For Quick Alerts
  ALLOW NOTIFICATIONS  
  For Daily Alerts

  ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ: ಸಲ್ಮಾನ್ ಮಾಜಿ ಗೆಳತಿ

  |

  ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾದಾಗಿನಿಂದಲೂ ಬಾಲಿವುಡ್‌ನಲ್ಲಿ ಪೋರ್ನ್ ಸಿನಿಮಾಗಳದ್ದೇ ಮಾತು. ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡಿದ್ದಾರೆ ಎಂದು ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ.

  ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿಲ್ಲ ಬದಲಿಗೆ ಶೃಂಗಾರದ ವಿಡಿಯೋಗಳನ್ನು (ಎರೊಟಿಕಾ) ಮಾದರಿಯ ವಿಡಿಯೋಗಳನ್ನಷ್ಟೆ ನಿರ್ಮಾಣ ಮಾಡಿದ್ದಾರೆ. ಆ ರೀತಿಯ ವಿಡಿಯೋಗಳಿಗೆ ಭಾರತೀಯ ಕಾನೂನಿನಲ್ಲಿ ಸಮ್ಮತವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  'ಪೋರ್ನ್ ಸಿನಿಮಾದಲ್ಲಿ ನಟಿಸಿದರೆ ತಪ್ಪೇನು?' ಎಂದು ಸಹ ಕೆಲವರು ಪ್ರಶ್ನಿಸಿದ್ದಾರೆ. ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ ಸಹ ಇದನ್ನೇ ಹೇಳಿದ್ದಾರೆ.

  ''ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಅಂಥಹಾ ವಿಡಿಯೋ ನಿರ್ದೇಶನ ಮಾಡುವುದು ನಿರ್ಮಾಣ ಮಾಡುವುದು ಇತರೆ ಪೋರ್ನ್ ಸಂಬಂಧಿ ಉದ್ಯಮದಲ್ಲಿ ತೊಡಿಸಿಕೊಳ್ಳುವುದು ತಪ್ಪಲ್ಲ'' ಎಂದಿದ್ದಾರೆ.

  ''ಇತರೆ ಉದ್ಯಮಗಳಂತೆ ಅದೂ ಒಂದು ಉದ್ಯಮ, ಅದೂ ಒಂದು ವೃತ್ತಿ. ಪೋರ್ನ್ ಅನ್ನು ಉದ್ಯೋಗವಾಗಿ ಸ್ವೀಕರಿಸುವ ಯಾವುದೇ ವ್ಯಕ್ತಿಯನ್ನು ನಾನು ಕೆಟ್ಟವರು ಎಂದು ಭಾವಿಸುವುದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಥವಾ ಮೋಸ ಮಾಡಬಾರದು ಅಷ್ಟೆ'' ಎಂದಿದ್ದಾರೆ ಸೋಲಿ ಅಲಿ.

  ''ಪೋರ್ನ್ ಅಥವಾ ಲೈಂಗಿಕತೆಯನ್ನು ಎಷ್ಟು ಬಚ್ಚಿಡಲಾಗುತ್ತದೆಯೋ ಅಷ್ಟು ಅದರ ಬಗ್ಗೆ ಕುತೂಹಲ ಹೆಚ್ಚುತ್ತದೆ ಎಂದಿರುವ ಸೋಮಿ, ವೆಬ್ ಸರಣಿಗಳಲ್ಲಿ ಕೆಲವು ಸಿನಿಮಾಗಳಲ್ಲಿ ಬೋಲ್ಡ್ ಆದ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ. ಹಾಗೆಯೇ ಪೋರ್ನ್ ಸಹ ಸಾಮಾನ್ಯ ಎಂಬಂತಾಗಬೇಕು ಎಂದಿದ್ದಾರೆ.

  ''ಲೈಂಗಿಕತೆ ಮನುಷ್ಯನ ಸಹಜ ಕ್ರಿಯೆ. ಹಾಗಾಗಿ ಪೋರ್ನ್‌ಗೆ ಸಹ ನಿರ್ಬಂಧವಿರಬಾರದು. ಪೋರ್ನ್ ಹೆಸರಲ್ಲಿ ಯಾರ ಮೇಲೂ ಬಲವಂತ, ದೌರ್ಜನ್ಯ ಆಗದಿದ್ದರೆ ಪೋರ್ನ್ ಗೆ ನನ್ನ ಸಹಮತ ಇದೆ'' ಎಂದು ಸೋಮಿ ಹೇಳಿದ್ದಾರೆ.

  English summary
  Salman Khan former girl friend Somy Ali views about Raj Kundra case and indecent videos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X