ಮಾತುಕತೆಯಿಂದ ನಿಮಗೆ ಲಾಭ ಇದೆ, ಲಾರೆನ್ಸ್ ಬಿಷ್ಣೋಯ್‌ಗೆ ಫೋನ್ ನಂಬರ್ ಕೇಳಿದ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ...!
ಸಲ್ಮಾನ್ ಖಾನ್ ವಿಚಲಿತರಾಗಿದ್ದಾರೆ. ಇದಕ್ಕೆ ಕಾರಣ ಅವರ ಅತ್ಯಾಪ್ತ ಸ್ನೇಹಿತ ಬಾಬಾ ಸಿದ್ದಿಕಿಯ ಹತ್ಯೆ. ಬಹುಶಃ ತಮ್ಮ ಸ್ನೇಹಿತನ ನಿಧನಕ್ಕೆ ತಾವೇ ಪರೋಕ್ಷವಾಗಿ ಕಾರಣವಾದ ಹಿನ್ನೆಲೆ ಸಲ್ಮಾನ್ ಖಾನ್ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರಬಹುದು. ಗೊತ್ತಿಲ್ಲ. ಆದರೆ, ಬಾಬಾ ಸಿದ್ದಿಕಿ ಹತ್ಯೆ ಸಲ್ಮಾನ್ ಖಾನ್ ಅವರ ಮಾನಸಿಕ ಆರೋಗ್ಯಕ್ಕೆ ಧಕ್ಕೆಯನ್ನುಂಟು ಮಾಡಿರುವುದು ಸತ್ಯ.
ಇನ್ನೂ ಸಲ್ಮಾನ್ ಖಾನ್ ಸಹವಾಸವನ್ನು ಯಾರೇ ಮಾಡಲಿ ಅವರೆಲ್ಲರನ್ನೂ ಬಾಬಾ ಸಿದ್ದಿಕಿಯಂತೆಯೇ ಹೊಡೆದು ಉರುಳಿಸುತ್ತೇವೆ ಎಂದು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ಸಹಜವಾಗಿ ಈ ಬೆದರಿಕೆಯಿಂದ ಸಲ್ಮಾನ್ ಖಾನ್ ಇನ್ನೂ ಹೆಚ್ಚಾಗಿದೆ. ಸಲ್ಮಾನ್ ಖಾನ್ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಇದರ ನಡುವೆ ಸಲ್ಮಾನ್ ಖಾನ್ ಜೊತೆ ಕಾಲದಲ್ಲಿ ಪ್ರೀತಿ-ಪ್ರೇಮ ಎಂದು ತಿರುಗಾಡಿದ ಸೋಮಿ ಅಲಿ ಈಗ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವೆ ನಡೆಯುತ್ತಿರುವ ಈ ಸಮರವನ್ನು ಪ್ರವೇಶಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಮೊಬೈಲ್ ನಂಬರ್ ನೀಡಿಯೆಂದು ಲಾರೆನ್ಸ್ ಬಿಷ್ಣೋಯ್ ಗೆ ಬಹಿರಂಗವಾದ ಸಂದೇಶವನ್ನು ರವಾನೆ ಮಾಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸೋಮಿ ಅಲಿ ''ನಮಸ್ತೇ ಲಾರೆನ್ಸ್ ಭಾಯಿ ಜೈಲಿನಲ್ಲಿದ್ದುಕೊಂಡೆ ನೀವು ಝೂಮ್ ಕಾಲ್ ಮಾಡುತ್ತೀರಾ ಎನ್ನುವುದನ್ನು ಕೇಳಿದ್ದೇನೆ ಮತ್ತು ನೋಡಿದ್ದೇನೆ. ಹೀಗಾಗಿ ನಿಮ್ಮ ಜೊತೆ ನನಗೆ ಮಾತನಾಡಬೇಕಿದೆ. ಇದು ಹೇಗೆ ಸಾಧ್ಯ ಎನ್ನುವುದನ್ನು ನನಗೆ ತಿಳಿಸಿ'' ಎಂದಿದ್ದಾರೆ.
