ಅವಕಾಶ ಬೇಕು ಎಂದರೆ ನನ್ನ ಜೊತೆ ಮಲಗು, 22ರ ಹರೆಯದ ನಟಿಗೆ ನಿರ್ದೇಶಕರಿಂದ ಕಿರುಕುಳ..!

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

ಇದಕ್ಕೆ ಕಾಶಿಕಾ ಕಪೂರ್ ಮತ್ತೊಂದು ಉದಾಹರಣೆ. ಹೌದು, 'ಆಯುಷ್ಮತಿ ಗೀತಾ ಮೆಟ್ರಿಕ್ ಪಾಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಾಶಿಕಾಗೆ ಈಗ 22ರ ಹರೆಯ. ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗದತ್ತ ಆಕರ್ಷಿತರಾದ ಕಾಶಿಕಾ ಇಲ್ಲಿಯವರೆಗೆ ಸುಮಾರು 150ಕ್ಕೂ ಅಧಿಕ ಆಡಿಷನ್‌ಗಳನ್ನು ನೀಡಿದ್ದಾರೆ. ಆದರೆ, ಕಾಶಿಕಾ ದುರಾದೃಷ್ಟಕ್ಕೆ ಒಂದು ಚಿತ್ರದಲ್ಲಿಯೂ ಕೂಡ ಇವರಿಗೆ ಅವಕಾಶ ಸಿಗಲಿಲ್ಲ. ಬದಲಿಗೆ ಅವಮಾನಗಳಾಗಿವೆ. ಕಹಿ ಅನುಭವಗಳಾಗಿವೆ.

Sleep With Me If You Want Work After 150 Rejections 22-Year-Old Actress Says Casting Couch Exists

ಇಂಥಾ ಕಾಶಿಕಾ ಕಪೂರ್ ಚಪಲ ಚನ್ನಿಗ ನಿರ್ದೇಶಕನೊಬ್ಬ ತಮಗೆ ನೀಡಿದ್ದ ಮಾನಸಿಕ ಕಿರುಕುಳದ ಕುರಿತು ಈಗ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಶಿಕಾ ಕಪೂರ್ ನಿರ್ದೇಶಕರೊಬ್ಬರು ನನಗೆ ಬೆಳಗ್ಗೆ 3ಕ್ಕೆ ಕರೆ ಮಾಡುತ್ತಿದ್ದರು. ನಾನು ನಿನಗೆ ಕೆಲಸ ಕೊಡುತ್ತೇನೆ, ಆದರೆ ನೀನು ನನ್ನ ಜೊತೆ ಮಲಗಬೇಕು ಎಂದು ಪೀಡಿಸುತ್ತಿದ್ದರು ಎಂದು ಹೇಳಿದ್ದಾರೆ.

ಪ್ರತಿ ಬಾರಿ ಕರೆ ಮಾಡಿ ಆ ವ್ಯಕ್ತಿ ಹೀಗೆ ಮಾತನಾಡಿದಾಗೆಲ್ಲ ನಾನು ನಿರಾಕರಿಸುತ್ತಾನೇ ಬಂದೆ ಎಂದಿರುವ ಕಾಶಿಕಾ ಹತ್ತು ವರ್ಷಗಳ ನಂತರ ಕನ್ನಡಿಯಲ್ಲಿ ನನ್ನನ್ನು ನಾನು ನೋಡಿದಾಗ ನನಗೆ ನಾಚಿಕೆಯಾಗಬಾರದು ಎಂದು ಹೇಳಿದ್ದಾರೆ. ಅವಕಾಶಕ್ಕೆ ನಾನು ತಪ್ಪು ದಾರಿಯನ್ನು ತುಳಿಯಲಾರೆ ಎಂದು ಹೇಳಿದ್ದಾರೆ. ಯಾರು ಏನೇ ಹೇಳಲಿ ಆದರೆ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇನ್ನು ಇದೆ ಎಂದು ಕಾಶಿಕಾ ಹೇಳಿದ್ದಾರೆ.

ಮುಂದುವರೆದು ನಮ್ಮಲ್ಲಿನ ಪ್ರತಿಭೆಗೆ ಮಣೆ ಹಾಕದ ಇಂತಹ ನಿರ್ದೇಶಕರು ಚಿತ್ರಕ್ಕೆ ಸಂಬಂಧಿಸಿದ ವಿಚಾರಕ್ಕಿಂತ ಸಂಬಂಧ ಇಲ್ಲದ ವಿಚಾರಗಳನ್ನು ಯಾಕೆ ಮಾತನಾಡುತ್ತಾರೆ ಎನ್ನುವುದೇ ನನಗೆ ಅರ್ಥವಾಗಲ್ಲ ಎಂದು ಹೇಳಿರುವ ಕಾಶಿಕಾ ನನ್ನ ತಾಯಿ ನಿನ್ನತನವನ್ನು ಅಡ ಇಡಬೇಡ ಎಂದು ನನಗೆ ಹೇಳುತ್ತಿದ್ದರು, ಅವರು ಕಲಿಸಿದ ಬದುಕಿನ ಪಾಠಗಳೇ ನನಗೆ ಶಕ್ತಿ ಎಂದು ಹೇಳಿದ್ದಾರೆ.

ಚಿತ್ರರಂಗಕ್ಕೆ ನಾನು ಈಗಷ್ಟೇ ಬಂದಿದ್ದೇನೆ, ಇನ್ನೂ ಸಾಗಬೇಕಾದ ದಾರಿ ತುಂಬಾ ಇದೆ ಎಂದು ಹೇಳಿರುವ ಕಾಶಿಕಾ ಎಲ್ಲಿಯೂ ರಾಜಿ ಮಾಡಿಕೊಳ್ಳದೇ ನನ್ನ ಪ್ರತಿಭೆಯ ಬಲದಿಂದ ಮೊದಲ ಅವಕಾಶ ಪಡೆದಿದ್ದಕ್ಕೆ ನನಗೆ ಹೆಮ್ಮೆ ಇದೆ ಎದು ಹೇಳಿರುವ ಕಾಶಿಕಾ ಸವಾಲಿನ ಪಾತ್ರಗಳನ್ನು ನಿರ್ವಹಿಸುವುದು ನನಗೆ ಇಷ್ಟ ಆ ತರಹದ ಪಾತ್ರಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಹಿಂದಿಯಲ್ಲಿ ತಮ್ಮ ಮೊದಲ ಚಿತ್ರ 'ಆಯುಷ್ಮತಿ ಗೀತಾ ಮೆಟ್ರಿಕ್ ಪಾಸ್' ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿರುವ ಕಾಶಿಕಾ ಕಪೂರ್, 'ಎಲ್‌ವೈಎಫ್‌' { ಲವ್ ಯೂರ್ ಫಾದರ್ } ಎಂಬ ತೆಲುಗು ಚಿತ್ರವನ್ನು ಕೂಡ ಮಾಡಿದ್ದಾರೆ. ಶ್ರೀ ಹರ್ಷ, ಎಸ್‌ಪಿ ಚರಣ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ 'ದಿ ವೈಬ್ ಹಂಟರ್ಸ್' ಎಂಬ ವೆಬ್ ಸರಣಿಯಲ್ಲಿ ಕೂಡ ಕಾಶಿಕಾ ನಟಿಸಿದ್ದು ವೂಟ್‌ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.

More from Filmibeat

Read more about: casting couch actress bollywod
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X