For Quick Alerts
  ALLOW NOTIFICATIONS  
  For Daily Alerts

  "ಪಾತ್ರಕ್ಕಾಗಿ 2 ವಾರ ವೇಶ್ಯಾಗೃಹದಲ್ಲಿ ನರಕ ನೋಡಿದೆ.. ಆ ಕಾರಣಕ್ಕೆ 'ಸುಲ್ತಾನ್' ಚಿತ್ರದಿಂದ ನನ್ನ ಕೈಬಿಟ್ಟರು"- ಮೃಣಾಲ್

  |

  'ಸೀತಾರಾಮಂ' ಸಿನಿಮಾ ಮೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ನಟಿ ಮೃಣಾಲ್ ಠಾಕೂರ್. ಈ ಮರಾಠಿ ಚೆಲುವೆ ನಿಧಾನವಾಗಿ ದಕ್ಷಿಣ ಭಾರತ ಸಿನಿಮಾಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಚೆಲುವೆ ಮೋಡಿ ಮಾಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಈ ಮರಾಠಿ ಚೆಲುವೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಿರುತೆರೆಯ 'ಕುಂಕುಮ ಭಾಗ್ಯ' ಧಾರಾವಾಹಿ ಒಳ್ಳೆಹೆಸರು ತಂದುಕೊಟ್ಟಿತ್ತು.

  ಹನು ರಾಘವಪುಡಿ ನಿರ್ದೇಶನದ ಪೀರಿಯಡ್ ರೊಮ್ಯಾಂಟಿಕ್ ಸಿನಿಮಾ 'ಸೀತಾರಾಮಂ' ಸಿನಿಮಾ ಈ ವರ್ಷ ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ದುಲ್ಕರ್ ಸಲ್ಮಾನ್ ಜೋಡಿಯಾಗಿ ಚಿತ್ರದಲ್ಲಿ ಮೃಣಾಲ್ ನಟಿಸಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿ ಗೆದ್ದಿದ್ದರು. ಇತ್ತೀಚೆಗೆ ಓಟಿಟಿಗೆ ಬಂದಿರೋ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮನಗೆದ್ದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೃಣಾಲ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಕಳೆದುಕೊಂಡಿದ್ದು, 2 ವಾರ ವೇಶ್ಯಾಗೃಹದಲ್ಲಿ ಇದ್ದಿದ್ದು ಹೀಗೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

  ರಶ್ಮಿಕಾ- ಪೂಜಾನ ಮೀರಿಸೋ ಗಟ್ಟಿಗಿತ್ತಿ ಬಂದೇಬಿಟ್ಲು: ಎಲ್ಲೆಲ್ಲೂ ಈಗ ಮರಾಠಿ ಮಲ್ಲಿಗೆ ಘಮಲು!ರಶ್ಮಿಕಾ- ಪೂಜಾನ ಮೀರಿಸೋ ಗಟ್ಟಿಗಿತ್ತಿ ಬಂದೇಬಿಟ್ಲು: ಎಲ್ಲೆಲ್ಲೂ ಈಗ ಮರಾಠಿ ಮಲ್ಲಿಗೆ ಘಮಲು!

  ಮೃಣಾಲ್ ಠಾಕೂರ್ ಸಿನಿರಸಿಕರ ಪಾಲಿನ ಹೊಸ ಕ್ರಶ್ ಎನ್ನಿಸಿಕೊಂಡಿದ್ದಾರೆ. ಸದ್ಯ ತೆಲುಗಿನ ದೊಡ್ಡದೊಡ್ಡಸಿನಿಮಾಗಳಲ್ಲಿ ಈ ಮರಾಠಿ ಚೆಲುವೆ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಗೆ ಪೈಪೋಟಿ ಕೊಡಲು ಹೊಸ ನಟಿ ಬಂದಿದ್ದಾಳೆ ಎನ್ನುವ ಮಾತುಗಳು ಕೇಳಿಬರ್ತಿದೆ.

   ಸಲ್ಲು ಜೊತೆ 'ಸುಲ್ತಾನ್‌' ಚಿತ್ರದಲ್ಲಿ ನಟಿಸ್ಬೇಕಿತ್ತು

  ಸಲ್ಲು ಜೊತೆ 'ಸುಲ್ತಾನ್‌' ಚಿತ್ರದಲ್ಲಿ ನಟಿಸ್ಬೇಕಿತ್ತು

  ಕಳೆದ 10 ವರ್ಷಗಳಿಂದ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಮೃಣಾಲ್ ಠಾಕೂರ್ ಗುರ್ತಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರದ ನಾಯಕಿಯಾಗಿ ಮೃಣಾಲ್ ಆಯ್ಕೆ ಆಗಿದ್ದರಂತೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಿರ್ವಹಿಸಿದ ಪಾತ್ರದಲ್ಲಿ ಮೃಣಾಲ್ ನಟಿಸಬೇಕಿತ್ತು. ಈ ಚಿತ್ರಕ್ಕಾಗಿ ಕುಸ್ತಿ ಕಲಿತಿದ್ದೆ, 11 ಕೆಜಿ ತೂಕ ಇಳಿಸಿಕೊಂಡಿದ್ದೆ. ಆದರೆ ಕೊನೆ ಕ್ಷಣದಲ್ಲಿ ಮೃಣಾಲ್ ಬದಲು ಅನುಷ್ಕಾ ಶರ್ಮಾ ಚಿತ್ರದಲ್ಲಿ ನಟಿಸಿದ್ದರು. ನಾನು ತುಂಬಾ ತೂಕ ಕಳೆದುಕೊಂಡಿದ್ದೆ ಇದಕ್ಕೆ ಕಾರಣ ಎಂದು ಮರಾಠಿ ಚೆಲುವೆ ಹೇಳಿದ್ದಾರೆ.

