ಖ್ಯಾತಿ ತಂದ ಆಪತ್ತು ; ಕೇವಲ ಒಂದು ಗಂಟೆ ನಿನ್ನ ಜೊತೆ ಮಲಗಬೇಕು, ನಿನ್ನ ರೇಟ್ ಎಷ್ಟು ? ನಟಿ ಕಣ್ಣೀರು
ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ. ತಮ್ಮ ಏಳಿಗೆಗಾಗಿ...
ಈ ಸೋಶಿಯಲ್ ಮೀಡಿಯಾವನ್ನು ಉಪಯೋಗ ಮಾಡುತ್ತಿಲ್ಲ. ಬದಲಿಗೆ ಹಲವರು ಈ ಸಾಮಾಜಿಕ ಜಾಲತಾಣವನ್ನು ಅವಾಚ್ಯ ಶಬ್ದಗಳಿಂದ ಮತ್ತೊಬ್ಬರನ್ನು ನಿಂದಿಸಲು .. ದ್ವೇಷ - ಅಸೂಯೆಯನ್ನು ಬಿತ್ತಲು .. ಬಳಸುತ್ತಿದ್ದಾರೆ. ಇನ್ನು ಇವರ ನಡುವೆ ಇಲ್ಲಿ ಮತ್ತೊಂದು ವರ್ಗ ಇದೆ. ಈ ವರ್ಗ ಹೆಣ್ಣು ಮಕ್ಕಳಿಗೆ.. ಚಿತ್ರರಂಗದಲ್ಲಿನ ಮಹಿಳೆಯರಿಗೆ.. ನಾಯಕಿಯರಿಗೆ.. ಲೈಂಗಿಕ ಶೋಷಣೆ.. ಕಿರುಕುಳು ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದೆ. ಸ್ತ್ರೀಯರ ಪಾಲಿಗೆ ಕಗ್ಗಂಟಾಗಿ ಉಳಿದಿದೆ.

ಈ ಆನ್‌ಲೈನ್ ಕಾ*ಮುಕರಿಂದ ಚಿತ್ರರಂಗದಲ್ಲಿನ ಹಲವಾರು ಚೆಲುವೆಯರು ಹೈರಾಣಾಗಿದ್ದಾರೆ. ಕಣ್ಣೀರು ಹಾಕುತ್ತಲೇ ಇದ್ದಾರೆ. ಇದಕ್ಕೆ ಗಿರಿಜಾ ಓಕ್ ಗೋಡ್‌ಬೋಲೆ ಸದ್ಯದ ಉದಾಹರಣೆ. ಹೌದು, ಗಿರಿಜಾ ಓಕ್ ಗೋಡ್‌ಬೋಲೆ... ಮರಾಠಿಯ ಚೆಲುವೆ. ಕಳೆದ ಒಂದು-ಒಂದೂವರೆ ತಿಂಗಳಿಂದ ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಂಡಿರುವ ನೀಲಿ ಸೀರೆಯ ನೀರೆ.
ಕಳೆದ ಎರಡು ದಶಕಗಳಲ್ಲಿ ಹಲವು ಚಿತ್ರ ಮತ್ತು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರೂ ಕೂಡ ಸಿಗದ ಜನಪ್ರಿಯತೆ, ಇವರಿಗೆ ಕೇವಲ ಒಂದೇ ಒಂದು ಸಂದರ್ಶನದ ಮೂಲಕ ಸಿಕ್ಕಿದೆ. ಅಮೇರಿಕನ್ ನಟಿ ಸಿಡ್ನಿ ಸ್ವೀನಿ ಹಾಗೂ ಇಟಾಲಿಯನ್ ಮಾಡೆಲ್ ಮೋನಿಕಾ ಬೆಲ್ಲುಸಿ ಜೊತೆ ಗಿರಿಜಾ ಓಕ್ ಅವರನ್ನು ಅನೇಕರು ಹೋಲಿಕೆ ಮಾಡುತ್ತಿದ್ದಾರೆ. ಗಿರಿಜಾ ಸೌಂದರ್ಯದ ಮುಂದೆ ಇವರಿಬ್ಬರು ಏನೇನು ಅಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇಂಥಾ ಗಿರಿಜಾ ಗೋಡ್‌ಬೋಲೆ ಸದ್ಯ ''ಟೈಮ್ಸ್ ಆಫ್ ಇಂಡಿಯಾ''ಗೆ ಮತ್ತೊಂದು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮಗೆ ಸಿಕ್ಕ ಈ ಖ್ಯಾತಿಯಿಂದ ಆದ ಅಡ್ಡಪರಿಣಾಮಗಳ ಕುರಿತು ಗಿರಿಜಾ ಓಕ್ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಗಿರಿಜಾ ಓಕ್ ಜನ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಚರ್ಚೆ ಮಾಡುತ್ತಿದ್ದಾರೆ. ಸಿಕ್ಕ ಈ ಸಡನ್ ಖ್ಯಾತಿ ನನಗೆ ಖುಷಿ ನೀಡಿದೆ ಎಂದು ಹೇಳಿದ್ದಾರೆ.
