ದೀಪಾವಳಿಗೆ ಪಟಾಕಿ ಸಿಡಿಸಿದರೆ ಮೂರ್ಖರು, ಆದರೆ ಈಗ ? ಸೋನಾಕ್ಷಿ ಸಿನ್ಹಾ ವಿರುದ್ಧ ಜನಾಕ್ರೋಶ ..!
ಜಾಹೀರಾತಿನ ಸಲುವಾಗಿ, ಸಮಾಜಕ್ಕೆ ಸಂದೇಶವನ್ನು ನೀಡುವುದಕ್ಕಾಗಿ ಚಿತ್ರರಂಗದ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಮಾತನಾಡುತ್ತಲೇ ಇರುತ್ತಾರೆ. ಇದರಿಂದ ಬದಲಾವಣೆಗಳು ಕೂಡ ಆಗಿವೆ. ಆದರೆ, ಹೀಗೆ ಮಾಡಬೇಡಿ.. ಹಾಗೇ ಮಾಡಬೇಡಿ.. ಎಂದು ಲೆಕ್ಚರ್ ಕೊಡುವ ಸಿನಿಮಾ ತಾರೆಯರೇ ಮಾಡಬಾರದ ಕೆಲಸವನ್ನು ತಾವೇ ಮಾಡಿದರೆ ಹೇಗೆ ? ಸದ್ಯ ಇದೇ ತರಹದ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದು ಸೋನಾಕ್ಷಿ ಸಿನ್ಹಾ ಅವರ ಕಾಲೆಳೆಯುವಂತಾಗಿದೆ.
ಹೌದು, ಅಸಲಿಗೆ ಕಳೆದ ವರ್ಷ ದೀಪಾವಳಿ ಹಬ್ಬದಂದು ಸೋನಾಕ್ಷಿ ಸಿನ್ಹಾ ವಾಯುಮಾಲಿನ್ಯದ ಕುರಿತು ಪಾಠವನ್ನು ಮಾಡಿದ್ದರು. ಪಟಾಕಿ ಸಿಡಿಸಿದ್ದರಿಂದ ವಾತಾವರಣ ಹೀಗೆ ಆಗಿದೆ. ಪಟಾಕಿ ಸಿಡಿಸಿದ ಜನರಲ್ಲಿ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ ಎಂದಿದ್ದ ಸೋನಾಕ್ಷಿ ನೀವೇನು ಮೂರ್ಖರಾ ಎಂದು ಕೇಳಿದ್ದರು.

ಆದರೆ ಈಗ ಸ್ವತ: ಸೋನಾಕ್ಷಿ ಸಿನ್ಹಾ ಹೊಸ ವರ್ಷದ ಪ್ರಯುಕ್ತ ಸಿಡಿಸಲಾದ ಪಟಾಕಿಗಳನ್ನು ಕಂಡು ಸಂಭ್ರಮಿಸಿದ್ದಾರೆ. ದೂರದ ಸಿಡ್ನಿಯಲ್ಲಿ ತಮ್ಮ ಪತಿ ಜಹೀರ್ ಇಕ್ಭಾಲ್ ಜೊತೆ ಬಾನಂಗಳದಲ್ಲಿನ ವರ್ಣರಂಜಿತ ಪ್ರದರ್ಶನಗಳನ್ನು ಕಂಡು ಕೇಕೆ ಹೊಡೆದಿದ್ದಾರೆ. ಸೋನಾಕ್ಷಿ ಸಿನ್ಹಾ ಅವರ ಈ ನಗು ಮತ್ತು ಹೊಸ ವರ್ಷದ ಶುಭಾಶಯ ಈಗ ಅನೇಕರನ್ನು ಕೆರಳಿಸಿದೆ.
ಹೀಗಾಗಿಯೇ ಸೋನಾಕ್ಷಿ ಸಿನ್ಹಾ ವಿರುದ್ಧ ಸೈಬರ್ ಸಮರ ಸಾರಿರುವ ಅನೇಕರು ದಾಳಿಯನ್ನು ಮಾಡುತ್ತಿದ್ದಾರೆ. ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ತಮ್ಮ ಹಬ್ಬಕ್ಕೆ ಹಿಂದೂಗಳು ಪಟಾಕಿ ಸಿಡಿಸಿದರೆ ಸರ್ಕಾರವು ಒಳಗೊಂಡಂತೆ ನಿಮ್ಮೆಲ್ಲರಿಗೆ ಪರಿಸರದ ನೆನಪಾಗುತ್ತೆ. ಪರಿಸರ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತೆ ಆದರೆ ಹೊಸ ವರ್ಷದ ಸಂಭ್ರಮದಲ್ಲಿ ನಿಮ್ಮ ಈ ಪರಿಸರ ಕಾಳಜಿ ಮಾಯವಾಗುತ್ತೆ ಎನ್ನುತ್ತಿದ್ದಾರೆ. ಹೊಸ ವರ್ಷದಂದು ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹರಡುವುದಿಲ್ವಾ ? ಎಂದು ಪ್ರಶ್ನೆಯನ್ನು ಮಾಡುತ್ತಿದ್ಧಾರೆ. ಹೊಸ ವರ್ಷದಂದು ಪಟಾಕಿ ಸಿಡಿಸುವುದರಿಂದ ಆಮ್ಲಜನಕ ಬಿಡುಗಡೆಯಾಗುತ್ತಾ ಎಂದು ಕೇಳುತ್ತಿದ್ದಾರೆ. ಸದ್ಯ ಈ ಸೈಬರ್ ದಾಳಿಯಿಂದ ಹೈರಾಣಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.
ಸದ್ಯ ಸೋನಾಕ್ಷಿ ಸಿನ್ಹಾ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದ ಸ್ಟೋರಿ ಮತ್ತು ಈಗ ಇವರ ಹೊಸ ವರ್ಷಾಚರಣೆಯ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಇನ್ನುಳಿದಂತೆ ಕಳೆದ ವರ್ಷ ಜೂನ್ 23ರಂದು ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದ್ವೆಯಾಗಿದ್ದರು. ತಮಗಿಂತ ಎರಡು ವರ್ಷ ಚಿಕ್ಕವರಾದರೂ ಕೂಡ 07 ವರ್ಷಗಳಿಂದ ಜಹೀರ್ ಇಕ್ಬಾಲ್ ಅವರನ್ನು ಸೋನಾಕ್ಷಿ ಪ್ರೀತಿಸುತ್ತಿದ್ದರು.
ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಶತ್ರುಘ್ನ ಸಿನ್ಹಾ ಅವರ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಆದರೂ ಸೋನಾಕ್ಷಿ ಸಿನ್ಹಾ ಅಂತರ ಧರ್ಮಿಯ ಹುಡುಗನ ಜೊತೆ ಮದುವೆಯಾಗಲು ಮುಂದಾಗಿದ್ದಕ್ಕೆ ಅನೇಕರು ಸೋನಾಕ್ಷಿ ಮತ್ತು ಜಹೀರ್ ಮದ್ವೆಗೆ ಲವ್ ಜಿಹಾದ್ ಬಣ್ಣ ಹಚ್ಚುವ ಪ್ರಯತ್ನ ಮಾಡಿದ್ದರು. ಸೋನಾಕ್ಷಿ ಸಿನ್ಹಾ ಅವರನ್ನು ಆಗಲೂ ಕೂಡ ಟ್ರೋಲ್ ಮಾಡಿದ್ದರು.


Click it and Unblock the Notifications











