OMG 2: ನಟ ಅಕ್ಷಯ್ ಕುಮಾರ್‌ಗೆ ಕಪಾಳಮೋಕ್ಷ ಮಾಡಿದರೇ 10 ಲಕ್ಷ ರೂಪಾಯಿ!

ಓ ಮೈ ಗಾಡ್ 2 (ಓಎಂಜಿ 2) ನಲ್ಲಿ ಭಗವಾನ್ ಶಿವನ ಗಣನಾಗಿ ಬರುವ ಅಕ್ಷಯ್ ಕುಮಾರ್ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿರುವ ರಾಷ್ಟ್ರೀಯ ಹಿಂದೂ ಪರಿಷತ್‌ ನಟ ಮತ್ತು ಚಿತ್ರತಂಡದ ಮೇಲೆ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಅಕ್ಷಯ್ ಕುಮಾರ್ ಅವರಿಗೆ ಕಪಾಳಕ್ಕೆ ಹೊಡೆದವರಿಗೆ ಹತ್ತು ಲಕ್ಷ ನೀಡುವುದಾಗಿ ಘೋಷಿಸಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಮೇಲೆ ಕಪಾಳಮೋಕ್ಷ ಮಾಡುವವರು ಅಥವಾ ಅವರ ಮೇಲೆ ಉಗುಳುವವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ಹಿಂದೂ ಪರಿಷತ್‌ ಘೋಷಿಸಿದೆ. ಈ ಬಗ್ಗೆ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ್ ಹೇಳಿಕೆ ನೀಡಿದ್ದಾರೆ. ಹಿಂದೂ ಸಂಘಟನೆಗಳು ಗುರುವಾರ ಆಗ್ರಾದಲ್ಲಿ ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹಿಸಿ ಚಿತ್ರದ ಪೋಸ್ಟರ್‌ಗಳನ್ನು ಸುಟ್ಟು ಹಾಕಿದವು.

slap-akshay-kumar-and-get-rs-10-lakh

ವರದಿಗಳ ಪ್ರಕಾರ, ರಾಷ್ಟ್ರೀಯ ಹಿಂದೂ ಪರಿಷತ್‌ನ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ್ ಪರಾಶರ್, ಚಿತ್ರದಲ್ಲಿ ಅಕ್ಷಯ್‌ನ ಶಿವನ ಚಿತ್ರಣ, ವಿಶೇಷವಾಗಿ ಜಟೆ ಮತ್ತು ಬೂಟುಗಳನ್ನು ಧರಿಸಿರುವ ಅವರ ನೋಟ, ಕಚೋರಿಗಳನ್ನು ಖರೀದಿಸುವುದು ಮತ್ತು ಕೊಳಕು ಕೊಳದಲ್ಲಿ ಸ್ನಾನ ಮಾಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಣಗಳು ಶಿವನ ಪ್ರತಿಷ್ಠೆಗೆ ಕಳಂಕ ತರುತ್ತವೆ ಎಂದು ಹೇಳಿದ್ದಾರೆ.

ಹಿಂದೂ ಸಂಘಟನೆಯು ಸೆನ್ಸಾರ್ ಮಂಡಳಿ ಮತ್ತು ಭಾರತದ ಕೇಂದ್ರ ಸರ್ಕಾರಕ್ಕೆ ಓ ಮೈ ಗಾಡ್ 2 ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದವು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದರು. ಆದರೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮಂಡಳಿಯು ಚಿತ್ರಕ್ಕೆ ಎ ಪ್ರಮಾಣ ಪತ್ರ ನೀಡಿದೆ. ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬಂದಿದೆ.

ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅವರ ಓಎಂಜಿ 2, ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್' ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಲಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಕಡ್ಡಾಯವಾಗಿ ಭೋದಿಸಬೇಕು ಎಂಬುದನ್ನು ಸಿನಿಮಾ ಒತ್ತಿ ಹೇಳಿದೆ.

ಶಿವನ ಪರಮ ಭಕ್ತ ಕಾಂತಿ ಶರಣ್ ಮುದ್ಗಲ್ (ಪಂಕಜ್ ತ್ರಿಪಾಠಿ) ಸಹಾಯಕ್ಕೆ ಶಿವನು ತನ್ನ ಶಿವಗಣದ ಸದಸ್ಯನನ್ನಾಗಿ ಅಕ್ಷಯ್ ಕುಮಾರ್ ಅವರನ್ನು ಕಳುಹಿಸುತ್ತಾರೆ. ಚಿತ್ರದಲ್ಲಿ ಯಾಮಿ ಗೌತಮ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾಲೆಯಲ್ಲಿ ಹಸ್ತಮೈಥನ ಮಾಡಿಕೊಂಡು ಸಿಕ್ಕಿಬೀಳುವ ಮಗನ ರಕ್ಷಣೆಗೆ, ಲೈಂಗಿಕ ಶಿಕ್ಷಣದ ಅವಶ್ಯಕತೆ ಬಗ್ಗೆ ನಾಯಕ ಹೋರಾಡುತ್ತಾರೆ.

More from Filmibeat

English summary
Rashtriya Hindu Parishan Bharat demands ban on Akshay Kumar starrer OMG 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X