15 ಕೋಟಿ ಕೊಟ್ಟರೆ ದುಬೈ ಶೇಖ್ ಜೊತೆ ಮಲಗಲು ನಾನು ರೆಡಿ ; ರೆಬೆಲ್ ಕಿಡ್ ಮಾತಿಗೆ ಭುಗಿಲೆದ್ದ ಆಕ್ರೋಶ
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ .. ಮನುಜ ಸೂಕ್ಷ್ಮತೆ .. ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ವೆರೈಟಿ ವೆರೈಟಿ ವೇಷವನ್ನು ಹಾಕಿಕೊಂಡು ಓಡಾಡುತ್ತಾರೆ.
ಇನ್ನೂ ಕೆಲವರು ದುಡ್ಡು ಸಿಗುತ್ತೆ ಎಂದು ಯಾರದ್ದೋ ಮದುವೆಗೆ ಅತಿಥಿಗಳಾಗಿ ಹೋಗುತ್ತಾರೆ. ಮತ್ತೂ ಕೆಲವರು ದುಡ್ಡಿನ ಆಸೆಗೆ ತಮ್ಮ ಮೈಯನ್ನೂ ಕೂಡ ಇಲ್ಲಿ ಮಾರಿಕೊಳ್ಳುತ್ತಾರೆ. ಬೆಳಗ್ಗೆಯೆಲ್ಲಾ ತತ್ವ ಸಿದ್ಧಾಂತಗಳ ಬೋಧನೆ ಮಾಡುವ ಇವರು ಒಂದು ಚೂರು ನಾಚಿಕೆ ಮಾನ ಮರ್ಯಾದೆ ಇಲ್ಲದೆ ದುಡ್ಡು ಸಿಗುತ್ತೆ ಎನ್ನುವುದಾದರೆ ನಾನೆಲ್ಲದಕ್ಕೂ ರೆಡಿ ಎನ್ನುತ್ತಾರೆ. ಉದಾಹರಣೆಗೆ ಅಪೂರ್ವ ಮುಖಿಜಾ.

ಹೌದು, ಅಪೂರ್ವ ಮುಖಿಜಾ .. ಉತ್ತರ ಭಾರತದ ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಅಲ್ಲೆಲ್ಲಾ ''ದಿ ರೆಬಲ್ ಕಿಡ್'' ಎಂದೇ ಪ್ರಖ್ಯಾತರಾದವರು ಇವರು. ಕಳೆದ ವರ್ಷದ ಆರಂಭದಲ್ಲಿ ಮತ್ತೊಬ್ಬ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಪೋಷಕರ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾಗ ಅಲ್ಲಿಯೇ ಮೈ ಕುಲುಕಿಸಿಕೊಂಡು ನಕ್ಕವರಲ್ಲಿ ಇವರು ಕೂಡ ಒಬ್ಬರು.
ಈ ಕಾರ್ಯಕ್ರಮದ ನಂತರ ದೇಶವ್ಯಾಪಿ ಆಕ್ರೋಶಕ್ಕೆ ಗುರಿಯಾದ ಅಪೂರ್ವ ಮುಖಿಜಾ ಹಿಂದೊಮ್ಮೆ ಬದುಕಲು ಬೆಂಗಳೂರು ಯೋಗ್ಯವಾದ ಊರಲ್ಲ ಎಂದು ಹೇಳಿದ್ದರು. ಆ ನಗರಕ್ಕೆ ಆತ್ಮ ಇಲ್ಲ, ಕನ್ನಡ ಗೊತ್ತಿಲ್ಲ ಎಂದು ಆಟೋ ಚಾಲಕ ನನ್ನ ಜೊತೆ ಮಾತನಾಡಲಿಲ್ಲ ಎಂದು ಹೇಳಿದ್ದ ಅಪೂರ್ವ ಬೆಂಗಳೂರನ್ನು ನಾನು ಯಾವತ್ತು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದರು. ಈ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು. ಆಕ್ರೋಶಕ್ಕೆ ಗುರಿಯಾಗಿದ್ದರು.
