twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಭ್ ಬಚ್ಚನ್ ಟ್ವೀಟ್ ವಿರೋಧಿಸಿ ಮನೆ ಮುಂದೆ ಪ್ರತಿಭಟನೆ

    |

    ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮನೆ ಮುಂದೆ ಸಾಮಾಜಿಕ ಹೋರಾಟಗಾರರು, ಮೆಟ್ರೋ ಕುರಿತು ಮಾಡಿದ್ದ ಟ್ವೀಟ್ ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ.

    ಮೆಟ್ರೋ ಕಾಮಗಾರಿ ಹಿನ್ನಲೆ ಅರೆ ಕಾಲೋನಿಯಲ್ಲಿ ಸುಮಾರು 2600ಕ್ಕೂ ಅಧಿಕ ಮರಗಳನ್ನ ಕಡಿಯವುದಕ್ಕೆ ನಿರ್ಧಾರಿಸಲಾಗಿದೆ. ಇಂತಹ ಸಮಯದಲ್ಲಿ ಅಮಿತಾಭ್ ಬಚ್ಚನ್ ಅವರ ಮೆಟ್ರೋ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿರುವ ಸಾಮಾಜಿಕ ಹೋರಾಟಗಾರರು, ಪರಿಸರ ಪ್ರೇಮಿಗಳು ಬಚ್ಚನ್ ಮನೆ ಮುಂದೆ ಪ್ರತಿಭಟಿಸಿದ್ದಾರೆ.

    ಅಮಿತಾಭ್ ಬಚ್ಚನ್ ಗೆ ಶೇಕಡಾ 75 ರಷ್ಟು ಲಿವರ್ ಇಲ್ವಂತೆಅಮಿತಾಭ್ ಬಚ್ಚನ್ ಗೆ ಶೇಕಡಾ 75 ರಷ್ಟು ಲಿವರ್ ಇಲ್ವಂತೆ

    ''ನನ್ನ ಸ್ನೇಹಿತನಿಗೆ ವೈದ್ಯಕೀಯ ತುರ್ತುಸ್ಥಿತಿ ಇತ್ತು, ಕಾರಿನ ಬದಲು ಮೆಟ್ರೊ ರೈಲಿನಲ್ಲಿ ಹೋಗಲು ನಿರ್ಧರಿಸಿದ. ಬೇಗ ಹೋಗಿ ಬೇಗ ವಾಪಸ್ ತಲುಪಿದ. ವೇಗವಾಗಿ, ಅನುಕೂಲಕರ ಮತ್ತು ಮೆಟ್ರೋ ಸೇವೆ ಸಿಕ್ಕಿದ ಪರಿಣಾಮ ಸಂತೋಷಗೊಂಡ. ಹೆಚ್ಚು ಮರಗಳನ್ನು ಬೆಳೆಸುವುದು ಮಾಲಿನ್ಯಕ್ಕೆ ಪರಿಹಾರ. ನಾನು ನನ್ನ ತೋಟದಲ್ಲಿ ಮರಗಿಡ ಬೆಳೆಸಿದ್ದೇನೆ. ನೀವು ಬೆಳಸಿ'' ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದರು.

    Social Activist Protest In Front Of Amitabh Bachan Home

    ಆಗಸ್ಟ್ 2...ಅಮಿತಾಭ್ ಬಚ್ಚನ್ ಗೆ ಎರಡನೇ ಜನ್ಮ ಸಿಕ್ಕಿದ್ದ ದಿನಆಗಸ್ಟ್ 2...ಅಮಿತಾಭ್ ಬಚ್ಚನ್ ಗೆ ಎರಡನೇ ಜನ್ಮ ಸಿಕ್ಕಿದ್ದ ದಿನ

    ಅಮಿತಾಭ್ ಬಚ್ಚನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಮುಂಬೈ ಮೆಟ್ರೋ ವ್ಯವಸ್ಥಾಪಕ ಅಶ್ವಿನಿ ಬಡೇ ಧನ್ಯವಾದ ತಿಳಿಸಿದ್ದಾರೆ. ಆದರೆ ಬಚ್ಚನ್ ಅವರ ಟ್ವೀಟ್ ಗೆ ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

    ''ಅಮಿತಾಭ್ ಬಚ್ಚನ್ ಅವರೇ ನಾವೆಲ್ಲ 'ಸೇವ್ ಅರೇ-ಸೇವ್ ಫಾರೆಸ್ಟ್' ಎಂದು ಹೋರಾಡುತ್ತಿದ್ದೇವೆ. ನೀವು ಮೆಟ್ರೋಗೆ ಬೆಂಬಲ ಕೊಡ್ತಿದ್ದೀರಾ. ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನ ಕಡಿಯುವುದು ಎಷ್ಟು ಸರಿ. ಅದಕ್ಕೆ ಬೇರೆಯೇ ಮಾರ್ಗವಿದೆ'' ಎಂದು ಪ್ರಶ್ನಿಸಿದ್ದಾರೆ.

    Social Activist Protest In Front Of Amitabh Bachan Home

    ಅರೆ ಕಾಲೋನಿಯಲ್ಲಿ 2600ಕ್ಕೂ ಅಧಿಕ ಮರಗಳನ್ನ ಕಡಿಯಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ಇದರ ವಿರುದ್ಧ ಬಾಲಿವುಡ್ ನ ಅನೇಕ ಕಲಾವಿದರು ಪ್ರತಿಭಟಿಸಿದ್ದರು.

    English summary
    Social Activist and environmental lovers have protest In front of Bollywood super star Amitabh Bachchan home.
    Thursday, September 19, 2019, 15:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X