ಗಂಡ ಜಹೀರ್ ದೀರ್ಘಾಯುಷ್ಯಕ್ಕೆ ಕರ್ವಾಚೌತ್ ಆಚರಿಸಿದ ಸೋನಾಕ್ಷಿ ಸಿನ್ಹಾ ; ನಟಿ ಧರಿಸಿರುವ ಮಂಗಳಸೂತ್ರದ ಬೆಲೆ ಎಷ್ಟು ಗೊತ್ತಾ..?

ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾ‍ಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಾಜಾ ಉದಾಹರಣೆ.

ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಮದುವೆಯಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದ್ಯ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ. ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಪ್ರಾರ್ಥನೆಯನ್ನು ಮಾಡಿ ಸೋನಾಕ್ಷಿ ಸಿನ್ಹಾ ಕರ್ವಾಚೌತ್ ಹಬ್ಬವನ್ನು ಆಚರಿಸಿದ್ದಾರೆ.

Sonakshi Sinha Celebrates Her First Karwa Chauth for Zaheer Iqbal Flaunting a 13 6 Lakh Mangalsutr

ಇನ್ನೂ.. ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆಯಾದಾಗ ಅನೇಕರು ಸೋನಾಕ್ಷಿ ಸಿನ್ಹಾ ಅವರ ಕಾಲೆಳೆದಿದ್ದರು. ಇನ್ನೂ ಬಹುತೇಕರು ಅಂತರ್ ಧರ್ಮಿಯ ಮದುವೆ ಆಗಿದ್ದಕ್ಕೆ ನಿಂದಿಸಿದ್ದರು. ಸೋನಾಕ್ಷಿ ಸಿನ್ಹಾ ತಮ್ಮ ಬದುಕಿನಲ್ಲಿ ಎಡವಿದರು ಎಂದು ಅನ್ಸುತ್ತೆ ಎಂದು ಹೇಳಿದ್ದರು. ನಿನ್ನ ಕಥೆ ಅಷ್ಟೇ ಎಂದು ಕಾಮೆಂಟ್ ಮಾಡಿದ್ದರು. ಇನ್ನೂ ಕಾಲ ಮಿಂಚಿಲ್ಲ, ಯೋಚ್ನೆ ಮಾಡು ಎಂಬ ಸಲಹೆಯನ್ನೆಲ್ಲ ಸೋನಾಕ್ಷಿ ಸಿನ್ಹಾಗೆ ಕೊಟ್ಟಿದ್ದ ಕೆಲವರು ಜಹೀರ್ ಇಕ್ಬಾಲ್ ಅವರನ್ನು ಕುಡುಕ, ಗಾಂಜಾ ಗಿರಾಕಿ ಎಂದೆಲ್ಲ ಹೀಯಾಳಿಸಿದ್ದರು. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಮದುವೆಗೆ ಲವ್ ಜಿಹಾದ್‌ ಬಣ್ಣ ಹಚ್ಚಿದರು. ಇನ್ನೂ ಕೆಲವರು ತೀರಾ ಹೊಲಸು ಕಾಮೆಂಟ್ ಮಾಡಿದರು.

ಆದರೆ ಸೋನಾಕ್ಷಿ ಸಿನ್ಹಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಧರ್ಮವನ್ನು ಲೆಕ್ಕಿಸದೇ ಪ್ರೀತಿ ಮಾಡಿದರು. ಈ ಕಾರಣಕ್ಕೆ ಯಾರು ಯಾವ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಇಲ್ಲಿ ಬರಲ್ಲ. ಸೋನಾಕ್ಷಿ ಸಿನ್ಹಾ ಮತಾಂತರವಾಗಿದ್ದಾರಾ ಎನ್ನುವ ಚರ್ಚೆಗೆ ಕೂಡ ಆಸ್ಪದ ಇಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹಿಂದೂ ಸಂಪ್ರದಾಯವನ್ನು ಮರೆಯದೇ ಹಣೆಗೆ ಕುಂಕುಮ ಇಟ್ಕೊಂಡು ಕುತ್ತಿಗೆಯಲ್ಲಿ ಒಂದಲ್ಲ, ಎರಡಲ್ಲ, ಬದಲಿಗೆ ಹದಿಮೂರುವರೆ ಲಕ್ಷದ ಮಾಂಗಲ್ಯವನ್ನು ಧರಿಸಿಯೇ ಪೂಜೆಯನ್ನು ಮಾಡಿದ್ದಾರೆ. ಗಂಡನ ದೀರ್ಘಾಯುಷ್ಯಕ್ಕೆ ಶ್ರದ್ದೆ ಮತ್ತು ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿದ್ದಾರೆ.

ಅಂದ್ಹಾಗೇ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆಯಾಗಲು ಮುಂದಾದಾಗ, ಅನೇಕರು ಕೆರಳಿ ಕೆಂಡವಾಗಿದ್ದರು. ಬಾಲಿವುಡ್‌ನ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಮಗ್ಳಾಗಿ ಅನ್ಯ ಧರ್ಮದ ಹುಡುಗನ ಜೊತೆ ಮದುವೆಯಾಗಲು ನಾಚಿಕೆಯಾಗಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಮನೆಯ ವಾತಾವರಣ ಹೀಗೆ ಇದ್ದರೂ ಸೋನಾಕ್ಷಿ ಸಿನ್ಹಾ ಈ ಜಹೀರ್ ಇಕ್ಬಾಲ್ ಜೊತೆ ಮದುವೆಯಾಗ್ತಿದ್ದಾರೆ ಅಂದರೆ ಇದರ ಹಿಂದೆ ಲವ್ ಜಿಹಾದ್ ಪಿತೂರಿ ಇದೆ ಎಂದಿದ್ದರು. ಮನೆಯಲ್ಲಿ ಡಬಲ್ ಡೋರ್ ಪ್ರಿಡ್ಜ್ ಎಲ್ಲ ಇಡಬೇಡಿ ಎಂಬ ಸಲಹೆಯನ್ನೂ ಕೂಡ ಸೋನಾಕ್ಷಿಗೆ ಕೊಟ್ಟಿದ್ದರು. ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡಿದ್ದರು.

ಅದೆಲ್ಲ ಏನೇ ಇರಲಿ ಸದ್ಯಕ್ಕೆ ಸೋನಾಕ್ಷಿ ಸಿನ್ಹಾ ಅವರ ಈ ಕರ್ವಾಚೌತ್‌ ಹಬ್ಬದ ಫೋಟೋಗಳಿಗೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಹುತೇಕರು ಸೋನಾಕ್ಷಿ ಸಿನ್ಹಾ ಅವರನ್ನು ಮೆಚ್ಚಿಕೊಂಡಿದ್ದರೆ ಇನ್ನೂ ಕೆಲವರು ಇದೆಲ್ಲ ತೋರ್ಪಡಿಕೆಯ ಜೀವನ ಅಷ್ಟೇ ಸೋನಾಕ್ಷಿ ಸಿನ್ಹಾ ಮತಾಂತರಗೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

Read more about: sonakshi sinha bollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X