ಇಷ್ಟೇ ಅಲ್ಲ ಇದಕ್ಕೂ ಮುನ್ನ ಕೊಚೆಲ್ಲಾ ಮ್ಯೂಸಿಕ್ ಅಂಡ್ ಆರ್ಟ್ಸ್ ಫೆಸ್ಟಿವಲ್‌ಗೆ ಹೋಗುವ ಮುನ್ನ "ಗೆಟ್ ರೆಡಿ ವಿತ್ ಮೀ" ಎಂಬ ಶೀರ್ಷಿಕೆಯಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಅಪೂರ್ವ, ತಮ್ಮ ಕೈಯಲ್ಲಿದ್ದ ದಾರವನ್ನು ಕತ್ತರಿಸಿದ್ದರು. ಪಂಡಿತರು ದಾರ ಕತ್ತರಿಸದಂತೆ ಹೇಳಿದ್ದರೂ, ನನ್ನ ಸುಂದರವಾದ ಲುಕ್ ಮತ್ತು ಕೊಚೆಲ್ಲಾ ಫೋಟೋಗಳ ಮಧ್ಯೆ ಯಾರಾದರೂ ಬರಲು ಸಾಧ್ಯವಿದ್ದರೆ ಅದು ನಾನು ಮಾತ್ರ ಎಂದು ಹೇಳಿದ್ದರು. ಈ ಮೂಲಕ ಅನೇಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರು.
ಇಂಥಾ ಅಪೂರ್ವ ಮುಖಿಜಾ 15 ಕೋಟಿ ನನ್ನ ಮುಖದ ಮೇಲೆ ಎಸೆದರೆ ನಾನು ಮಲಗಲು ರೆಡಿ ಎಂದು ಹೇಳಿದ್ದಾರೆ. ದುರಂತ ಅಂದರೆ ಚಿತ್ರರಂಗ ''ಕಾಸ್ಟಿಂಗ್ ಕೌಚ್" ಎಂಬ ಪಿಡುಗಿನಿಂದ ನರಳುತ್ತಿದೆ. ಚಿತ್ರರಂಗದಲ್ಲಿ ಸಣ್ಣ ಅವಕಾಶಗಳಿಗಾಗಿ, ಯಶಸ್ಸಿನ ಉತ್ತುಂಗಕ್ಕಾಗಿ, ಹಲವಾರು ಉದಯೋನ್ಮುಖ ಪ್ರತಿಭೆಗಳು ತಮ್ಮ ಆತ್ಮಗೌರವವನ್ನು ಪಣಕ್ಕಿಡಬೇಕಾದ ಕರಾಳ ವ್ಯವಸ್ಥೆ ಚಿತ್ರರಂಗದಲ್ಲಿದೆ.

ಚಿತ್ರರಂಗದಲ್ಲಿ ಈ ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿಯ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ಮಾತನಾಡಿದ್ದಾರೆ. ತಮ್ಮ ಕಹಿ ಅನುಭವ ನೆನೆದು ಬಿಕ್ಕಿದ್ದಾರೆ. ಹೀಗಿರುವಾಗ ಅಪೂರ್ವ ಮುಖಿಜಾ ಅಂತವರು ದುಡ್ಡಿದ್ದರೆ ಎಲ್ಲದಕ್ಕೂ ಸೈ ಎಂದು ಸಾರ್ವಜನಿಕವಾಗಿಯೇ ಘೋಷಣೆ ಮಾಡುತ್ತಿದ್ದಾರೆ. ಇದು ಚಿತ್ರರಂಗದ ವಿಲಕ್ಷಣ ಬೆಳವಣಿಗೆಯೂ ಹೌದು.