ನಾನು ವೈರಲ್ ಆದ ಸಮಯದಲ್ಲಿ ನನ್ನ ಮಗ ಶಾಲಾ ಪ್ರವಾಸಕ್ಕೆ ಹೋಗಿದ್ದ, ಆ ನಂತರ ಅವನನ್ನು ಕರೆತರಲು ಹೋದಾಗ ಅವನ ಶಾಲೆಯ ಶಿಕ್ಷಕರು ಮತ್ತು ಅವನ ಸ್ನೇಹಿತರ ಪೋಷಕರು ಕೂಡ ನನ್ನ ಬಗ್ಗೆ ಮಾತನಾಡುತ್ತಿದ್ದರು, ಎಲ್ಲೆಡೆ ನೀವೆ ಕಾಣಿಸುತ್ತಿದ್ದೀರಾ.. ! ಹೇಗಿದೆ ಈಗ ? ಹೇಗಾಯ್ತು ಇದೆಲ್ಲ ಎಂದು ಕೇಳಿದರು ಎಂದು ಹೇಳಿರುವ ಗಿರಿಜಾ ನನ್ನ ಮಗ ಕೂಡ ಈ ಕುರಿತು ಕೇಳಿದಾಗ ನಾನು ಇದೆಲ್ಲ ಒಂದು ಅಲೆಯಷ್ಟೇ ಇದಕ್ಕೆಲ್ಲಾ ಯಾವ ತರ್ಕ ಇರುವುದಿಲ್ಲ ಎಂದು ಅವನಿಗೆ ತಿಳಿಸಿ ಹೇಳಿದೆ ಎಂದು ಹೇಳಿದ್ದಾರೆ.

ಇನ್ನೂ ನ್ಯಾಷನಲ್ ಕ್ರಷ್ ಎಂಬ ಪಟ್ಟ ಸಿಕ್ಕಿರುವ ವಿಚಾರದ ಕುರಿತು ಕೂಡ ಪ್ರತಿಕ್ರಿಯೆ ನೀಡಿರುವ ಗಿರಿಜಾ ಓಕ್ ಇದೆಲ್ಲದರಿಂದ ಏನಾದರೂ ಬದಲಾಗಿದೆಯಾ ಎಂದು ಯಾರಾದರೂ ಕೇಳಿದರೆ ಹೆಚ್ಚುವರಿ ಕೆಲಸದ ಆಫರ್‌ಗಳು ಬರುತ್ತಿಲ್ಲ ಎನ್ನುವುದು ನನ್ನ ಉತ್ತರ ಎಂದು ಹೇಳಿದ್ದಾರೆ. ಇವೆಲ್ಲ ಕ್ಷಣಿಕ ಸುಖ ಮಾತ್ರ ಎಂದು ಹೇಳಿದ್ದಾರೆ.
ಮುಂದುವರೆದು ನನಗೆ ನನ್ನ ಸೋಶಿಯಲ್ ಮೀಡಿಯಾದಲ್ಲಿ ವ್ಯೆಯಕ್ತಿಕವಾಗಿ ಯಾವತ್ತು ಇಷ್ಟೊಂದು ಮೆಸೇಜ್‌ಗಳು ಬಂದಿಲ್ಲ. ಅಷ್ಟೊಂದು ಮೆಸೇಜ್‌ಗಳನ್ನು ಹಲವರು ನನಗೆ ದಿನ ನಿತ್ಯ ಮಾಡುತ್ತಲೇ ಇದ್ದಾರೆ ಎಂದು ಹೇಳಿರುವ ಗಿರಿಜಾ ಓಕ್ ಕೆಲವರು ನೀವು ನನ್ನ ಬೇಬ್ ಆಗ್ತೀರಾ ಮ್ಯಾಮ್ ಎಂದು ಮೆಸೇಜ್ ಮಾಡ್ತಾರೆ ಎಂದು ನಕ್ಕಿದ್ದಾರೆ. ನನ್ನ ಗಂಡ ಮತ್ತು ನನ್ನ ಕುಟುಂಬದ ಸದಸ್ಯರು ನನಗೆ ಈ ಸಿಕ್ಕ ಈ ದೀಢೀರ ಖ್ಯಾತಿಯನ್ನು ಸಹಜವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿರುವ ಗಿರಿಜಾ ಅದೃಷ್ಟವಶಾತ್ ನನ್ನ ಇಡೀ ಕುಟುಂಬ ಈ ಕ್ಷೇತ್ರದಲ್ಲಿಯೇ ಇದೆ. ಹೀಗಾಗಿ ವಿಚಿತ್ರ ಕಾಮೆಂಟ್‌ಗಳು ಅಥವಾ ವೈರಲ್ ಸುದ್ದಿಗಳನ್ನು ಓದುವುದು ನಮಗೆ ಹೊಸತಲ್ಲ. ಯಾರೂ ವಿಚಲಿತಗೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ತಮಗೆ ಅಶ್ಲೀಲ ಅಸಭ್ಯ ಅಸಹ್ಯ ಸಂದೇಶಗಳನ್ನು ಕಳುಹಿಸುವರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಿರುವ ಗಿರಿಜಾ ಓಕ್ ನಿಮಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ, ಒಂದು ಅವಕಾಶ ಕೊಡಿ.. ಒಂದೇ ಒಂದು ಗಂಟೆ ನಿಮ್ಮ ಜೊತೆ ಮಲಗಬೇಕು, ನಿಮ್ಮ ರೇಟ್ ಎಷ್ಟು.. ಹೀಗೆ ಹಲವು ಮೆಸೇಜ್‌ಗಳು ನನಗೆ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಜನ ತೋರಿಸುವ ಧೈರ್ಯ ಆಫ್‌ಲೈನ್‌ನಲ್ಲಿ ತೋರಿಸುವುದಿಲ್ಲ ಎಂದು ಹೇಳಿರುವ ಗಿರಿಜಾ ಇದೇ ಜನ ನನ್ನನ್ನು ಅವರ ಎದುರು ನಿಜ ಜೀವನದಲ್ಲಿ ನೋಡಿದರೆ ತಲೆ ಎತ್ತಿ ಕೂಡ ನೋಡುತ್ತಿರಲಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











