For Quick Alerts
  ALLOW NOTIFICATIONS  
  For Daily Alerts

  ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿದ್ದ 'ಸಿಯಾ' ನಟಿ ಹೊಟೇಲ್‌ನಲ್ಲಿ ಶವವಾಗಿ ಪತ್ತೆ; ಡೆತ್ ನೋಟ್ ಬಿಚ್ಚಿಡ್ತು ಕಾರಣ

  |

  ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಸಿಯಾ ಚಿತ್ರದ ನಟಿ ಆಕಾಂಕ್ಷ ಮೋಹನ್ ನಿನ್ನೆ ( ಸೆಪ್ಟೆಂಬರ್ 30 ) ಮುಂಬೈನ ವಾರ್ಸೊವಾದಲ್ಲಿರುವ ಹೊಟೇಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 28ರಂದು ಹೊಟೇಲ್‌ಗೆ ತೆರಳಿದ್ದ ಆಕಾಂಕ್ಷ ಎರಡು ದಿನದ ಅವಧಿಗೆ ರೂಮ್ ಬುಕ್ ಮಾಡಿದ್ದರು. ಆದರೆ ಎರಡು ದಿನಗಳು ಕಳೆದರೂ ಸಹ ರೂಮ್ ಕೋಣೆಯ ಬಾಗಿಲು ತೆರೆಯದ ಕಾರಣ ಅನುಮಾನಕ್ಕೊಳಗಾದ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

  ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲನ್ನು ತೆರೆದ ನಂತರ ನಟಿ ಆಕಾಂಕ್ಷ ಮೋಹನ್ ಶವ ಪತ್ತೆಯಾಗಿದೆ. ಇನ್ನು ರೂಮ್ ಅನ್ನು ಪರಿಶೀಲಿಸಿದ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದ್ದು ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂಬುದನ್ನು ನಟಿ ತಿಳಿಸಿದ್ದಾರೆ. ಮೂವತ್ತು ವರ್ಷ ವಯಸ್ಸಿನ ಆಕಾಂಕ್ಷ 'ನನ್ನನ್ನು ಕ್ಷಮಿಸಿ, ಇದಕ್ಕೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ, ನನಗೆ ನೆಮ್ಮದಿ ಬೇಕು' ಎಂದು ಬರೆದುಕೊಳ್ಳುವುದರ ಮೂಲಕ ಸಾವಿಗೆ ತಾನೇ ಕಾರಣ ಎಂಬುದನ್ನು ತಿಳಿಸಿದ್ದಾರೆ.

  ಇನ್ನು ಆಕಾಂಕ್ಷ ಅಭಿನಯದ ಹಿಂದಿ ಚಿತ್ರ ಎರಡು ವಾರದ ಹಿಂದಷ್ಟೇ ಬಿಡುಗಡೆಯಾಗಿತ್ತು ಹಾಗೂ ಆಕಾಂಕ್ಷ ಮೋಹನ್ 2015ರಲ್ಲಿ ತಮಿಳಿನ '9 ದಿರುದರ್ಗಳ್' ಎಂಬ ಚಿತ್ರದಲ್ಲಿಯೂ ಸಹ ಅಭಿನಯಿಸಿದ್ದರು. ಕೇವಲ ಎರಡು ಸಿನಿಮಾಗಳಲ್ಲಿ ಅಭಿನಯಿಸಿರುವ ಆಕಾಂಕ್ಷ ಮೋಹನ್ ಇನ್ನೂ ಅವಿವಾಹತೆ. ಮೂಲತಃ ಉತ್ತರ ಪ್ರದೇಶದ ಲಕ್ನೋನ ಆಕಾಂಕ್ಷ ಮೋಹನ್ ತನ್ನ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಮಾಡುತ್ತಾ ಮುಂದೆ ಯಶಸ್ವಿ ನಟಿ ಅಥವಾ ಮಾಡೆಲ್ ಆಗಬೇಕೆಂಬ ಕನಸನ್ನು ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 11 ಸಾವಿರ ಅನುಯಾಯಿಗಳನ್ನು ಹೊಂದಿರುವ ಆಕಾಂಕ್ಷ ಮೋಹನ್ ಆರು ದಿನಗಳ ಹಿಂದೆ ರೀಲ್ಸ್ ಹಂಚಿಕೊಂಡು

  English summary
  Siya movie actress Akanksha Mohan commits suicide in a hotel at Mumbai. Read on
  Saturday, October 1, 2022, 18:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X