"ರಾಮ ಏನಾದ್ರೂ ಬದುಕಿದ್ದರೆ ಸತ್ತೇ ಹೋಗುತ್ತಿದ್ದ":'ಸೀತಾರಾಮಂ' ನಟಿಯ ಬೋಲ್ಡ್ ಲುಕ್‌ಗೆ ನೆಟ್ಟಿಗರ ತರಹೇವಾರಿ ಕಮೆಂಟ್!
ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಈ ನಟಿಯ ಹೆಸರು ಸಿಕ್ಕಾಪಟ್ಟೆ ಓಡಾಡುತ್ತಿದೆ. ಬಾಲಿವುಡ್, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಈ ನಟಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಕೆ ಮತ್ಯಾರೂ ಅಲ್ಲ ಮೃಣಾಲ್ ಠಾಕೂರ್. ಈಕೆಗೆ ಯಶಸ್ಸು ಸಿಕ್ಕಿದ್ದು ಇತ್ತೀಚೆಗಾದ್ರೂ, ಸಿನಿಮಾಗಳಲ್ಲಿ ಬೇಡಿಕೆ ದಿಡೀರನೇ ಹೆಚ್ಚಾಗಿದೆ.
'ಸೀತಾರಾಮಂ' ಅನ್ನೋ ಒಂದೇ ಒಂದು ಸಿನಿಮಾ ಮೃಣಾಲ್ ಠಾಕೂರ್‌ಗೆ ಹೊಸ ಇಮೇಜ್ ಕೊಟ್ಟಿತ್ತು. ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಅಷ್ಟೇ ಮೃಣಾಲ್ ಠಾಕೂರ್‌ಗೂ ಬೇಡಿಕೆ ಬಂದಿದೆ.

ಸಾಲದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಆಕ್ಟಿವ್ ಆಗಿರುತ್ತಾರೆ. ಗ್ಲಾಮರಸ್ ಫೋಟೊಗಳೊಂದಿಗೆ ಆಗಾಗ ಪ್ರತ್ಯಕ್ಷ ಆಗುತ್ತಲೇ ಇರುತ್ತಾರೆ. ಸಿನಿಮಾ, ಸೋಶಿಯಲ್ ಮೀಡಿಯಾ ಅಂತ ಬ್ಯುಸಿಯಾಗಿರೋ ನಟಿಗೆ ಅಭಿಮಾನಿಗಳ ಸಂಖ್ಯೆನೂ ಹೆಚ್ಚಾಗಿದ್ದಾರೆ. ಸದ್ಯ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡಿದ್ದು, ನೆಟ್ಟಿಗರು ಆ ಫೋಟೊಗಳಿಗೆ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
"ನನ್ನನ್ನು ಸ್ವರ್ಗದಲ್ಲಿ ಹುಡುಕಿ"
ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಮೃಣಾಲ್ ಠಾಕೂರ್ ಕಾಣೆಯಾಗಿಬಿಡುತ್ತಾರೆ. ಯಾವುದಾದರೂ ಒಂದು ಲೋಕೇಶ್‌ನಲ್ಲಿ ದಿಢೀರನೇ ಅಂತ ಪ್ರತ್ಯಕ್ಷ ಆಗಿಬಿಡ್ತಾರೆ. ಪ್ರತಿದಿನ ಗ್ಲಾಮರಸ್ ಲುಕ್ ಕೊಟ್ಟು ಅಭಿಮಾನಿಗಳ ನಿದ್ದೆಯನ್ನೂ ಕೆಡಿಸಿಬಿಡುತ್ತಾರೆ. ಇತ್ತೀಚೆಗೆ ಬಿಕಿನಿ ತೊಟ್ಟು ಪೋಸ್ ಕೊಟ್ಟ ಫೋಟೊಗಳು ವೈರಲ್ ಆಗಿದ್ದವು. ಈಗ ಮತ್ತೊಂದು ಫೋಟೊಗಳು ಸದ್ದು ಮಾಡುತ್ತಿವೆ.

