ಈದ್ ಹಬ್ಬಕ್ಕೆ ಸಲ್ಲು ಕೊಟ್ಟಿರೋ ಗಿಫ್ಟ್ ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು
ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾ ನಾಳೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಚಿತ್ರಪ್ರೇಮಿಗಳಿಗೆ ಫುಲ್ ಹಂಗಾಮವಾಗಿದೆ.
ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ ಸಿನಿಮಾ ಮಾತ್ರವಲ್ಲ, ಅದರ ಜೊತೆಗೆ ಮತ್ತೆ ಮೂರು ಉಡುಗೊರೆಯನ್ನ ನೀಡಿದ್ದಾರೆ. ಸಲ್ಮಾನ್ ಖಾನ್ ವಿಶೇಷ ಪಾತ್ರ ನಿರ್ವಹಿಸಿರುವ ಮತ್ತು ಹಿನ್ನಲೆ ಧ್ವನಿ ನೀಡಿರುವ ಚಿತ್ರಗಳ ಟೀಸರ್ ಬಿಡುಗಡೆಯಾಗಿದೆ.

'ಜೀರೋ' ಚಿತ್ರದಲ್ಲಿ ಸಲ್ಲು ಶೋ
ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಟೀಸರ್ ಇಂದು ಈದ್ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೂಪರ್ ಎಂಟ್ರಿ ಕೊಟ್ಟಿದ್ದಾರೆ.

ಸಲ್ಮಾನ್ ಬ್ಯಾನರ್ ಸಿನಿಮಾ ಟೀಸರ್
ಸಲ್ಮಾನ್ ಖಾನ್ ಅವರ ಸಂಬಂಧಿ ಆಯುಶ್ಸ ಶರ್ಮಾ ಅಭಿನಯದ 'ಲವ್ ರಾತ್ರಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನ ಸ್ವತಃ ಸಲ್ಲು ನಿರ್ಮಾಣ ಮಾಡಿದ್ದು, ಈಗ ಬಿಡುಗಡೆಯಾಗಿರುವ ಟೀಸರ್ ಗೆ ವಾಯ್ಸ್ ಓವರ್ ಕೂಡ ಕೊಟ್ಟಿದ್ದಾರೆ.

ಸಲ್ಮಾನ್ ಸ್ಪೆಷಲ್ ಎಂಟ್ರಿ
ಬಾಲಿವುಡ್ ನಟ ಧರ್ಮೇಂದ್ರ, ಬಾಬಿ ಡಿಯೋಲ್ ಅಭಿನಯದ 'ಯಮ್ಲಾ ಪಾಗ್ಲಾ ದಿವಾನ ಪಿರ್ ಸೇ' ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈದ್ ಹಬ್ಬದ ಪ್ರಯುಕ್ತ ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದ್ದು, ಸಲ್ಲು ಸೀನ್ ಕೂಡ ಹೈಲೈಟ್ ಆಗಿದೆ.


Click it and Unblock the Notifications











