಲಿವುಡ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಸೋಮವಾರದ ನಂತರ ಚಿತ್ರದ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಮಾತುಗಳನ್ನಾಡಿದ್ದರು. ಅದ್ರಂತೆ ಸೋಮವಾರ ಚಿತ್ರದ ಗಳಿಕೆಯಲ್ಲಿ ಶೇಕಡಾ 49.65% ಕುಸಿತವಾಗಿದೆ. ಸೋಮವಾರ ಕೇವಲ ₹18 ಕೋಟಿಯನ್ನಷ್ಟೇ ಭಾರತದಲ್ಲಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಇನ್ನೂ ಕಡಿಮೆಯಾಗಿದ್ದು ಐದನೇ ದಿನದಂದು ಚಿತ್ರ ₹14 ಕೋಟಿಯನ್ನು ಗಳಿಸಿದೆ. ಆದರೂ ಕೂಡ ಚಿತ್ರ ₹200 ಕೋಟಿ ಗಡಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ₹200 ಕೋಟಿಯಲ್ಲಿ ಭಾರತದ ಪಾಲು ₹167.5 ಕೋಟಿಯಾದರೆ ಹೊರದೇಶದಿಂದ ₹42.5 ಕೋಟಿ ಹಣ ಹರಿದು ಬಂದಿದೆ. ಈ ಮೂಲಕ ಚಿತ್ರದ ಗಳಿಕೆ ₹210 ಕೋಟಿಯಾಗಿದೆ.

ಇನ್ನೂ ಸಿಂಗಂ ಅಗೇನ್ ಚಿತ್ರದ ಮೂಲಕ ಅಜಯ್ ದೇವಗನ್ ತಮ್ಮ ಶೈತಾನ್ ಚಿತ್ರದ ದಾಖಲೆಯನ್ನು ಮುರಿದಿದ್ದಾರೆ. ಅಜಯ್ ದೇವಗನ್, ಆರ್‌.ಮಾಧವನ್ ಮತ್ತು ಜ್ಯೋತಿಕಾ ಅಭಿನಯದ ಶೈತಾನ್ ಭಾರತೀಯ ಬಾಕ್ಸಾಫೀಸ್‌ನಲ್ಲಿ ₹148.21 ಕೋಟಿಯನ್ನು ಗಳಿಸಿತ್ತು. 38ದಿನಗಳ ಕಾಲ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ದಾಖಲೆಯನ್ನು ಸಿಂಗಂ ಅಗೇನ್ ಕೇವಲ ಐದು ದಿನದಲ್ಲಿ ಮುರಿದಿರುವುದು ವಿಶೇಷ.

ಸಿಂಗಂ ಅಗೇನ್ ಚಿತ್ರದ ಎದುರು ಬಿಡುಗಡೆಯಾದ ಭೂಲ್ ಭುಲಯ್ಯ 3 ಕೂಡ ಹಣ ದೋಚುತ್ತಿದೆ. ಮೊದಲ ದಿನ ₹35.5 ಕೋಟಿಯನ್ನು ಗಳಿಸಿದ್ದ ಭೂಲ್ ಭುಲಯ್ಯ 3 ಎರಡನೇ ದಿನ ₹37 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಎರಡು ದಿನದಲ್ಲಿ ₹72.5 ಕೋಟಿಯನ್ನು ದೋಚುವಲ್ಲಿ ಯಶಸ್ವಿಯಾಗಿತ್ತು. ಇನ್ನೂ ಭಾನುವಾರದಂದು ₹33.5 ಕೋಟಿ ಹಣವನ್ನು ಗಳಿಸಿದ ಚಿತ್ರ ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ₹18 ಕೋಟಿಯನ್ನು ಗಳಿಸಿದೆ. ಮಂಗಳವಾರ ಚಿತ್ರ ₹13.5 ಕೋಟಿಯನ್ನು ದೋಚಿದೆ.

ಹೀಗೆ ಐದು ದಿನದಲ್ಲಿ ಭಾರತದ ಮಾರುಕಟ್ಟೆಯಲ್ಲಿ ₹137.5 ಕೋಟಿಯನ್ನು ಗಳಿಸಿದ ಈ ಚಿತ್ರಕ್ಕೆ ಸಪ್ತಸಾಗರದಾಚೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ವಿದೇಶದಲ್ಲಿ ಭೂಲ್ ಭುಲಯ್ಯ 3 ಹತ್ ಹತ್ರ ₹43 ಕೋಟಿಯನ್ನು ಗಳಿಸಿದೆ. ಈ ಮೂಲಕ ಭೂಲ್ ಭೂಲಯ್ಯ 3 ಚಿತ್ರದ ಒಟ್ಟಾರೆ ಗಳಿಕೆ ₹208 ಕೋಟಿಯಾಗಿದೆ.

More from Filmibeat

Read more about: ajay devgn box office bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X