For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್, ಸಂಜಯ್ ದತ್, ಸೈಫ್ ಅಲಿ ಖಾನ್‌ಗೆ ಕ್ಷಮೆ ಕೇಳಿದ ಪಾಕ್ ನಟಿ

  |

  ಪಾಕಿಸ್ತಾನ ಮೂಲದ ನಟಿ ಸೋಮಿ ಅಲಿ ಬಾಲಿವುಡ್‌ನ ಕೆಲವು ಸ್ಟಾರ್ ನಟರ ಕ್ಷಮೆ ಕೇಳಿದ್ದಾರೆ.

  ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಮಿ ಅಲಿ, ನಟ ಸಲ್ಮಾನ್ ಖಾನ್, ಸಂಜಯ್ ದತ್, ಸೈಫ್ ಅಲಿ ಖಾನ್, ಚಂಕಿ ಪಾಂಡೆ, ಗೋವಿಂದಾ, ಮಿಥುನ್ ಚಕ್ರವರ್ತಿ, ದಿವಂಗತ ಓಂ ಪುರಿ ಇನ್ನೂ ಕೆಲವು ನಟ, ನಿರ್ದೇಶಕ, ನಿರ್ಮಾಪಕರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

  ನಟಿ ಸೋಮಿ ಅಲಿ 1990 ರ ದಶಕದಲ್ಲಿ ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ 'ನಾನೊಬ್ಬ ಕೆಟ್ಟ ನಟಿ, ನನ್ನನ್ನು ಸಹಿಸಿಕೊಂಡ ನಟ-ನಟಿಯರಿಗೆ ನಾನು ಕ್ಷಮೆ ಕೇಳುತ್ತಿದ್ದೇನೆ' ಎಂದಿದ್ದಾರೆ ಸೋಮಿ ಅಲಿ.

  'ನಾನೊಬ್ಬ ಕೆಟ್ಟ ನಟಿ, ನನಗೆ ನೃತ್ಯವೂ ಸರಿಯಾಗಿ ಬರುತ್ತಿರಲಿಲ್ಲ ಆದರೂ ಹೇಗೆ ನಾನು ಆ ಹತ್ತು ಸಿನಿಮಾಗಳಲ್ಲಿ ನಟಿಸಿದೆ ಎಂಬುದು ನನಗೇ ಆಶ್ಚರ್ಯವಾಗುತ್ತಿದೆ' ಎಂದು ಹೇಳಿದ್ದಾರೆ ಸೋನಿ ಅಲಿ. ವಿಶೇಷವಾಗಿ ಮಿಥುನ್ ಚಕ್ರವರ್ತಿಯವರ ಕ್ಷಮೆ ಕೇಳಿದ್ದಾರೆ ಸೋಮಿ ಅಲಿ, ಅವರೊಂದಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು ಸೋಮಿ.

  'ನಾನು ನಟಿಸಿದ ಸಿನಿಮಾದ ನಿರ್ಮಾಪಕ-ನಿರ್ದೇಶಕರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನನಗೆ ಅಭಿನಯ ಇಷ್ಟವಿರಲಿಲ್ಲ. ನಾನೆಂದೂ ನೃತ್ಯ ತರಬೇತಿಗೆ ಹೋದವಳಲ್ಲ. ಸರೋಜ್ ಖಾನ್ ಅವರು ಪ್ರತಿ ಬಾರಿ ನನ್ನನ್ನು ನೃತ್ಯ ತರಬೇತಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ನಾನೆಂದು ನನ್ನ ಪಾತ್ರದ ಸಂಭಾಷಣೆಯನ್ನೂ ಸಹ ಮನದಟ್ಟು ಮಾಡಿಕೊಳ್ಳುತ್ತಿರಲಿಲ್ಲ' ಎಂದಿದ್ದಾರೆ ಸೋಮಿ.

  'ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದಾಗ ನಾನಿನ್ನೂ ವಯಸ್ಸಿನಲ್ಲಿ ಸಣ್ಣವಳಾಗಿದ್ದೆ. ಆದರೆ ಆ ವಯಸ್ಸಿಗೆ ಅನುಭವಿಸಬಾರದ ಕೆಲವನ್ನು ನಾನು ಅನುಭವಿಸಿದೆ. ಕೆಲವರ ಸಂಬಂಧಗಳು ನನ್ನಿಂದಾಗಿಯೇ ಮುರಿದವು. ಆದರೆ ಹಾಗೆ ಆಗಲಿಕ್ಕೆ ಬೇರೊಬ್ಬರು ನನಗೆ ನೀಡಿದ ತಪ್ಪು ಸಲಹೆಗಳೇ ಕಾರಣ' ಎಂದಿದ್ದಾರೆ ಸೋಮಿ ಅಲಿ.

  ಸಲ್ಮಾನ್ ಖಾನ್ ಗೋಸ್ಕರ ದೇಶಬಿಟ್ಟು ಬಂದಿದ್ದ ನಟಿ | Filmibeat Kannada

  ಸೋಮಿ ಅಲಿ ಹಾಗೂ ಸಲ್ಮಾನ್ ಖಾನ್ ಆಪ್ತವಾಗಿದ್ದರು. ಆದರೆ ಎರಡೇ ವರ್ಷದಲ್ಲಿ ಇಬ್ಬರೂ ಬೇರಾದರು. ಆ ನಂತರ ಸೋಮಿ ಅಲಿ ಬಾಲಿವುಡ್‌ನಿಂದ ದೂರವಾಗಿ ಅಮೆರಕಕ್ಕೆ ತೆರಳಿದರು.

  English summary
  Pakistan born Actress Somi Ali apologizes to Salman Khan, Sanjay Dutt, Saif Ali Khan, Govinda, Mithun Chakraborty and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X