ವಿಡಿಯೋ: ಆಲಿಯಾ ಭಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾವು!
ಬಾಲಿವುಡ್ ನಟಿ ಆಲಿಯಾ ಭಟ್ ಮನೆಗೆ ವಿಶೇಷ ಅತಿಥಿ ಒಬ್ಬರು ಬಂದಿದ್ದರು. ಆಲಿಯಾ ಭಟ್ ಈಜುಕೊಳದಲ್ಲಿ ಈಜಾಡಿ ಹೋಗಿದ್ದಾರೆ ಆ ವಿಶೇಷ ಅತಿಥಿ.
Recommended Video
ಹೌದು, ಆಲಿಯಾ ಭಟ್ ಮನೆಯಲ್ಲಿನ ಈಜುಕೊಳಕ್ಕೆ ಹಾವೊಂದು ಬಂದಿದೆ. ಹಾವು ಈಜುಕೊಳದಲ್ಲಿ ಈಜಾಡುತ್ತಿರುವುದನ್ನು ಆಲಿಯಾ ಭಟ್ ತಾಯಿ ವಿಡಿಯೋ ಮಾಡಿದ್ದಾರೆ.
ಸಾಕಷ್ಟು ಉದ್ದವಿರುವ ಹಾವು ಈಜುಕೊಳದಲ್ಲಿ ಈಜಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಹಾವು ಎಲ್ಲಿಂದ ಬಂತು, ಏನಾಯಿತು ಎಂದು ಅಭಿಮಾನಿಗಳು ಆತಂಕದಿಂದ ವಿಚಾರಿಸುತ್ತಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ಆಲಿಯಾ ಭಟ್ ತಾಯಿ
ವಿಡಿಯೋವನ್ನು ಹಂಚಿಕೊಂಡಿರುವ ಆಲಿಯಾ ಭಟ್ ತಾಯಿ ಸೋನಿ ರಜ್ದಾನ್, 'ನಮ್ಮ ಈಜುಕೊಳಕ್ಕೆ ವಿಶೇಷ ಅತಿಥಿ ಬಂದಿದ್ದರು, ಮೊದಲು ನೀರು ಕುಡಿದರು, ನಂತರ ಕೆಲ ಕಾಲ ಈಜಾಡಿದರು. ನಂತರ ಅವರನ್ನು ಪೊದೆಗಳ ಒಳಕ್ಕೆ ಸರಿದು ಹೋಗಲು ಬಿಟ್ಟೆವು' ಎಂದು ಬರೆದುಕೊಂಡಿದ್ದಾರೆ.

ಸಾಕಷ್ಟು ಉದ್ದವಿದೆ ಹಾವು!
ಆಲಿಯಾ ಭಟ್ ಮನೆಯ ಸ್ವಿಮ್ಮಿಂಗ್ ಫೂಲ್ ಸುತ್ತ ಅವರೇ ಬೆಳೆಸಿರುವ ಗಿಡಗಳ ಪೊದೆಗಳು ಇವೆ, ಅಲ್ಲಿಂದ ಹಾವು ಈಜುಕೊಳಕ್ಕೆ ಬಂದಿದೆ. ಸಾಕಷ್ಟು ಉದ್ದವೇ ಇರುವ ಹಾವು ನೋಡಿದೊಡನೆ ಭಯವಾಗುವಂತಿದೆ.
ಪಕ್ಕದ ಪೊದೆಯೊಳಕ್ಕೆ ಹೊಕ್ಕಿಬಿಡುತ್ತದೆ
ಹಾವು ಈಜಾಡುತ್ತಿರುವ ಎರಡು ವಿಡಿಯೋವನ್ನು ಆಲಿಯಾ ಭಟ್ ತಾಯಿ ಹಂಚಿಕೊಂಡಿದ್ದು, ಮೊದಲನೆಯದರಲ್ಲಿ ಹಾವು ಈಜಾಡುತ್ತಿದೆ. ಎರಡನೇ ವಿಡಿಯೋದಲ್ಲಿ ಈಜಾಡುತ್ತಿರುವ ಹಾವು ಹಠಾತ್ತನೆ ಈಜುಕೊಳದ ಪಕ್ಕದ ಗಿಡಗಳ ಪೊದೆಯೊಳಕ್ಕೆ ಹೊಕ್ಕಿಬಿಡುತ್ತದೆ.

ಸಡಕ್ 2 ಬಿಡುಗಡೆಗೆ ತಯಾರಾಗಿದೆ
ನಟಿ ಆಲಿಯಾ ಭಟ್ ಅವರ ಸಡಕ್ 2 ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿಕ್ಕಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಆಲಿಯಾ ಅನ್ನು ವಿಲನ್ ಮಾಡಲಾಗಿದ್ದು, ಸಾಕಷ್ಟು ಮೂದಲಿಕೆ, ಟ್ರೋಲಿಂಗ್ ಅನ್ನು ಆಲಿಯಾ ಎದುರಿಸುತ್ತಿದ್ದಾರೆ.


Click it and Unblock the Notifications











