For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳಲ್ಲಿ ಬಾಲಿವುಡ್ ನಟ ಸಿಕ್ಸ್ 'ಹೊಟ್ಟೆ' ಪಾಡು

  By ಜೇಮ್ಸ್ ಮಾರ್ಟಿನ್
  |

  ಹಿಂದಿ ಚಿತ್ರರಂಗದಿಂದ ಪ್ರೇಕ್ಷಕ ಬಯಸುವುದು ಅತ್ಯುತ್ತಮ ಕಥೆಯಿರುವ ಒಳ್ಳೆಯ ಚಿತ್ರ ಮಾತ್ರ ಎಂದರೆ ತಪ್ಪಾಗುತ್ತದೆ. ದಕ್ಷಿಣ ಭಾರತದಲ್ಲಿ ನಾಯಕ ನಟ ಮ್ಯಾನರಿಸಂ, ಅಭಿನಯಕ್ಕೆ ಮನಸೋತು ಅಭಿಮಾನಿಗಳು ಅವರ ಹಿಂದೆ ಬಿದ್ದರೆ, ಉತ್ತರದ ನಟರ ಲುಕ್, ಸ್ಟೈಲ್, ದೇಹ ಸೌಂದರ್ಯವೇ ಮುಖ್ಯವಾಗಿದೆ. ಪ್ರತಿಭೆ ಇದ್ದರೂ ಸವಾಲೊಡ್ಡುವ ಪಾತ್ರಗಳು ಸಿಗುವುದು ಅಪರೂಪ.

  ಪರಿಸ್ಥಿತಿ ಹೀಗಿರುವಾಗ ಮಿ. ಪರ್ಫೆಕ್ಟ್ ಎನಿಸಿಕೊಂಡಿರುವ ಅಮೀರ್ ಖಾನ್ ಕೂಡಾ ತನ್ನ ದೇಹದ ಮೈಕಟ್ಟನ್ನು ದಂಡಿಸಿ ಪಾತ್ರಕ್ಕೆ ತಕ್ಕಂತೆ ಪೋಷಣೆ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಪಾತ್ರಕ್ಕೆ ತಕ್ಕ ಮೈಕಟ್ಟು ಅರ್ಥಾತ್ ಸಿಕ್ಸ್ ಪ್ಯಾಕ್ ಬಾಲಿವುಡ್ ನಟರ ಹೊಟ್ಟೆ ಪಾಡಿನ ಕಥೆಯಾಗಿದೆ.

  ಆದರೆ, ಹಿಂದೆಲ್ಲ ಸಲ್ಮಾನ್, ಸಂಜಯ್, ಸುನಿಲ್ ಶೆಟ್ಟಿ ಮಾತ್ರ ಉತ್ತಮ ಮೈಕಟ್ಟು ಹೊಂದಿರುವ ನಟರೆನಿಸಿದ್ದರು. ನಂತರ ಸಿಕ್ಸ್ ಪ್ಯಾಕ್ ಅಬ ವೈರಸ್ ಎಲ್ಲರಿಗೂ ಬಡಿದು ಶಾರುಖ್ ನಂಥ ಸಾಧಾರಣ ದೇಹಿ ಕೂಡಾ ಓಂ ಶಾಂತಿ ಓಂ ನಲ್ಲಿ ಸಿಕ್ಸ್ ಪ್ಯಾಕ್ ನಲ್ಲಿ ದರ್ದೆ ಡಿಸ್ಕೋ ಎಂದು ಕುಣಿದಿದ್ದು ಕಥೆಗೆ ಎಷ್ಟು ಮುಖ್ಯವಾಗಿತ್ತೋ ಗೊತ್ತಿಲ್ಲ ಆದರೆ, ಅಭಿಮಾನಿಗಳಿಗಂತೂ ಶಾರುಖ್ ದೇಹ ಹುಚ್ಚು ಹಿಡಿಸಿಬಿಟ್ಟಿತು.

  ಉದಾಹರಣೆಗೆ ಹೃತಿಕ್ ರೋಷನ್ ಈಗಿನ ತನ್ನ ಮೈಕಟ್ಟು ಪಡೆಯಲು ಹಲವು ಕೆಜಿಗಳನ್ನು ಕಳೆದುಕೊಳ್ಳಬೇಕಾಯಿತು. ಕ್ರಿಶ್ 3 ನಲ್ಲಿ ಹೃತಿಕ್ ದೇಹಸಿರಿ ನೀವು ಕಾಣಬಹುದು. ಬಾಲಿವುಡ್ ನಲ್ಲಿ ಸಿಕ್ಸ್ ಪ್ಯಾಕ್ ನಟ ಪಟ್ಟಿ ಬೆಳೆಯುತ್ತಲೆ ಇದೆ.. ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ಅಜಯ್ ದೇವಗನ್, ರಣವೀರ್ ಸಿಂಗ್, ರಣಬೀರ್ ಸಿಂಗ್ ..ನಟರ ಮೈಕಟ್ಟು ನೀಡಿ ಆನಂದಿಸಿ

