For Quick Alerts
  ALLOW NOTIFICATIONS  
  For Daily Alerts

  ನನ್ನ ದೇಹ, ನನ್ನ ಎದೆ ಸೀಳು, ನನ್ನಿಷ್ಟ; ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಖ್ಯಾತ ಗಾಯಕಿ

  By ಫಿಲ್ಮ್ ಡೆಸ್ಕ್
  |

  ಸೆಲೆಟ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಮಾತು, ಕೆಲವೊಂದು ಹೇಳಿಕೆಗಳು, ಧರಿಸುವ ಬಟ್ಟೆ, ಫೋಟೋಶೂಟ್ ಹೀಗೆ ನಾನಾಕಾರಣಗಳಿಗೆ ಟ್ರೋಲಿಗರಿಗೆ ಟಾರ್ಗೆಟ್ ಆಗಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚಿಗೆ ಖ್ಯಾತ ಗಾಯಕಿ ಸೋನಾ ಮೋಹಪತ್ರಾ ಕಾಲೇಜು ದಿನಗಳಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.

  ಈ ಬಗ್ಗೆ ನೆಟ್ಟಿಗರುಸೋನಾ ಮೋಹಪಾತ್ರಾರನ್ನು ಅಣಕಿಸಿದ್ದಾರೆ. ಇದರಿಂದ ಸಿಕ್ಕಿಗೆದ್ದ ಸೋನಾ ಟ್ರೋಲ್ ಮಾಡಿದವರಿಗೆ ಚಳಿ ಬಿಡಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ #INeverAskForIt ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನದಲ್ಲಿ ಸೋನಾ ಭಾಗಿಯಾಗಿದ್ದಾರೆ. ತಮಗಾದ ಅನುಭವವನ್ನು ಟ್ವಿಟ್ಟರ್ ಮೂಲಕ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ.

  ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಪಡಿಸಿದ ಸೋನಾ

  ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗ ಪಡಿಸಿದ ಸೋನಾ

  ಲೈಂಗಿಕ ದೌರ್ಜನ್ಯವಾಗಿದೆ ಎಂದಾಗ ಯಾವ ಬಟ್ಟೆ ಧರಿಸಿದ್ದೆ ಎಂದು ತಂತ್ರಸ್ತರನ್ನು ಮೊದಲು ಕೇಳುತ್ತಾರೆ. ಸಂತ್ರಸ್ತೆಯನ್ನೇ ದೂಷಿಸುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೋನಾ, 'ನಾನು ಬಿ ಟೆಕ್ ಇಂಜಿನಿಯರಿಂಗ್ ಮಾಡುವಾಗ ಮೈಕ್ರೋಪ್ರೊಫೆಸರ್ ಲ್ಯಾಬ್ ಗೆ ಹೋಗುತ್ತಿದ್ದೆ. ಹಸಿರು ಬಣ್ಣದ ದೊಗಲೆಯಾದ ಖಾದಿ ಕುರ್ತಾ ಜೊತೆಗೆ ಸಲ್ವಾರ್ ಧರಿಸಿದ್ದೆ' ಎಂದಿದ್ದಾರೆ.

  ಧರಿಸಿದ್ದ ಬಟ್ಟೆಯಿಂದ ನನ್ನನ್ನೇ ದೂಷಿಸಿದರು

  ಧರಿಸಿದ್ದ ಬಟ್ಟೆಯಿಂದ ನನ್ನನ್ನೇ ದೂಷಿಸಿದರು

  'ಈ ವೇಳೆ ನನ್ನ ಸೀನಿಯರ್ ಶಿಳ್ಳೆ ಹೊಡೆಯುತ್ತಾ ನನ್ನ ಬ್ರಾ ಸೈಜ್ ಬಗ್ಗೆ ಜೋರಾಗಿ ಮಾತನಾಡಿದರು. ಈ ವೇಳೆ ಹಿತೈಶಿಯೊಬ್ಬರು ನನ್ನ ಬಳಿ ಬಂದು ಕೇಳಿದರು, ಎದೆಯ ಭಾಗ ಸಂಪೂರ್ಣ ಮುಚ್ಚಿರುವಂತೆ ನಾನು ದುಪ್ಪಟ್ಟ ಧರಿಸಿದ್ದೆ. ಆದರೂ ನನ್ನನ್ನೆ ದೂರಿದರು' ಎಂದು ಸೋನಾ ಹೇಳಿದ್ದಾರೆ.

