ಸ್ಮೋಕಿಂಗ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಂತ ಹೆಚ್ಚಾಗಿ ವಿವಾದದ ಮೂಲಕವೆ ಸುದ್ದಿಯಲ್ಲಿದ್ದಾರೆ. ನಿಕ್ ಜೋನಸ್ ಮದುವೆಯಾಗಿ ವಿದೇಶದಲ್ಲಿ ನೆಲೆಸಿರುವ ಪಿಗ್ಗಿ ಏನೆ ಮಾಡಿದ್ರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ತಹರೆವಾರಿ ಕಾಸ್ಟ್ಯೂಮ್ ಗಳಲ್ಲಿ ಮಿಂಚುವ ಸಖತ್ ಹಾಟ್ ಆಗಿ ಕಾಣಿಕೊಳ್ಳುವ ಪ್ರಿಯಾಂಕಾ ಆಗಾಗ ನೆಟ್ಟಿಗರಿಂದ ಮಂಗಳಾರತಿ ಮಾಡಿಕೊಳ್ಳುತ್ತಿರುತ್ತಾರೆ.

ಪ್ರಿಯಾಂಕಾ ಈಗ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಪ್ರಿಯಾಂಕಾ ಕುಟುಂಬ ಪರಿವಾರವಾಗಿ ಯಾಚ್ ನಲ್ಲಿ ಕುಳಿತು ಸಿಗರೇಟು ಸೇದುತ್ತಿರುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿಂದೆ ಪಿಗ್ಗಿ ಬಾಲ್ಯದಿಂದನು ಅಸ್ತಮದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಸ್ಮೋಕಿಂಗ್ ಮತ್ತು ಪಟಾಕಿ ಸಿಡಿಸುವ ಬಗ್ಗೆ ಅಭಿಯಾನವನ್ನು ಮಾಡಿದ್ದರು.

ಹಾಗಾಗಿ ಈ ಬಗ್ಗೆ ಎಲ್ಲರಿಗೂ ಉಪದೇಶ ಮಾಡುವ ಪ್ರಿಯಾಂಕಾ ಈಗ ಸ್ಮೋಕಿಂಗ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಲೆಳೆಯುತ್ತಿದ್ದಾರೆ. ಪ್ರಿಯಾಂಕಾಗೆ ಅಸ್ತಮ ರಾತ್ರೋರಾತ್ರಿ ಮಾಯವಾಗಿದೆಯಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಬೇಡಿ ಅಸ್ತಮ ರೋಗಿಗಳಿಗೆ ತೊಂದರೆ ಆಗುತ್ತೆ ಎಂದು ಹೇಳಿದ್ದರು. ನಂತರ ತಮ್ಮ ಮದುವೆಯಲ್ಲಿ ಭಾರಿ ಪ್ರಮಾಣದ ಪಟಾಕಿಗಳನ್ನು ಸಿಡಿಸಿ ಸಂಭ್ರಮಸಿದ್ದರು.

Social media users are criticising to Priyanka Chopra for smoking a cigarette

ಪ್ರಿಯಾಂಕಾ ಮಾತ್ರ ಸಿಗರೇಟು ಸೇದಬಹುದು ಮತ್ತು ಪಟಾಕಿಗಳನ್ನು ಸುಡಬಹುದು ಆದ್ರೆ ಬೇರೆಯವರಿಗೆ ಯಾಕೆ ಉಪದೇಶ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮ ಪಟ್ಟಿದ್ದ ಪ್ರಿಯಾಂಕಾ ಸದ್ಯ ಮಿಯಾಮಿಯಲ್ಲಿ ಕಾಲಕಳೆಯುತ್ತಿದ್ದಾರೆ. ಇದೆ ಸಮಯದಲ್ಲಿ ಪಿಗ್ಗಿ ದಂಪತಿ ಮತ್ತು ಪ್ರಿಯಾಂಕಾ ತಾಯಿ ಈ ಮೂವರು ಯಾಚ್ ನಲ್ಲಿ ಕುಳಿತು ಸ್ಮೋಕ್ ಮಾಡಿದ್ದಾರೆ. ದೇಶ ಬಿಟ್ಟು ವಿದೇಶದಲ್ಲಿ ಬೀಡುಬಿಟ್ಟಿರುವ ಪ್ರಿಯಾಂಕಾ ಯಾವುದಕ್ಕು ತಲೆಕೆಡಿಸಿಕೊಳ್ಳದೆ ಪತಿ ನಿಜ್ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Bollywood actress Priyanka Chopra is seen smoking a cigarette while her mother Madhu Chopra and husband Nick Jonas are enjoying a cigar. Social media users are criticising the actress for being ‘fake’ and ‘hypocrite’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X