ನಟಿ, ರಾಜಕಾರಣಿ ಸ್ಮೃತಿ ಇರಾನಿ ಮಗಳ ಮದುವೆ, ಎಲ್ಲಿ? ವರ ಯಾರು?

By ಫಿಲ್ಮಿಬೀಟ್ ಡೆಸ್ಕ್

ಒಂದು ಕಾಲದ ಭಾರಿ ಜನಪ್ರಿಯ ಕಿರುತೆರೆ ನಟಿ, ಈಗಿನ ಪ್ರಭಾವಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಪುತ್ರಿ ಶಾನೆಲ್ಲ ಇರಾನಿಯ ವಿವಾಹ ಫೆಬ್ರವರಿ 09 ರಿಂದ ರಾಜಸ್ಥಾನದಲ್ಲಿ ನಡೆಯುತ್ತಿದೆ.

ಬಾಲಿವುಡ್ ಮದುವೆಗಳ ಮಾದರಿಯಲ್ಲಿಯೇ ಸ್ಮೃತಿ ಇರಾನಿ ತಮ್ಮ ಪುತ್ರಿಯ ಮದುವೆಯನ್ನು ಜೈಪುರದ ಅದ್ಧೂರಿ ಅರಮನೆಯಲ್ಲಿ ಮಾಡುತ್ತಿದ್ದಾರೆ.

ಕೆನಡಾದಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಉದ್ಯಮಿ ಅರ್ಜುನ್ ಭಲ್ಲ ಜೊತೆಗೆ ಸ್ಮೃತಿ ಇರಾನಿಯ ವಿವಾಹ ನಡೆಯಲಿದೆ. ಇದೇ ವರ್ಷದ ಮೊದಲ ತಿಂಗಳಿನಲ್ಲಿ ಇವರಿಬ್ಬರೂ ಎಂಗೇಜ್ ಆಗಿದ್ದರು. ಸ್ಮೃತಿ ಪುತ್ರಿ ವಿವಾಹದ ಬಳಿಕ ಕೆನಡಾಕ್ಕೆ ತೆರಳಲಿದ್ದಾರೆ.

Smriti Irani Daughter Shanelle Iranis Marriage With Arjun Bhalla

ಇನ್ನು ಸ್ಮೃತಿ ಇರಾನಿ ತಮ್ಮ ಪುತ್ರಿಯ ವಿವಾಹವನ್ನು ಜೈಪುರದ ಅದ್ಧೂರಿ 'ಕಾಶ್ಮೀರ್ ಫೋರ್ಟ್‌'ನಲ್ಲಿ ನಡೆಸಲಿದ್ದಾರೆ. ವಿವಾಹ ಕಾರ್ಯಕ್ರಮವು ಫೆಬ್ರವರಿ 9 ರಿಂದ ಆರಂಭವಾಗಲಿದೆ. ಮದುವೆಗೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ.

ಸ್ಮೃತಿ ಇರಾನಿ ಪುತ್ರಿಯ ಮದುವೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ರಾಷ್ಟ್ರಮಟ್ಟದ ನಾಯಕರುಗಳು ಆಗಮಿಸಲಿದ್ದಾರೆ. ಜೊತೆಗೆ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಸಹ ಮದುವೆಗೆ ಆಗಮಿಸಲಿದ್ದಾರೆ. ಶಾರುಕ್ ಖಾನ್, ಅಮಿತಾಬ್ ಬಚ್ಚನ್, ಏಕ್ತಾ ಕಪೂರ್, ಕೆಲವು ಟಿವಿ ತಾರೆಯರು ಸಹ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಮೃತಿ ಇರಾನಿ ಹಾಲಿ ಕೇಂದ್ರ ಸಚಿವೆಯಾಗಿದ್ದಾರೆ. ಆದರೆ ಈ ಮೊದಲು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. 1999 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದ ಸ್ಮೃತಿ ಇರಾನಿ ಆ ನಂತರ ಆಲ್ಬಂ ಹಾಡುಗಳಲ್ಲಿ ನರ್ತಿಸಿದ್ದರು. ಬಳಿಕ 'ಆತಿಶ್' ಹಾಗೂ 'ಹಮ್ ಹೇ ಕಲ್ ಆಜ್ ಔರ್ ಕಲ್' ಧಾರಾವಾಹಿಗಳ ಮೂಲಕ ನಟನೆಗೆ ಪ್ರವೇಶಿಸಿದರು. ಆದರೆ ಸ್ಮೃತಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿದ್ದು, ಏಕ್ತಾ ಕಪೂರ್ ನಿರ್ಮಾಣದ 'ಸಾಸ್ ಭಿ ಕಭಿ ಬಹು ಥೀ' ಧಾರಾವಾಹಿ. ಈ ಭಾರಿ ಜನಪ್ರಿಯ ಧಾರಾವಾಹಿಯಲ್ಲಿ ತುಳಸಿಯಾಗಿ ಸ್ಮೃತಿ ಇರಾನಿ ಮನೆ ಮಾತಾದರು.

ಆ ಬಳಿಕ 'ರಾಮಾಯಣ' ಧಾರಾವಾಹಿಯಲ್ಲಿ ಸೀತಾ ಪಾತ್ರವೂ ಸಹ ಸ್ಮೃತಿ ಇರಾನಿಗೆ ಭಾರಿ ಹೆಸರು ತಂದುಕೊಟ್ಟಿತು. ಆ ಬಳಿಕ ಕೆಲವು ಟಿವಿ ಧಾರಾವಾಹಿಗಳು, ಶೋಗಳನ್ನು ನಿರ್ಮಾಣ ಸಹ ಮಾಡಿದರು ಸ್ಮೃತಿ. 2003 ರಲ್ಲಿ 'ಸಾಸ್ ಭಿ ಕಭಿ ಬಹು ಥೀ' ಧಾರಾವಾಹಿಯಲ್ಲಿ ನಟಿಸುವಾಗಲೇ ಸ್ಮೃತಿ ಇರಾನಿ ಬಿಜೆಪಿ ಸೇರಿದರು. 2014 ರಲ್ಲಿ ಮೊದಲ ಭಾರಿ ಸಚಿವೆಯೂ ಆದರು.

More from Filmibeat

English summary
Actress, Union minister Smriti Irani daughter Shanelle Irani's marriage with Arjun Bhalla in Jaipur on February 09.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X