  ವಿಕ್ಟಿಮ್ ಬ್ಲೇಮಿಂಗ್ ಅನುಭವ ಹಂಚಿಕೊಳ್ಳಿ ಎಂದ ಸೋನಾ

  ವಿಕ್ಟಿಮ್ ಬ್ಲೇಮಿಂಗ್ ಅನುಭವ ಹಂಚಿಕೊಳ್ಳಿ ಎಂದ ಸೋನಾ

  ಮತ್ತೊಂದು ಟ್ವೀಟ್ ಮಾಡಿರುವ ಸೋನಾ, ವಿಕ್ಟಿಮ್ ಬ್ಲೇಮಿಂಗ್ ಅನುಭವವನ್ನು ಶೇರ್ ಮಾಡುವಂತೆ ಬಾಲಿವುಡ್ ನಟಿ ಸೋನಂ ಕಪೂರ್, ಗಾಯಕಿ ಚಿನ್ಮಯಿ ಶ್ರೀಪಾದ, ಸೇರಿದಂತೆ ಅನೇಕರಿಗೆ ಟ್ಯಾಗ್ ಮಾಡಿದ್ದಾರೆ. ನೀವು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ಧರಿಸಿದ್ದ ಬಟ್ಟೆಯ ಯಾವುದು ಎಂದು ನೆನಪಿಸಿಕೊಂಡು ವಿಕ್ಟಿಮ್ ಬ್ಲೇಮಿಂಗ್ ಗಮನಕ್ಕೆ ತನ್ನಿ ಎಂದಿದ್ದಾರೆ.

  ಟ್ರೋಲ್ ಮಾಡಿದ ನೆಟ್ಟಿಗರು

  ಟ್ರೋಲ್ ಮಾಡಿದ ನೆಟ್ಟಿಗರು

  ಸೋನಾ ಮಾಡಿರುವ ಟ್ವೀಟ್ ಗೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಅಲ್ಲದೆ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನೆಟ್ಟಿಗರು ಸೋನಾ ಧರಿಸಿರುವ ಬಟ್ಟೆಯ ಬಗ್ಗೆ ಟ್ರೋಲ್ ಮಾಡಿದ್ದಾರೆ. ಎದೆ ಸೀಳು ಕಾಣುವಂತ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸಿ, ಈ ಎಲ್ಲಾ ನಾಟಕ ಆಡುವ ಬದಲು, ಗಾಯಕಿಯಾಗಿರಿ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham
  ಟ್ರೋಲಿಗರಿಗೆ ಖಡಕ್ ಉತ್ತರ

  ಟ್ರೋಲಿಗರಿಗೆ ಖಡಕ್ ಉತ್ತರ

  ನೆಟ್ಟಿಗರ ಕಾಮೆಂಟ್ಸ್ ನಿಂದ ಸಿಟ್ಟಿಗೆದ್ದ ಗಾಯಕಿ ಸೋನಾ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ನನ್ನ ದೇಹ, ನನ್ನ ಎದೆ ಸೀಳು, ನನ್ನ ಇಷ್ಟ. ನಾನಗೆ ಏನು ಇಷ್ಟವೋ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಸೋನಾ ಮಾತಿಗೆ ಅನೇಕರು ಬೆಂಬಲ ನೀಡಿದ್ದಾರೆ.

  English summary
  Sona Mohapatra hits back at a troll after he asks her why she shows off her cleavage in the photoshoots.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X