ಮದ್ವೆಯಾಗಿ ಇನ್ನೂ ಒಂದು ವಾರವೂ ಆಗಿಲ್ಲ ಆಗ್ಲೇ ಸೋನಾಕ್ಷಿ ಸಿನ್ಹಾ ಗರ್ಭಿಣಿ...?
ಈಗೀಗ ಪ್ರೆಗ್ನೆಂಟ್ ಆಗುವುದು ಒಂದು ಕಡೆಯಾದರೆ ಅದಾದ ಮೇಲೆ ಮಗು ಆಗುವವರೆಗೂ ತಮ್ಮ ಬೇಬಿ ಬಂಪ್ ನಲ್ಲಿ ಫೋಟೋಗೆ ಪೋಸ್ ಕೊಡುವುದು ಒಂದು ರೀತಿಯ ಟ್ರೆಂಡ್ ಆಗಿ ಹೋಗಿದೆ. ಅದರಲ್ಲೂ ಬಾಲಿವುಡ್ ಮಂದಿ ಇಂತಹ ವಿಚಿತ್ರ ಖಯಾಲಿಗಳಲ್ಲಿ ಎತ್ತಿದ ಕೈ.
ಇಂತಹ ಬಾಲಿವುಡ್‌ನಲ್ಲಿ..ಈಗೀಗ ಮದುವೆ ಮುನ್ನವೇ ಗರ್ಭಿಣಿಯಾಗುವ ಹೊಸ ಟ್ರೆಂಡ್ಆರಂಭವಾಗಿದೆ. ರಣಬೀರ್ ಕಪೂರ್-ಆಲಿಯಾ ಭಟ್, ಹಾರ್ದಿಕ್ ಪಾಂಡ್ಯ-ನತಾಶಾ, ಆಮಿ ಜಾಕ್ಸನ್ ಸೇರಿ ಅನೇಕ ಸೆಲೆಬ್ರಿಟಿಗಳು ಈ ಟ್ರೆಂಡ್ನ ಫಾಲೋ ಮಾಡಿದ್ದಾರೆ. ಸದ್ಯಕ್ಕೆ.. ಈ ಸಾಲಿಗೆ ಈಗ ಸೋನಾಕ್ಷಿ ಸಿನ್ಹಾ - ಜಹೀರ್ ಇಕ್ಬಾಲ್ ಕೂಡ ಸೇರಿಕೊಳ್ಳುತ್ತಿದ್ದಾರಾ ಅನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ.. ಮದ್ವೆಯಾಗಿ ವಾರ ಕಳೆಯುವಷ್ಟರಲ್ಲಿ ಸೋನಾಕ್ಷಿ ಸಿನ್ಹಾ ತಮ್ಮ ಗಂಡನ ಜೊತೆ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ.. ಮುಂಬೈನಲ್ಲಿ ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ.. ಕ್ಯಾಮರಾ ಹಿಡಿದುಕೊಂಡು ಒಂದು ಗುಂಪು ಇವರನ್ನು ಹಿಂಬಾಲಿಸುತ್ತೆ. ಫೋಟೋ ತೆಗೆಯುತ್ತೆ. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಕೂಡ ಫೋಟೋ ತೆಗೆಯುವ ಪ್ರಯತ್ನವನ್ನು ಈ ಗುಂಪು ಮಾಡಿದೆ. ಆದರೆ.. ಸೋನಾಕ್ಷಿ ಈ ಕ್ಯಾಮರಾಗಳಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮರಳಿ ತೆರಳಿದ್ದಾರೆ.ಹೀಗಾಗಿಯೇ ಸೋನಾಕ್ಷಿ ಸಿನ್ಹಾ ಗರ್ಭಿಣಿ ಎನ್ನುವ ವದಂತಿಗೆ ಈಗ ರೆಕ್ಕೆ ಪುಕ್ಕ ಮೂಡಿದೆ.
ಇನ್ನೂ ನಿಮಗೆ ಗೊತ್ತು .. ಸೋನಾಕ್ಷಿ ಸಿನ್ಹಾ ಅವರದ್ದು ಅಂತರ ಧರ್ಮಿಯ ವಿವಾಹ. ಈ ಹಿನ್ನೆಲೆ ಮದುವೆಯಾಗಿ ಒಂದು ವಾರವಾದರೂ ಈ ಇಬ್ಬರು ಅನೇಕರು ಇನ್ನೂ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಈ ಮದುವೆಗೆ ಲವ್ ಜಿಹಾದ್ ಬಣ್ಣ ಹಚ್ಚುತ್ತಿದ್ದಾರೆ. ಕೆಂಡ ಕಾರುತ್ತಿದ್ದಾರೆ. ಇವರೆಲ್ಲರಿಗೆ ಈಗ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ ಇಕ್ಬಾಲ್ ಜೊತೆ ಆಸ್ಪತ್ರೆಗೆ ಭೇಟಿ ನೀಡಿರುವ ವಿಚಾರ ಈಗ ಆಹಾರವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಸೋನಾಕ್ಷಿ ಸಿನ್ಹಾ ಅವರನ್ನು ಈಗ ಮತ್ತೊಂದು ಸುತ್ತು ಟ್ರೋಲ್ ಮಾಡುತ್ತಿದ್ದಾರೆ. ನೀವು ನಿಜಕ್ಕೂ ಗರ್ಭಿಣಿನಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಅವರನ್ನು ಕೇಳದ ಜನ, ಮದುವೆಯಾಗುವ ಮುನ್ನ ಗರ್ಭಿಣಿಯಾಗುವುದು ಯಾವ ಸಂಪ್ರದಾಯದಲ್ಲಿದೆ ಎಂದು ಧರ್ಮದ ಪಾಠವನ್ನೂ ಮಾಡುತ್ತಿದ್ದಾರೆ.

ಈ ಕಡೆ ಸೋನಾಕ್ಷಿ ಸಿನ್ಹಾ ಪ್ರೆಗ್ನೆಂಟ್ ಎಂಬ ಸುದ್ದಿ ಹರಿದಾಡಲು ಶುರುವಾದ ಬೆನ್ನಲ್ಲಿಯೇ, ಆ ಕಡೆ ಮುಂಬೈನ ಮತ್ತೊಂದು ಬದಿಯಲ್ಲಿ.. ಶತ್ರುಘ್ನ ಸಿನ್ಹಾ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿಯೇ ತಂದೆಯ ಆರೋಗ್ಯ ವಿಚಾರಿಸಲು ಸೋನಾಕ್ಷಿ ಸಿನ್ಹಾ ಆಸ್ಪತ್ರೆಗೆ ತೆರಳಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಒಟ್ನಲ್ಲಿ ಸದ್ಯಕ್ಕೆ ಸೋನಾಕ್ಷಿ ಸಿನ್ಹಾ ಮದುವೆ ಆದ ಒಂದು ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿರುವ ವಿಚಾರ ತೀವೃ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹತ್ತಾರು ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.


Click it and Unblock the Notifications











