ವಿಚ್ಛೇದಿತನ ಜೊತೆ ಸೋನಾಕ್ಷಿ ಸಿನ್ಹಾ ಡಿಂಗ್ ಡಾಂಗ್
ಆದರೂ, ಈಗ ಅದ್ಹೇಗೋ ಸುದ್ದಿಮಾಧ್ಯಮಗಳ ಗಾಸಿಪ್ ಕಾಲಂಗೆ ಆಹಾರವಾಗಿದ್ದಾರೆ ಸೋನಾಕ್ಷಿ ಸಿನ್ಹಾ. ಹೇಗೋ ಎನ್ನುವುದಕ್ಕಿಂತ ಸಿಕ್ಕಿಬಿದ್ದಿದ್ದು ಹೇಗೋ ಎನ್ನುವುದು ಒಳ್ಳೆಯದು. ಸೋನಾಕ್ಷಿಗೆ, ಬಂಟಿ ಸಚ್ ದೇವ್ ಎಂಬ ಕ್ರೀಡಾ ಹಾಗೂ ಸೆಲೆಬ್ರಿಟಿ ವಿಚ್ಛೇದಿತನ ಜೊತೆ ಪ್ರೀತಿ ಪ್ರೇಮ ಪ್ರಣಯ ಶುರುವಾಗಿದೆ. ಆಕೆಗಿಂತ ಸಾಕಷ್ಟು ಹಿರಿಯನಾದ ಬಂಟಿ ಜೊತೆ ಡೇಟಿಂಗ್ ಕೂಡ ನಡೆಯುತ್ತಿದೆ.
ಆದರೆ ಈ ಕುರಿತು ಸೋನಾಕ್ಷಿ ಹೇಳುವುದೇ ಬೇರೆ. "ನಾನು ಯಾರಿಗೂ ಯಾವುದೇ ಸ್ಪಷ್ಟೀಕರಣ ನೀಡಬೇಕಿಲ್ಲ. ನಾನು ನನ್ನಿಷ್ಟದಂತೆ ಒಂಟಿಜೀವನ ಸಾಗಿಸುತ್ತಿದ್ದೇನೆ. ಪರುಷರ ಜೊತೆ ವೇಳೆ ಕಳೆಯುತ್ತಾ ಕೂಡುವಷ್ಟು ವೇಳೆ ನಿಜವಾಗಲೂ ನನಗಿಲ್ಲ" ಎಂದಿದ್ದಾರೆ. ಆದರೆ ಸೋನಾಕ್ಷಿ ಮಾತನ್ನು ನಿಜವೆಂದೂ ಯಾರೂ ತಿಳಿದಿಲ್ಲ. ಅಂದಹಾಗೆ, ಈ ಬಂಟಿ, ಸೊಹೈಲ್ ಖಾನ್ ಅವರ ಭಾವ.
ಸೋನಾಕ್ಷಿ-ಬಂಟಿಯ ಮಧ್ಯೆ ಪ್ರೀತಿ ಮತ್ತು ಡೇಟಿಂಗ್ ಇದೆ ಎಂಬುದಕ್ಕೆ ಬಾಲಿವುಡ್ ಸುದ್ದಿಮಾಧ್ಯಮಗಳು ಕೆಲವು ಸಾಕ್ಷಿಗಳನ್ನೂ ನೀಡಿವೆ. ಇತ್ತೀಚಿಗೆ, ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಖಾಯಿಲೆಯ ಕಾರಣಕ್ಕೆ ಆಸ್ಪತ್ರೆ ಸೇರಿದಾಗ, ಎಲ್ಲರಿಗಿಂತ ಮೊದಲು ಓಡಿಬಂದಿದ್ದೇ ಈ ಬಂಟಿಯಂತೆ.
ಸೋನಾಕ್ಷಿ ಸಿನ್ಹಾ ಅವರ ಕಮಿಟ್ ಮೆಂಟ್ ಗಳನ್ನೆಲ್ಲಾ ನಿಭಾಯಿಸುತ್ತಿರುವುದೂ ಕೂಡ ಈ ಬಂಟಿಯೇ ಎಂಬುದೂ ಈಗ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಆತನ ಬಗ್ಗೆ ಸೋನಾಕ್ಷಿಗೆ ವಿಪರೀತ ವ್ಯಾಮೋಹ ಹಾಗೂ ಮಿತಿಮೀರಿದ ಪಾಸೆಸಿವ್ ನೆಸ್ ಕೂಡ ಇದೆ. ಯಾರಾದರೂ ಆತನ ಹಳೆಯ ಹೆಂಡತಿ, ಗರ್ಲ್ ಫ್ರೆಂಡ್ಸ್ ಬಗ್ಗೆ ಮಾತನಾಡಿದರೆ ಆಕೆಗೆ ಕೋಪ ಉಕ್ಕೇರಿ ಬರುತ್ತದೆ ಎಂಬೆಲ್ಲ ಸಂಗತಿಗಳು ಜಾಹೀರಾಗಿದೆ.
ಈ ಮೊದಲು ಸುಶ್ಮಿತಾ ಸೇನ್ ಹಾಗೂ ನೇಹಾ ಧೂಪಿಯಾ ಜೊತೆ ಡೇಟಿಂಗ್ ಮಾಡಿದ್ದ ಬಂಟಿ ಸಚ್ ದೇವ್, ಈಗ ಸೋನಾಕ್ಷಿಯ ಹಿಂದೆ ಬಿದ್ದಿದ್ದಾನೆ. ಆದರೆ ಈ ವಿಷಯವನ್ನು ನಿರಾಕರಿಸಿರುವ ಸೋನಾಕ್ಷಿ ಯಾವತ್ತು ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಬಾಲಿವುಡ್ ಅಂಗಳ ಹಾಗೂ ಸುದ್ದಿಮಾಧ್ಯಮಗಳು ಕಾಯುತ್ತಿವೆ. ಯಾವಾಗ ಆ ಕಾಲ ಬರುತ್ತೋ! (ಏಜೆನ್ಸೀಸ್)


Click it and Unblock the Notifications












