'ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು' ಎಂದವನಿಗೆ ಬೆಂಡೆತ್ತಿದ ನಟಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಹಯತ್ ತನ್ನ ಪತಿಯನ್ನ ಮನೆಯಿಂದ ಹೊರಹಾಕಿ ಒಬ್ಬಂಟಿ ಜೀವನ ಮಾಡ್ತಿದ್ದಾರೆ. ತನ್ನ ವಸ್ತುಗಳನ್ನ ಕದ್ದು ಪತಿಯೇ ಮಾರಾಟ ಮಾಡ್ತಿದ್ದಾನೆ ಎಂದು ತಿಳಿದ ನಂತರ ಆತನಿಂದ ದೂರವಾಗಿದ್ದರು.
ಹೀಗೆ, ತನಗೆ ಎದುರಾದ ಸಮಸ್ಯೆಗಳನ್ನ ಬಿದಿಗಿಟ್ಟು ಕೂಲ್ ಆಗಿ ಜೀವನ ಸಾಗಿಸುತ್ತೀರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳಕ್ಕೆ ಒಳಗಾಗಿದ್ದಾಳೆ.
ಅನಾಮಿಕ ವ್ಯಕ್ತಿಯೊಬ್ಬ 'ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು' ಎಂದು ಅಸಭ್ಯವಾಗಿ ಮೆಸೆಜ್ ಮಾಡಿದ್ದಾನೆ. ಇದನ್ನ ಬಹಿರಂಗಪಡಿಸಿರುವ ಸೋಫಿಯಾ ಆತನ ಮುಖಕ್ಕೆ ಮಂಗಳಾರತಿ ಎತ್ತಿದ್ದಾಳೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಫಿಯಾ ''ಮೊದಲು ನಿನ್ನ ತಾಯಿಯ ಬಳಿ ಕೇಳು, ನಂತರ ನಿನ್ನ ಹೆಂಡತಿ ಮತ್ತು ತಂಗಿಯ ಬಳಿ ಕೇಳು ಒಂದು ರಾತ್ರಿಗೆ ರೇಟ್ ಎಷ್ಟು ಅಂತ ಹೇಳ್ತಾರೆ ಅಂದಿದ್ದಾರೆ.

ಅದಕ್ಕೆ ಮತ್ತೆ ಮೆಸೆಜ್ ಮಾಡಿರುವ ಆ ವ್ಯಕ್ತಿ ''ಅವರು ನಿನ್ನ ರೀತಿಯಲ್ಲಿ ದೇಹ ತೋರಿಸಲ್ಲ'' ಎಂದಿದ್ದಾನೆ. ಈ ಸಂದೇಶ ನೋಡಿ ಮತ್ತಷ್ಟು ಕೋಪಗೊಂಡ ಸೋಪಿಯಾ ''ನೀನು ಜನ್ಮ ನೀಡುವಾಗ ನಿಮ್ಮ ಅಮ್ಮನೂ ದೇಹ ತೋರಿಸಿದ್ದಾರೆ. ಮೊದಲು ನಿನ್ನ ಮನಸ್ಸನ್ನ ಶುದ್ಧಿಯಾಗಿಡು ಎಂದು ಕಿಡಿಕಾರಿದ್ದಾರೆ.

ಆ ಸಂದೇಶಗಳ ಪ್ರತಿಯನ್ನ ಸೋಫಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ತಮ್ಮ ನೋವನ್ನ ಹೊರಹಾಕಿದ್ದಾರೆ.


Click it and Unblock the Notifications