ಮುಂದುವರೆದು ''ಇಡೀ ವಿಶ್ವದಲ್ಲಿಯೇ ರಾಜಸ್ಥಾನ ನನಗೆ ಅಚ್ಚು ಮೆಚ್ಚಿನ ಸ್ಥಳ. ನಾನು ನಿಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬೇಕೆಂದುಕೊಂಡಿದ್ದೇನೆ. ಆದರೆ ಅದಕ್ಕೂ ಮೊದಲು ಝೂಮ್ ಕಾಲ್‌ನಲ್ಲಿ ಕೆಲ ಹೊತ್ತು ನಿಮ್ಮ ಜೊತೆ ಮಾತನಾಡಬೇಕು, ಪೂಜೆಯ ನಂತರ ಕೂಡ ಇನ್ನೂ ಮಾತನಾಡಬೇಕು. ಈ ಮಾತುಕತೆಯಿಂದ ನಿಮಗೆ ಖಂಡಿತವಾಗಿ ಲಾಭ ಇದೆ'' ಎಂದು ಸೋಮಿ ಅಲಿ ಬರೆದುಕೊಂಡಿದ್ದಾರೆ. ನಿಮ್ಮ ಮೊಬೈಲ್ ನಂಬರ್ ಹಂಚಿಕೊಂಡರೆ ತುಂಬಾ ಉಪಕಾರವಾಗುತ್ತೆ ಎಂದು ಹೇಳಿ ಧನ್ಯವಾದಗಳನ್ನು ಸೋಮಿ ಅಲಿ ಹೇಳಿದ್ದಾರೆ.
ಸದ್ಯಕ್ಕೆ.. ಸೋಮಿ ಅಲಿ ಅವರ ಈ ಬರಹ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವೆ ಸಂಧಾನಕ್ಕೆ ಸೋಮಿ ಅಲಿ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕೂಡ ಅನೇಕರಿಗೆ ಈಗ ಕಾಡುತ್ತಿದೆ. ಕೆಲವರು ಪ್ರಚಾರಕ್ಕೆ ಸೋಮಿ ಅಲಿ ಇದೆಲ್ಲ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಲ್ಮಾನ್ ಖಾನ್ ಮೇಲಿನ ಪ್ರೀತಿ ಮತ್ತು ಕಾಳಜಿಯಿಂದ ಸೋಮಿ ಅಲಿ ತಮ್ಮ ಪ್ರಾಣ ಪಣಕ್ಕಿಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೇ ಇಂದು ಬೆಳ್ಳಗ್ಗೆ ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಂಚಿಕೊಂಡಿದ್ದ ಸೋಮಿ ಅಲಿ ಆ ನಂತರ ತಮ್ಮ ಫೋಸ್ಟ್ ಡಿಲೀಟ್ ಮಾಡಿದ್ದಾರೆ. ಕಾರಣ ಅವರಿಗೆ ಗೊತ್ತು.
ಉಳಿದಂತೆ ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಆದರೆ ಸಲ್ಮಾನ್ ಖಾನ್ ಮೇಲೆ ಕೃಷ್ಣ ಮೃಗ ಬೇಟೆಯಾಡಿದ ಆರೋಪ ಇತ್ತು. ಹತ್ತಾರು ಬಾರಿ ಸಲ್ಮಾನ್ ಈ ಪ್ರಕರಣದಲ್ಲಿ ಕೋರ್ಟು-ಕಛೇರಿ ಎಂದು ಅಲೆದಾಡಿದ್ದು ಇದೆ. ಆದರೆ 2016ರಲ್ಲಿ ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿತ್ತು. ಆ ದಿನ ಆ ಕ್ಷಣದಿಂದ ಸಲ್ಮಾನ್ ಖಾನ್ ಬೆನ್ನು ಹತ್ತಿರುವ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದುಕೊಂಡೆ ಸಲ್ಮಾನ್ ಖಾನ್ ಗೆ ಅನೇಕ ಬಾರಿ ಸ್ಕೆಚ್ ಹಾಕಿದ್ದಾನೆ.


Click it and Unblock the Notifications