  ಸ್ಟಾರ್ ಗಳ ಕಿವಿಮಾತು

  ಸ್ಟಾರ್ ಗಳ ಕಿವಿಮಾತು

  ಎಲ್ಲಾ ಸ್ಟಾರ್ ಗಳು ಹೇಳುವುದು ಒಂದೇ ಮಾತು ರಾತ್ರಿ ಕಳೆದು ಬೆಳಗು ಹರಿಯುವುದರೊಳಗೆ ನಿಮ್ಮ ದೇಹವನ್ನು ಸಿಕ್ಸ್ ಪ್ಯಾಕ್ ಗೆ ತಿರುಗಿಸಲು ಸಾಧ್ಯವೇ ಇಲ್ಲ. ನಿಯಮಿತ ಆಹಾರ ಪದ್ಧತಿ, ವ್ಯಾಯಾಮಾ, ಯೋಗ, ಜಾಗಿಂಗ್ ಹೀಗೆ ನಿರಂತರವಾಗಿ ಬೆವರು ಹರಿಸಿದರೆ ಮಾತ್ರ ಮೈಕಟ್ಟು ಬಿಗಿಗೊಳ್ಳಲು ಸಾಧ್ಯ. ಜತೆಗೆ ಅಗತ್ಯ ಬಿದ್ದಾಗ ಸ್ಟೆರಾಯ್ಡ್, ಪ್ರಾಣಿಗಳ ಹಾರ್ಮೋನ್ ಇಂಜೆಕ್ಷನ್, ವೈದ್ಯರ ನೆರವು ಪಡೆದು ಕೆಲವು ಮದ್ದುಗಳನ್ನು ಪಡೆಯುವುದು ಮಾಮೂಲಿಯಾಗಿದೆ.

  ಆಮೀರ್ ಖಾನ್

  ಆಮೀರ್ ಖಾನ್

  ಘಜನಿ ಚಿತ್ರದಲ್ಲಿ ಅಮೀರ್ ಖಾನ್

  ಅಜಯ್ ದೇವಗನ್

  ಅಜಯ್ ದೇವಗನ್

  ಸಿಂಗಮ್ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಅಬ್ ಬೆಳೆಸಿದ ಅಜಯ್ ದೇವಗನ್

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್

  ಪಾತ್ರಕ್ಕೆ ಅಗತ್ಯ ಬಿದ್ದರೆ ಮಾತ್ರ ಸಿಕ್ಸ್ ಪ್ಯಾಕ್ ಬೆಳೆಸುವುದಾಗಿ ಹೇಳುವ ಅಕ್ಷಯ್ ಕೂಡಾ ಸಿಕ್ಸ್ ಪ್ಯಾಕ್ ಬೆಳೆಸಿದರೂ ಹೆಚ್ಚು ಪ್ರದರ್ಶಿಸಿಲ್ಲ.

  ಶಾರುಖ್ ಖಾನ್

  ಶಾರುಖ್ ಖಾನ್

  ಸಖತ್ ಕಷ್ಟಪಟ್ಟು ಸಿಕ್ಸ್ ಪ್ಯಾಕ್ ಬೆಳೆಸಿಕೊಂಡ ಶಾರುಖ್ ಖಾನ್ ಈಗ ದೇಹಸಿರಿ ಹಾಳು ಮಾಡಿಕೊಂಡಿದ್ದಾರೆ. ಓಂ ಶಾಂತಿ ಓಂ ಚಿತ್ರದ ನಂತರ ಜಿಮ್ ಗೆ ಹೋಗುವುದನ್ನು ಶಾರುಖ್ ಮರೆತ್ತಿದ್ದಾರೆ.ಇನ್ನಷ್ಟುಚಿತ್ರಗಳನ್ನು ನಿರೀಕ್ಷಿಸಿ

  ಡೀನೋ ಮಾರಿಯೋ

  ಡೀನೋ ಮಾರಿಯೋ

  ಗೋವಾದ ಹುಡುಗ ಡೀನೋ ಸದ್ಯಕ್ಕೆ ಚಿತ್ರರಂಗದಲ್ಲಾಗಲಿ, ಮಾಡೆಲಿಂಗ್ ಕ್ಷೇತ್ರದಲ್ಲಾಗಲಿ ಕಾಣುತ್ತಿಲ್ಲ. ಆದರೆ, ಸಿಕ್ಸ್ ಪ್ಯಾಕ್ ಹೊಂದಿದ ನಟರ ಪೈಕಿ ತುಂಬಾ ಹಳಬ.

