ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್!

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಸಾಂಗ್ ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸೋನಾಕ್ಷಿಗೆ ಇದೀಗ ಸಂಕಷ್ಟ ಎದುರಾಗಿದೆ. ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕಾಗಿ ಸೋನಾಕ್ಷಿಯನ್ನು ಮೊರಾದಾಬಾದ್‍ಗೆ ಬರುವಂತೆ ಕೇಳಲಾಗಿತ್ತು. ಅದಕ್ಕಾಗಿ 37 ಲಕ್ಷ ರೂ. ಹಣವನ್ನು ನೀಡಲಾಗಿತ್ತು. ಆದರೆ ಅವರು ಗೈರುಹಾಜರಾಗಿದ್ದರಿಂದ ಇದೀಗ ನ್ಯಾಯಾಲಯ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

ಈವೆಂಟ್ ಆಯೋಜಕರಾದ ಪ್ರಮೋದ್ ಶರ್ಮಾ, ಮೊರಾದಾಬಾದ್‍ನ ಕಟ್ಘರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದಾರೆ. ಇವರು ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಈವೆಂಟ್‍ನಲ್ಲಿ ಸೋನಾಕ್ಷಿ ಭಾಗವಹಿಸಲಿಲ್ಲ. ಆಗ ಈವೆಂಟ್ ಆಯೋಜಕರು ಹಣವನ್ನು ಮರುಪಾವತಿ ಮಾಡುವಂತೆ ಹೇಳಿದ್ದಾರೆ. ಈವೆಂಟ್ ಆಯೋಜಕರಿಗೆ ಹಣ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದರು ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಹಣ ಸಿಗದಿದ್ದಾಗ ವಂಚನೆ ಪ್ರಕರಣ ದಾಖಲಾಗಿತ್ತು. ಗೈರುಹಾಜರಾಗಿದ್ದರಿಂದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯ ಇದೀಗ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

Sonakshi Sinha Lands in Legal Trouble

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಸುದ್ದಿ ಒಂದು ಹರಿದಾಡಿತ್ತು. ಸಲ್ಮಾನ್ ಖಾನ್ ಮತ್ತು ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹ ಇಬ್ಬರೂ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯ ಜೊತೆಗೆ ಫೋಟೊ ಕೂಡ ಹರಿದಾಡಿತ್ತು. ಈ ಮದುವೆ ಫೋಟೋ ನೋಡಿದವರು ಒಂದು ಕ್ಷಣ ಸಲ್ಮಾನ್ ಖಾನ್ ಮದುವೆ ಆಗಿದೆ ಎಂದು ನಂಬಿ ಬಿಟ್ಟಿದ್ದರು. ಸೋನಾಕ್ಷಿ, ಸಲ್ಮಾನ್ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಸ್ನೇಹಿತರು ಕೂಡ ಹೌದು, ಹಾಗಾಗಿ ಮದುವೆ ಆಗಿದ್ದರು ಆಗಿರಬಹುದು ಎನ್ನುವ ಚರ್ಚೆ ಹುಟ್ಟಿಕೊಂಡಿತು.ಆದರೆ ಬಳಿಕ ಇದು ಎಡಿಟ್ ಮಾಡಿರುವ ಫೋಟೊ ಎನ್ನುವುದು ಬೆಳಕಿಗೆ ಬಂತು. ಬೇರೆ ಯಾರದ್ದೋ ಮದುವೆ ಫೋಟೊವನ್ನು ಎಡಿಟ್ ಮಾಡಿ ಸಲ್ಮಾನ್, ಸೋನಾಕ್ಷಿ ಫೋಟೋ ಹಾಕಲಾಗಿದೆ ಎನ್ನುವುದು ರಿವೀಲ್ ಆಯ್ತು.

More from Filmibeat

English summary
Sonakshi Sinha lands in legal trouble, non bailable warrant issued against the actress in a fraud case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X