ಈ ಬಾರಿ ಮೃಣಾಲ್ ಠಾಕೂರ್ ಮತ್ತಷ್ಟು ಮಾದಕ ಲುಕ್ ಕೊಟ್ಟಿದ್ದಾರೆ. ಆಕೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಫ್ಯಾನ್ಸ್ ನಿಂತಲ್ಲಿ ನಿಲ್ಲದಂತಾಗಿದ್ದಾರೆ. ಮೃಣಾಲ್ ಠಾಕೂರ್ ಫೋಟೊಗಳನ್ನು ಶೇರ್ ಮಾಡಿದ್ದಷ್ಟೇ ಅಲ್ಲ. "ನನ್ನನ್ನು ಸ್ವರ್ಗದಲ್ಲಿ ಹುಡುಕಿ" ಅಂತ ಹೇಳಿದ್ದಾರೆ. ಅದಕ್ಕೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
"ರಾಮ ಏನಾದ್ರೂ ಬದುಕಿದ್ದರೆ ಸತ್ತೇ ಹೋಗುತ್ತಿದ್ದ"
ಮೃಣಾಲ್ ಠಾಕೂರ್ ಗ್ಲಾಮರಸ್ ಫೋಟೊಗಳಿಗೆ ಕೆಲ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಮತ್ತೆ ಕೆಲವರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಸೀತಾರಾಮಂ' ಟ್ರೆಡಿಷನಲ್ ಲುಕ್‌ನಲ್ಲಿ ಕಂಡಿದ್ದವರಿಗೆ ಈ ಲುಕ್ ಇಷ್ಟ ಆಗಿಲ್ಲ. ಅದಕ್ಕೆ ಮಜವಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. " ಈಗೇನಾದರೂ ರಾಮ ಬದುಕಿದ್ದರೆ, ಈತರ ಡ್ರೆಸ್ ಮಾಡಿಕೊಂಡಿರೋ ಫೋಟೊಗಳನ್ನು ನೋಡಿದ ಬಳಿಕ ಸತ್ತೇ ಹೋಗುತ್ತಿದ್ದ" ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಮಲಯಾಳಿ ಅಭಿಮಾನಿ "ಇದಲ್ಲ... ನನ್ನ ಸೀತಾಮಹಾಲಕ್ಷ್ಮಿ ಹೀಗಲ್ಲ" ಅಂತ ಕಮೆಂಟ್ ಮಾಡಿದ್ದಾರೆ. ಹಾಗೇ " ನಿನ್ನಲ್ಲೇ ಸ್ವರ್ಗವನ್ನು ಕಂಡಿದ್ದೇನೆ. ಯಾಕಂದ್ರೆ, ಏಂಜಲ್ಸ್ ಇರೋದ ಅಲ್ಲಿ" ಎಂದಿದ್ದಾರೆ. " ನೀನೇ ಸ್ವರ್ಗ", "ನಮ್ಮ ಸೀತಾ ಮಹಾಲಕ್ಷ್ಮಿ" ಎಂದು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಮೃಣಾಲ್ ಠಾಕೂರ್‌ಗೆ ಇನ್‌ಸ್ಟಾಗ್ರಾಂ ಫಾಲೋವರ್ಸ್ ಎಷ್ಟು?
ಇತ್ತೀಚೆಗೆ ಶೇರ್ ಮಾಡಿದ ಫೋಟೊಗಳು ಕೇವಲ 15 ಗಂಟೆಗಳಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಸುಮಾರು 7600ಕ್ಕೂ ಅಧಿಕ ಕಮೆಂಟ್ಸ್ ಬಂದಿವೆ. ಅಂದ್ಹಾಗೆ ಮೃಣಾಲ್ ಠಾಕೂರ್‌ಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 8.8 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸದ್ಯ ಮೃಣಾಲ್ ಠಾಕೂರ್ ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಆದಿತ್ಯ ರಾಯ್ ಕಪೂರ್ ಜೊತೆ ನಟಿಸಿದ 'ಗುಮ್ರಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅಲ್ಲದೆ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಾಶ್ಮಿ 'ಸೆಲ್ಫಿ' ಸಿನಿಮಾದಲ್ಲೂ ನಟಿಸಿದ್ದರು. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿಯ 30ನೇ ಸಿನಿಮಾಗೆ ಹೀರೊಯಿನ್ ಇವರೇನೆ. ಅಲ್ಲದೆ 'ಪೂಜಾ ಮೇರಿ ಜಾನ್', 'ಪಿಪಾ', 'ಆಂಕ್ ಮಿಚೋಲಿ' ಸಿನಿಮಾಗಳಿವೆ.


Click it and Unblock the Notifications











