47ರ ಹರೆಯದಲ್ಲಿ ಪ್ರೇಮದ ಅಮಲು ? ಶಿಲ್ಪಾ ಶೆಟ್ಟಿ ತಂಗಿ ಜೊತೆ ಇರುವ ಈ ವ್ಯಕ್ತಿ ಯಾರು ? ಕೆರಳಿದ್ದೇಕೆ ಶಮಿತಾ ?

ಬಣ್ಣದ ಲೋಕ ಅಂದರೆ ಅದು ಸತ್ಯ-ಮಿಥ್ಯದ ಸಂಘರ್ಷ. ಇಲ್ಲಿ ದಿನಕ್ಕೊಂದು ಸುದ್ದಿಯ ಉಗಮವಾಗುತ್ತೆ. ಆ ಪೈಕಿ ಕೆಲವು ಸತ್ಯ ಆದರೆ ಇನ್ನೂ ಕೆಲವು ಕೇವಲ ಅಂತೆ-ಕಂತೆಗಷ್ಟೇ ಸೀಮಿತವಾಗುತ್ತವೆ. ಆದರೂ ಕೂಡ ಈ ಸುದ್ದಿಗಳೇ ಚಿತ್ರರಂಗದ ಜೀವಾಳ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವ ಈ ಸುದ್ದಿಗಳಲ್ಲಿ ಲವ್ ಮತ್ತು ಬ್ರೇಕಪ್‌ ಕಥೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಯಾರಾದರೂ ಜೊತೆಯಾಗಿ ಕಾಣಿಸಿಕೊಂಡರೆ ಸಾಕು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಪುಕಾರು ಹಬ್ಬುತ್ತೆ.

ಕೆಲ ಒಮ್ಮೆ ಹೀಗೆ ಹಬ್ಬಿದ ಸುದ್ದಿ ನಿಜಾ ಕೂಡ ಆಗಿದೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇನ್ನೂ ಕೆಲ ಒಮ್ಮೆ ಸುಳ್ಳು ಆಗಿವೆ. ತಮ್ಮ ಕುರಿತು ಹಬ್ಬಿರುವ ಇಂತಹ ಸುದ್ದಿಗಳನ್ನು ಕಂಡು ಕೆಲ ತಾರೆಯರು ಉರಿದು ಬಿದ್ದಿದ್ದು ಇದೆ. ಮಂಗಳೂರು ಮುತ್ತು ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್.

ಹೌದು, ಹೇಳಿಕೊಳ್ಳಲು ಶಿಲ್ಪಾಶೆಟ್ಟಿ ಸಹೋದರಿಯಾದರೂ ಕೂಡ ಅಕ್ಕನಿಗೆ ಸಿಕ್ಕ ಗೆಲುವು ಇವರಿಗೆ ಸಿಗಲಿಲ್ಲ. ಆರಂಭದಲ್ಲಿ ಅವಕಾಶಗಳು ಸುಲಭವಾಗಿ ಸಿಕ್ಕವಾದರೂ ಕೂಡ ಕಲಾಭಿಮಾನಿಗಳು ಇವರಿಗೆ ತಮ್ಮ ಹೃದಯದಲ್ಲಿ ಜಾಗ ನೀಡಲಿಲ್ಲ. ಸದ್ಯ ಶಮಿತಾ ತಮ್ಮ ಎರಡನೇ ಇನಿಂಗ್ಸ್ ಶುರು ಮಾಡಿದ್ದಾರೆ. ಕೆಲ ವೆಬ್ ಸೀರೀಸ್‌ಗಳನ್ನು ಮಾಡುತ್ತಿದ್ದಾರೆ.

ಇಂಥಾ ಶಮಿತಾ ಮೊನ್ನೆ ಫೆಬ್ರವರಿ 2ರಂದು ತಮ್ಮ ಬರ್ತ್‌ಡೇ ಆಚರಿಸಿಕೊಂಡರು.ಈ ಹಿನ್ನೆಲೆ ದೀಪೇಶ್ ಶರ್ಮಾ ಎಂಬ ಟೆಕ್ನೋ ಕಲಾವಿದರೊಬ್ಬರು ಶಮಿತಾಗೆ ತುಂಬಾನೇ ಪ್ರೀತಿಯಿಂದ ಶುಭ ಕೋರಿದ್ದರು. ಪ್ರಿಯೆ.. ಲವ್ ಯೂ.. ಎಂದೆಲ್ಲ ಬರೆದುಕೊಂಡಿದ್ದರು. ಹೊಸದೊಂದು ಲವ್ ಸ್ಟೋರಿ ಶುರುವಾಗಿದೆ ಎಂಬ ಸುದ್ದಿ ಹಬ್ಬಲು ಇಷ್ಟೇ ಸಾಕಿತ್ತು.

