'ಸತ್ತ ಮೇಲೂ ಸುಶಾಂತ್ ಹೆಸರಿನಲ್ಲಿ ಅಮಾನವೀಯ ಕೃತ್ಯ': ಸಹೋದರಿ ಮೀತು ಆಕ್ರೋಶ
ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿ ವರ್ಷ ಕಳೆಯುತ್ತಾ ಬಂದಿದೆ. ಜೂನ್ 14ಕ್ಕೆ ಸುಶಾಂಗ್ ಇಹಲೋಕ ತ್ಯಜಿಸಿದ ಒಂದು ವರ್ಷ ಆಗಲಿದೆ. ಇದುವರೆಗೂ ಈ ನಟನ ಸಾವಿನ ಹಿಂದಿನ ಅಸಲಿ ಕಾರಣ ಬಹಿರಂಗವಾಗಿಲ್ಲ. ಸಿಬಿಐ ಪೊಲೀಸರು ತನಿಖೆ ಮುಗಿಸಿಲ್ಲ. ಸುಶಾಂತ್ ಸಾವಿಗೆ ನ್ಯಾಯ ಬೇಕು ಎಂದು ಕೇಳುತ್ತಿರುವ ಕುಟುಂಬದವರ ನೋವಿಗೆ ಪರಿಹಾರ ಸಿಕ್ಕಿಲ್ಲ.
ಇಂತಹ ಸಂದರ್ಭದಲ್ಲೂ ಸುಶಾಂತ್ ಸಿಂಗ್ ಹೆಸರು ಬಳಸಿಕೊಂಡು ಕೆಲವು ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದು, ಅಂತವರ ಬಗ್ಗೆ ಎಚ್ಚರಿಕೆಯಿಂದಿರಿ ಎಂದಿದ್ದಾರೆ. ಮುಂದೆ ಓದಿ....

ಪರಿಸ್ಥಿತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ
''ದುರಾದೃಷ್ಟವಶಾತ್, ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ನಿಜಕ್ಕೂ ಇದು ಹೇಳಲಾಗದಂತಹ ಅಮಾನವೀಯ ಬೆಳವಣಿಗೆ. ದಯವಿಟ್ಟು ಇಂತಹ ಕೆಲಸಗಳಿಂದ ಜನರು ದೂರವಿರಿ'' ಎಂದು ಸುಶಾಂತ್ ಸಹೋದರಿ ಮೀತು ಸಿಂಗ್ ಟ್ವಿಟ್ಟರ್‌ನಲ್ಲಿ ಎಚ್ಚರಿಸಿದ್ದಾರೆ.

ದೇಣಿಗೆ ಸಂಗ್ರಹಿಸಲಾಗುತ್ತಿದೆ
ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ಕೆಲವು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಸುಶಾಂತ್ ಸಹೋದರಿ ಮೀತು ''ಸಹೋದರನ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುವುದಕ್ಕೆ ನಾವು ಯಾರಿಗೂ ಹೇಳಿಲ್ಲ, ಅದಕ್ಕೆ ನಮ್ಮ ಒಪ್ಪಿಗೆಯೂ ಇಲ್ಲ ಎನ್ನುವುದು ಜನರ ಅರಿವಿಗೆ ಇರಲಿ'' ಎಂದು ಮಾಹಿತಿ ನೀಡಿದ್ದಾರೆ.

ಸಿನಿಮಾನೂ ಮಾಡುವಂತಿಲ್ಲ
ಸುಶಾಂತ್ ಸಿಂಗ್ ರಜಪೂತ್ ಕುರಿತು ಬಯೋಪಿಕ್ ಮಾಡುವ ಬಗ್ಗೆಯೂ ಬಿಟೌನ್‌ನಲ್ಲಿ ಚರ್ಚೆಯಾಗುತ್ತಿದೆ. ಪುಸ್ತಕ ಬರೆಯುವುದರ ಬಗ್ಗೆಯೂ ಸುದ್ದಿ ಇದೆ. ಈ ಕುರಿತು ಸಹ ಮೀತು ಸಿಂಗ್ ಪ್ರತಿಕ್ರಿಯಿಸಿದ್ದಾರೆ. ''ಸುಶಾಂತ್ ಸಿಂಗ್‌ಗೆ ಸಂಬಂಧಿಸಿದಂತೆ ಸಿನಿಮಾ, ಪುಸ್ತಕ ಹಾಗೂ ಇನ್ನಿತರ ಯಾವುದೇ ಕ್ರಿಯೆಗೂ ಕುಟುಂಬದಿಂದ ಒಪ್ಪಿಗೆ ಇಲ್ಲ. ಸುಶಾಂತ್ ದುರಂತ ಅಂತ್ಯವನ್ನು ಲಾಭಕ್ಕಾಗಿ ಬಳಸು ನಾವು ಸಮ್ಮತಿಸುವುದಿಲ್ಲ'' ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
Recommended Video

ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಸುಶಾಂತ್ ಶವ ಪತ್ತೆ
ಜೂನ್ 14, 2020ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನೇಣು ಬಿಗಿದುಕೊಂಡಿದ್ದ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ಅನುಮಾನಸ್ಪಾದ ಸಾವು ಎಂದು ತನಿಖೆ ಮುಂದುವರಿಸಿದ್ದರು. ನಂತರ ಸಿಬಿಐಗೆ ಈ ಪ್ರಕರಣ ವರ್ಗಾವಣೆ ಆಯಿತು.


Click it and Unblock the Notifications