ಈ ಕುರಿತು ಮಾತನಾಡಿರುವ ಅಪೂರ್ವ ಮುಖಿಜಾ, ''ಕ್ಷಮಿಸಿ, ಪಾತ್ರ ಸಿಗುತ್ತೆ ಎಂದು ನಾನು ಕೇವಲ ಎರಡು ರೂಪಾಯಿಗೆ ಯಾರ ಜೊತೆಯೂ ಮಲಗುವುದಿಲ್ಲ, ಆದರೆ.. ಒಂದು ವೇಳೆ ದುಬೈ ಶೇಖ್ ಯಾರಾದರೂ ಬಂದು ನನ್ನ ಮುಖಕ್ಕೆ 10-15 ಕೋಟಿ ರೂಪಾಯಿ ಎಸೆದರೆ, ಬಹುಶಃ ನಾನು ಯೋಚಿಸಬಹುದು'' ಎಂದು ಹೇಳಿದ್ದಾರೆ. ಸಿನಿಮಾ ಪಾತ್ರಕ್ಕಾಗಿ ನಾನು ಖಂಡಿತ ರಾಜಿಯಾಗುವುದಿಲ್ಲ ಎಂದಿದ್ದಾರೆ.
ಮುಂದುವರೆದು ಇದೇ ವಿಡಿಯೋದಲ್ಲಿ ''ಕಾಸ್ಟಿಂಗ್ ಡೈರೆಕ್ಟರ್ ಒಬ್ಬರ ಜೊತೆ ಮಾತನಾಡುವಾಗ ನನಗೆ ಚೂರು ಅಳುಕಿತ್ತು ಎಂದು ಕೂಡ ಹೇಳಿರುವ ಅಪೂರ್ವ ಇಂತಹ ಅವಕಾಶಗಳನ್ನು ತಾವು ಪರಿಶೀಲಿಸುವುದಾಗಿ ಹೇಳುತ್ತಾ, ತಮ್ಮ ಮ್ಯಾನೇಜರ್‌ನ ಸಂಪರ್ಕ ವಿವರ''ಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಅಪೂರ್ವ ಮುಖಿಜಾ ಅವರ ಈ ಹೇಳಿಕೆ ಸದ್ಯ ಹಲವರನ್ನು ಕೆರಳಿಸಿದೆ. ಇನ್ನು ಇತ್ತೀಚೆನ ದಿನಗಳಲ್ಲಿ ಹಲವು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಮತ್ತು ನಾಯಕಿಯರು ದುಬೈಗೆ ಮೇಲಿಂದ ಮೇಲೆ ಹೋಗಿ ಬರುತ್ತಿದ್ಧಾರೆ. ಇವರ ಈ ಪ್ರವಾಸ ಕಥನದ ಮೇಲೆ ಹಲವರಿಗೆ ಅನುಮಾನ ಇದೆ. ಅಲ್ಲಿನ ಶ್ರೀಮಂತ ಬಿಲಿಯನೇರ್‌ಗಳು ನೀಡುವ ಭಾರಿ ಹಣದ ಬದಲಾಗಿ ಇನ್ಫ್ಲುಯೆನ್ಸರ್‌ಗಳು ಕೆಲವು ಕೀಳುಮಟ್ಟದ ಬೇಡಿಕೆಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ವದಂತಿಗಳು ಇವೆ. ಹೀಗಿರುವಾಗ ಅಪೂರ್ವ ಮುಖಿಜಾ ದುಬೈ ಶೇಖ್ ವಿಚಾರ ಪ್ರಸ್ತಾಪಿಸಿದ್ದಾರೆ. ಇಂಟರ್ನೆಟ್‌ನಲ್ಲಿ ಹಲವರು ಕೆರಳಲು ಇದು ಕೂಡ ಪ್ರಮುಖ ಕಾರಣ.
ಅಂದ್ಹಾಗೇ ಅಪೂರ್ವ ಮುಖಿಜಾ ಅವರ ಈ ಹೇಳಿಕೆ ಇಂದು ನಿನ್ನೆಯದಲ್ಲ. ಕೆಲ ತಿಂಗಳ ಹಿಂದೆ ಅಪೂರ್ವ ಬಾಯಿಂದ ಉದುರಿದ್ದ ಅಣಿಮುತ್ತುಗಳಿವು. ಆದರೆ, ಅಂದು ಮಾತನಾಡಿದ್ದ ವಿಡಿಯೋ ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿವಾದದ ಕಿಡಿಯನ್ನು ಹೊತ್ತಿಸಿದೆ.


Click it and Unblock the Notifications