  "2 ವಾರ ವೇಶ್ಯಾಗೃಹದಲ್ಲಿ ಕಳೆದಿದ್ದೆ"

  2018ರಲ್ಲಿ ಮೃಣಾಲ್ ಠಾಕೂರ್ 'ಲವ್ ಸೋನಿಯಾ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟ ತಂಗಿಯನ್ನು ರಕ್ಷಿಸಿಕೊಳ್ಳುವ ಅಕ್ಕನ ಪಾತ್ರದಲ್ಲಿ ಅವರು ನಟಿಸಿದ್ದರು. "ತಂಗಿಯನ್ನು ಈ ದಂಧೆಯಿಂದ ಹೊರಗೆ ಕರೆದುಕೊಂಡು ಬರಲು ಆಕೆ ಕೂಡ ವೇಶ್ಯೆ ಅವತಾರ ತಾಳುವ ಕಥೆ ಇತ್ತು. ಆ ಪಾತ್ರದ ಬಗ್ಗೆ ತಿಳಿದುಕೊಳ್ಳಲು 2 ವಾರಗಳ ಕಾಲ ಕೊಲ್ಕತ್ತಾದ ವೇಶ್ಯಾಗೃಹದಲ್ಲಿ ಕಳೆದಿದ್ದರಂತೆ. ಅಲ್ಲಿ ಅವರ ಜೊತೆ ಸಮಯ ಕಳೆಯುತ್ತಾ ಅವರ ಕಥೆ ಕೇಳುತ್ತಾ ಶಾಕ್ ಆಗಿತ್ತು."

   ಶೂಟಿಂಗ್ ವೇಳೆ ಕಣ್ಣೀರು ಹಾಕಿದ್ದ ನಟಿ

  ಶೂಟಿಂಗ್ ವೇಳೆ ಕಣ್ಣೀರು ಹಾಕಿದ್ದ ನಟಿ

  "ವೇಶ್ಯಾಗೃಹದಿಂದ ಬಂದ ಮೇಲೂ ಅವರ ಕಥೆಗಳು ನನ್ನನ್ನು ಕಾಡುತ್ತಿದ್ದವು. ಇದೇ ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ. ನಿರ್ದೇಶಕರು ಕೌನ್ಸೆಲಿಂಗ್ ಕೊಡಿಸಿ ಸಹಜ ಸ್ಥಿತಿಗೆ ಮರಳುವಂತೆ ಮಾಡಿದ್ದರು. ಸೆಟ್‌ನಲ್ಲಿ ನಿರ್ದೇಶಕರು ಆ್ಯಕ್ಷನ್ ಹೇಳಿದಾಗ ನಟಿಸಲು ಸಾಧ್ಯವಾಗದೇ ಅತ್ತುಬಿಟ್ಟಿದ್ದೆ. 17 ವರ್ಷದ ಹುಡುಗಿಯನ್ನು 60 ವರ್ಷದ ವ್ಯಕ್ತಿಗೆ ಮಾರಾಟ ಮಾಡುವ ದೃಶ್ಯ ಅದು. ನಟಿಸಲು ಹೊರಟಾಗ ಆ ವೇಶ್ಯೆಯರ ಕಥೆಗಳು ನನ್ನ ಕಣ್ಮುಂದೆ ಬಂದು ಕಣ್ಣೀರು ಹಾಕಿದ್ದೆ. ಕೊನೆಗೆ ನಿರ್ದೇಶಕರ ಮಾತು ಕೇಳಿ ಧೈರ್ಯದಿಂದ ಚಿತ್ರದಲ್ಲಿ ನಟಿಸಿದೆ" ಎಂದು ಮೃಣಾಲ್ ಹೇಳಿದ್ದಾರೆ.

   ಸಾಲು ಸಾಲು ಚಿತ್ರಗಳಲ್ಲಿ ಮೃಣಾಲ್ ನಟನೆ

  ಸಾಲು ಸಾಲು ಚಿತ್ರಗಳಲ್ಲಿ ಮೃಣಾಲ್ ನಟನೆ

  'ಸೂಪರ್ 30', 'ಜೆರ್ಸಿ' ಸೇರಿದಂತೆ ದೊಡ್ಡ ದೊಡ್ಡ ಬಾಲಿವುಡ್ ಸಿನಿಮಾಗಳಲ್ಲಿ ಮೃಣಾಲ್ ನಟಿಸಿದ್ದಾರೆ. ಆದರೆ 'ಸೀತಾರಾಮಂ' ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿದೆ. ಇದೊಂದು ಸಿನಿಮಾದಿಂದ ದೊಡ್ಡಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾಗಿದೆ. 'ಪಿಪ್ಪ', 'ಪೂಜಾ ಮೇರಿ ಜಾನ್', 'ಆಂಕ್ ಮಿಚೋಲಿ', 'ಗುಮ್ರಾ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕೊರಟಾಲ ಶಿವ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್‌ ಚಿತ್ರಕ್ಕೆ ಮೃಣಾಲ್ ನಾಯಕಿ ಆಗುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

  "ಇದು ಹೊಸ ಟೆಕ್ನಾಲಜಿ.. 3D ಕನ್ನಡಕ ಹಾಕ್ಕೊಂಡು ನೋಡಬೇಕು": ಕೊನೆಗೂ 'ಆದಿಪುರುಷ್' ಟೀಸರ್ ಬಗ್ಗೆ ಮೌನ ಮುರಿದ ಪ್ರಭಾಸ್

  English summary
  Sita Raman Actress Mrunal Thakur Opens Up About Her struggling Days. Know More.
  Friday, October 7, 2022, 12:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X