ಅವತ್ತು ಅವಮಾನ ಇವತ್ತು ಸನ್ಮಾನ ; ಹಾಲಿವುಡ್ ಗೆ ಎಂಟ್ರಿ ಕೊಟ್ಟ ಸ್ಟಾರ್ ನಟಿಯ ಕಥೆ..!

ಗಾಡ್‌ಫಾದರ್, ಶ್ರೀಮಂತಿಕೆ, ಯಾರದೂ ಪ್ರಭಾವವಿಲ್ಲದೆ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಅದ್ರದ್ದೇ ಆದ ಸವಾಲುಗಳು ಇರ್ತಾವೆ. ಅಡಿಗಡಿಗೂ ಅವಮಾನಗಳನ್ನೂ ಎದುರಿಸಬೇಕಾಗುತ್ತೆ. ಹೆದರಿ ಓಡಿ ಹೋಗದೇ, ಬಂದಿದ್ದನ್ನೆಲ್ಲ ಎದುರಿಸಿ ಎದ್ದು ನಿಂತಾಗಲೇ ಬದುಕಿನ ಪಥ ಬದಲಾಗುತ್ತೆ. ಇದಕ್ಕೆ ಶೋಭಿತಾ ಧೂಲಿಪಾಲ ಅತ್ಯುತ್ತಮ ಉದಾಹರಣೆ

ನಿಮಗೆ ಗೊತ್ತಿರಲಿ, ಶೋಭಿತಾ ಬೆಸಿಕಲಿ ಆಂಧ್ರ ಪ್ರದೇಶದ ತೆನಾಲಿಯವರು. ಸಿನಿಮಾ ರಂಗಕ್ಕೂ ಇವರ ಕುಟುಂಬಕ್ಕೂ ಸಂಬಂಧವೇ ಇಲ್ಲ. ಆದರೂ ಬಣ್ಣದ ಆಕರ್ಷಣೆಗೆ ಒಳಗಾದ ಶೋಭಿತಾ 2013ರ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗಿಯಾದರು.

Sobhita Dhulipala Makes Her Hollywood Debut.

ಚಿತ್ರರಂಗದಲ್ಲಿ ನೆಲೆ ನಿಲ್ಲಬೇಕು ಎಂಬ ನಿಟ್ಟಿನಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರ ಕಛೇರಿಯ ಬಾಗಿಲನ್ನೂ ಬಡೆದರು. 2013ರಿಂದ 2016ರವರೆಗೆ ಹೆಚ್ಚು ಕಡಿಮೆ ಒಂದು ಸಾವಿರ ಸ್ಥಳಗಳಿಗೆ ತೆರಳಿ ಆಡಿಷನ್ ಕೂಡ ಕೊಟ್ಟರು. ಆದರೆ ಫಲ ಸಿಗಲಿಲ್ಲ. ಬದಲಿಗೆ ಸಿಕ್ಕಿದ್ದು ನೋವು, ನಿರಾಸೆ, ತಿರಸ್ಕಾರ ಮತ್ತು ಹೀಯಾಳಿಕೆ

ನೀನು ನೋಡಲು ಸುಂದರವಾಗಿಲ್ಲ ಎಂದು ಕೆಲವರು ವ್ಯಂಗ ಮಾಡಿದರು. ಇನ್ನೂ ಕೆಲವರು ನಿನ್ನ ಮೈ ಬಣ್ಣ ಕಪ್ಪು ಎಂದು ಜರಿದರು. ಆದರೆ ಶೋಭಿತಾ ಮಾತ್ರ ಕುಗ್ಗಲಿಲ್ಲ. ಬೆದರಲಿಲ್ಲ. ಯಾಕೆಂದರೆ ಶೋಭಿತಾ ಗಮನ ಗಮ್ಯದತ್ತ ಇತ್ತು. ಆಡಿಕೊಳ್ಳೋರ ಮುಂದೆ ಯಾವುದೇ ಕಾರಣಕ್ಕೂ ಎಡವಿ ಬೀಳಬಾರದೆಂಬ ಹಠ ಇತ್ತು.

Sobhita Dhulipala Makes Her Hollywood Debut.

ಹೀಗಾಗಿಯೇ ಎಷ್ಟೇ ಅವಮಾನ ಆದರೂ ನಿರಂತರ ಪ್ರಯತ್ನವನ್ನ ಶೋಭಿತಾ ಮಾಡ್ತಾನೇ ಬಂದರು. ಪರಿಣಾಮ, 2015ರಲ್ಲಿ ಅದೃಷ್ಟದ ಬಾಗಿಲು ತೆರೆಯಿತು. ಅನುರಾಗ್ ಕಶ್ಯಪ್ ನಿರ್ದೇಶನದ ರಮನ್ ರಾಘವ 2.0 ಚಿತ್ರಕ್ಕೆ ನಾಯಕಿಯಾಗುವ ಸುವರ್ಣ ಅವಕಾಶ ಸಿಕ್ಕಿತು.