''ಟೈಮ್ಸ್ ಆಫ್ ಇಂಡಿಯಾ''.. ''ಜೂಮ್''.. ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ದೀಪೇಶ್ ಶರ್ಮಾ ಅವರ ಜೊತೆ ಶಮಿತಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿಯನ್ನು ಮಾಡಿದವು. ಸದ್ಯ ತಮ್ಮ ಕುರಿತು ಬಿತ್ತರವಾದ ಈ ವರದಿ ಮತ್ತು ಕೇಳಿ ಬರುತ್ತಿರುವ ಸುದ್ದಿಗಳನ್ನು ಕೇಳಿ ಶಮಿತಾ ಕೆರಳಿ ಕೆಂಡವಾಗಿದ್ದಾರೆ. ನಾನು ಸಿಂಗಲ್ ಆಗಿದ್ದೇನೆ.. ನೆಮ್ಮದಿಯಿಂದ ಇದ್ದೇನೆ ಎಂದು ಹೇಳಿರುವ ಶಮಿತಾ ಸ್ನೇಹಿತರಿಬ್ಬರ ಆತ್ಮೀಯತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಈ ಮೂಲಕ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಅಂದ್ಹಾಗೇ ಶಮಿತಾ ಶೆಟ್ಟಿ ಅವಕಾಶಗಳು ಇಲ್ಲದೇ ಖಾಲಿ ಕುಳಿತ ಸಮಯದಲ್ಲಿ 'ಬಿಗ್ ಬಾಸ್'' ಮನೆಗೆ ಹೋಗಿದ್ದರು. 2022ರಲ್ಲಿ ಹಿಂದಿಯ ''ಬಿಗ್ ಬಾಸ್‌ ಒಟಿಟಿ''ಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಸ್ಫರ್ಧಿ ರಾಕೇಶ್ ಬಾಪತ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಶಮಿತಾ. ಇನ್ನೇನು ಇವರು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ಜುಲೈ 26-2022ರಂದು ಖುದ್ದು ಶಮಿತಾ ತಮ್ಮ ಬ್ರೇಕಪ್ ವಿಚಾರ ಹಂಚಿಕೊಂಡಿದ್ದರು. ರಾಕೇಶ್ ಬಾಪತ್ ಮತ್ತು ನಾನು ಈಗ ಒಟ್ಟಾಗಿಲ್ಲ, ಹಾಗೂ ಸ್ವಲ್ಪ ಸಮಯದಿಂದ ನಾವು ಬೇರೆಯಾಗಿದ್ದೇವೆ ಎಂದು ಶಮಿತಾ ಹೇಳಿದ್ದರು. ಈ ವಿಚಾರ ಸ್ಪಷ್ಟಪಡಿಸುವುದು ಮುಖ್ಯ ಎಂದುಕೊಂಡು ನಾನು ನಿಮ್ಮಲ್ಲರಿಗೆ ಈ ವಿಷಯ ಹೇಳುತ್ತಿದ್ದೇನೆ ಎಂದಿದ್ದರು.

SINGLE AND PEACEFUL Shamita Shetty Slams Deepesh Sharma Dating Rumors as Utter Nonsense

ಸದ್ಯ ಶಮಿತಾ ಶೆಟ್ಟಿಗೆ ಈಗ 47 ವರ್ಷ. ಆದರೂ ಇನ್ನೂ ಮದುವೆಯಾಗಿಲ್ಲ. ಈ ಹಿನ್ನೆಲೆ ಯಾರ ಜೊತೆಯಲ್ಲಿ ಆದರೂ ಶಮಿತಾ ಮತ್ತೆ ಪ್ರೀತಿಯಲ್ಲಿ ಬೀಳಬಹುದು ಎಂದು ಹಲವರು ಕಾಯುತ್ತಿದ್ದಾರೆ. ಇವರ ಮದುವೆ ಚಿಂತೆಯನ್ನು ಮಾಡುತ್ತಿದ್ದಾರೆ. ಇವರ ಕಣ್ಣಿಗೆ ದೀಪೇಶ್ ಶರ್ಮಾ ಮಾಡಿದ ಪೋಸ್ಟ್ ಬಿದ್ದಿದೆ. ಹೀಗಾಗಿ ಇಬ್ಬರು ಪ್ರೇಮಿಗಳು ಎಂದು ಹಲವಡೆ ಸುದ್ದಿಯಾಗಿದೆ. ಆದರೆ ಈ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಶಮಿತಾ ಹೇಳಿದ್ದಾರೆ.

More from Filmibeat

English summary
Is Shamita Shetty dating Deepesh Sharma? The actress breaks her silence with a powerful message for the "prudes" misconstruing her friendships. Read the full story.
Read more about: shamita shetty rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X