  ಇಮ್ರಾನ್ ಹಶ್ಮಿ

  ಇಮ್ರಾನ್ ಹಶ್ಮಿ

  ಬಾಲಿವುಡ್ ನ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಕೂಡಾ ಸಿಕ್ಸ್ ಪ್ಯಾಕ್ ದೇಹಸಿರಿಯಲ್ಲಿ ಕಾಣಿಸಿಕೊಂಡಿದ್ದರು. ಒನ್ಸ್ ಆಪನ್ ಎ ಟೈಮ್ ಇನ್ ಮುಂಬೈ ಚಿತ್ರದಲ್ಲಿ ಇಮ್ರಾನ್ ಅಭಿಮಾನಿಗಳ

  ಗಮನ ಸೆಳೆದಿದ್ದರು.

  ಹೃತಿಕ್ ರೋಷನ್

  ಹೃತಿಕ್ ರೋಷನ್

  ನೀಳಕಾಯ ಹೃತಿಕ್ ಅವರ ಸಿಕ್ಸ್ ಪ್ಯಾಕ್ ಗೆ ಮನ ಸೋಲದ ಅಭಿಮಾನಿಯೇ ಇಲ್ಲ. ಕ್ರಿಶ್ 3 ಚಿತ್ರದಲ್ಲಿ ಮತ್ತೊಮ್ಮೆ ದೇಹಸಿರಿ ಅನಾವರಣಗೊಳ್ಳಲಿದೆ.

  ಜಾನ್ ಅಬ್ರಹಾಂ

  ಜಾನ್ ಅಬ್ರಹಾಂ

  ಏಷ್ಯಾದ ಸುಂದರ ವ್ಯಕ್ತಿಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದ ಮಾಡೆಲ್ ಕ್ಷೇತ್ರದಲ್ಲೂ ಮಿಂಚಿದ್ದ ಜಾನ್ ಅಬ್ರಹಾಂ ತಮ್ಮ ದೇಹದಲ್ಲಿ ಸಿಕ್ಸ್ ಪ್ಯಾಕ್ ಅಬ್ ಬೆಳಿಸಿಕೊಂಡು ಶೂಟೌಟ್ ಅಟ್ ವಡಾಲಾ ಚಿತ್ರದಲ್ಲಿ ಮಿಂಚಿದರು.

  ರಣವೀರ್ ಸಿಂಗ್

  ರಣವೀರ್ ಸಿಂಗ್

  ಲೇಡಿ ಬೆಹ್ಲ್ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಅಬ್ಸ್ ನಲ್ಲಿ ಕಾಣಿಸಿಕೊಂಡ ರಣವೀರ್ ಸಿಂಗ್ ಯುವತಿಯರ ಅಚ್ಚುಮೆಚ್ಚಿನ ನಟ

  ಸಲ್ಮಾನ್ ಖಾನ್

  ಸಲ್ಮಾನ್ ಖಾನ್

  ಬಾಲಿವುಡ್ ನ ಅನೇಕ ನಟರ ದೇಹ ಸೌಂದರ್ಯ ಹೆಚ್ಚಳಕ್ಕೆ ಸಹಾಯ ಮಾಡಿರುವ ಸಲ್ಮಾನ್ ಖಾನ್ ಅನೇಕ ವರ್ಷಗಳಿಂದ ನಟನೆ ಜತೆಗೆ ದೇಹಸಿರಿ ಪ್ರದರ್ಶನದಿಂದಲೂ ಹೆಸರುವಾಸಿಯಾಗಿದ್ದಾರೆ.

  ಶಹೀದ್ ಕಪೂರ್

  ಶಹೀದ್ ಕಪೂರ್

  ಕಮೀನೆ ಚಿತ್ರದಲ್ಲಿ ಕುದುರೆಗಳ ಜತೆ ಬಿಗಿಯಾದ ಮೈಕಟ್ಟಿನ ಶಹೀರ್ ಓಡಿ ಬರುವ ದೃಶ್ಯ ಎಲ್ಲರ ಗಮನಸೆಳೆದಿತ್ತು.

  English summary
  Bollywood is complete with actors who have a chiseled body and mind blowing looks. But if you think that all that these actors have to do to attain a perfect six pack abs is to hit the gym, you are mistaken! They have had to work very hard and with utmost grit and determination. we have compiled here a few popular actors who either have a 6 pack abs or have attained it for a particular film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X