ಸಿಕ್ಕ ಅವಕಾಶವನ್ನ ಸಮರ್ಥವಾಗಿ ಬಳಿಸಿಕೊಂಡ ಶೋಭಿತಾ, ಮೊದಲ ಚಿತ್ರದಲ್ಲಿಯೇ ಛಾಪು ಮೂಡಿಸಿದರು. ಪ್ರತಿಷ್ಠಿತ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನವಾಯಿತು. ಆ ನಂತರ ಹಿಂದೆ ತಿರುಗಿ ನೋಡದ ಶೋಭಿತಾ ಒಂದಾದ ಮೇಲೊಂದು ಸಿನಿಮಾ ಮಾಡತೊಡಗದಿರು.

Sobhita Dhulipala Makes Her Hollywood Debut.

ಕೇವಲ ಹಿಂದಿಯಲ್ಲಿ ಅಷ್ಟೇ ಅಲ್ಲ ದಕ್ಷಿಣಕ್ಕೂ ಬಂದರು. ಅಭಿಮಾನಿ ಬಳಗವನ್ನೂ ಸಂಪಾದಿಸಿದರು. ಗೂಢಚಾರಿ, ಮೇಜರ್, ಕುರುಪ್ ಶೋಭಿತಾ ಹೆಸರಿಗೆ ಬೆಲೆ ತಂದು ಕೊಟ್ಟವು. ಪೊನ್ನಿಯನ್ ಸೆಲ್ವನ್ ಭಾಗ 01 ಹಾಗೂ ಭಾಗ 02 ಶೋಭಿತಾ ಬದುಕಿನ ದಿಕ್ಕನ್ನ ಬದಲಿಸಿತು. ಗಲ್ಲಾಪೆಟ್ಟಿಗೆಯಲ್ಲಿ ಈ ಎರಡೂ ಚಿತ್ರಗಳು ಒಟ್ಟಾಗಿ ಬಾಕ್ಸ್ ಆಫೀಸ್‌ನಲ್ಲಿ 800 ಕೋಟಿ ಗಳಿಸಿ ದಾಖಲೆ ಬರೆದವು.

ಇವತ್ತು ಶೋಭಿತಾ ಕೇವಲ ಭಾರತದ ನಟಿಯಷ್ಟೇ ಅಲ್ಲ, ಹಾಲಿವುಡ್ ನಟಿಯೂ ಹೌದು. ದೇವ್ ಪಟೇಲ್ ನಿರ್ದೇಶನದ ಮಂಕಿ ಮ್ಯಾನ್ ಚಿತ್ರಕ್ಕೆ ಶೋಭಿತಾ ಬಣ್ಣ ಹಚ್ಚಿದ್ದಾರೆ. ಸಿತಾರ ಎಂಬ ಹಿಂದಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇನ್ನೂ ವೆಬ್ ಸಿರೀಸ್ ನಲ್ಲಿಯೂ ಕೂಡ ಸದ್ಯಕ್ಕೆ ಇವ್ರದ್ದೇ ಹವಾ.

ಕೇವಲ 08 ವರ್ಷದಲ್ಲಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಹಾಗೂ ಮಾನವನ್ನ ಸಂಪಾದಿಸಿರುವ ಶೋಭಿತಾ ಅವರನ್ನ ಅವತ್ತು ಅವಮಾನ ಮಾಡಿದವರೇ ಕರೆದು ಇಂದು ಸನ್ಮಾನ ಮಾಡ್ತಿದ್ದಾರೆ. ಕಾಲ್ ಶೀಟ್ ಗಾಗಿ ಕರೆ ಮಾಡ್ತಿದ್ದಾರೆ. ಒಟ್ಟಿನಲ್ಲಿ ಮನಸ್ಸಿದ್ದರೆ ಏನೂ ಬೇಕಾದರೂ ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಛಲವಷ್ಟೇ. ಇದಕ್ಕೆ ಅತ್ಯುತ್ತಮ ಉದಾಹರಣೆ ಶೋಭಿತಾ ಅಂದರೆ ಅದು ತಪ್ಪಾಗಲಿಕ್ಕಿಲ್ಲ.

More from Filmibeat

English summary
After Facing Many Rejection, Self Made Star Sobhita Dhulipala Will Now Debut In Hollywood Film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X