»   » ಈಡೇರಿದ್ದಾಯ್ತು ಸೋನಾಕ್ಷಿಯ ಬಹುದಿನಗಳ ಬಯಕೆ!

ಈಡೇರಿದ್ದಾಯ್ತು ಸೋನಾಕ್ಷಿಯ ಬಹುದಿನಗಳ ಬಯಕೆ!

Posted By:
Subscribe to Filmibeat Kannada

ಬಣ್ಣ ಹಚ್ಚುವುದಕ್ಕೆ ಶುರುಮಾಡಿ ಇನ್ನೂ ನಾಲ್ಕು ವರ್ಷಗಳು ಕಳೆದಿಲ್ಲ. ಅಷ್ಟು ಬೇಗ ಬಾಲಿವುಡ್ ನ ಟಾಪ್ ನಟೀಮಣಿಯರ ಸಾಲಿಗೆ ಸೇರಿರುವ ಸೋನಾಕ್ಷಿ ಸಿನ್ಹಾ, ದಿನಗಳು ಕಳೆದಂತೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನ ಒಂದೊಂದಾಗೇ ಹೊರಹಾಕುತ್ತಿದ್ದಾರೆ.

'ಸೋನಾಕ್ಷಿಗೆ ಸೊಂಟ ಕುಲುಕಿಸುವುದಕ್ಕೆ ಬರಲ್ಲ' ಅಂದವ್ರಿಗೆ 'ರೌಡಿ ರಾಥೋರ್' ಚಿತ್ರದಲ್ಲಿ ಆಕೆ ಉತ್ತರ ನೀಡಿದ್ದರು. ಪ್ರಭುದೇವಾ ಜೊತೆ ಅಂದು ಕುಣಿದು ಕುಪ್ಪಳಿಸಿದ್ದ ಸೋನಾಕ್ಷಿ, ಆ ಹಾಡಿನ ತಲೆಮೇಲೆ ಹೊಡೆದಂತೆ ಈಗ 'ತೇವರ್' ಚಿತ್ರದ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. [ಚಿರಂಜೀವಿ ಪುತ್ರನಿಗೆ ಸೋನಾಕ್ಷಿ ಮೇಲೆ ಮನಸ್ಸು]

Sonakshi Sinha1

'ತೇವರ್' ಚಿತ್ರದಲ್ಲಿ ನಾಟ್ಯ ಮಯೂರಿ ಸೋನಾಕ್ಷಿಯನ್ನ ನೋಡುವವರಿಗೆ, ಅದೇ ಚಿತ್ರದಲ್ಲಿ ಮತ್ತೊಂದು ಸರ್ಪ್ರೈಸ್ ಕಾದಿದೆ. ಸೋನಾಕ್ಷಿಯ ಧ್ವನಿಯನ್ನ ಕೇಳಿ ಆಡಿಕೊಂಡವರು ಬಾಯ್ಮುಚ್ಚುವಂತೆ, ತಮ್ಮ ಗಾನ ಪ್ರತಿಭೆಯನ್ನು 'ತೇವರ್' ಚಿತ್ರದಲ್ಲಿ ಪ್ರದರ್ಶಿಸಲಿದ್ದಾರೆ ಸೋನಾಕ್ಷಿ. [ನಾಟ್ಯ ಮಯೂರಿ ಸೋನಾಕ್ಷಿ ಸಿನ್ಹಾ ಖತರ್ನಾಕ್ ಡಾನ್ಸ್]

ಹಾಡುವುದೆಂದರೆ ಪಂಚಪ್ರಾಣ ಅನ್ನುವ ಸೋನಾಕ್ಷಿ, ಪ್ರೊಫೆಶನಲ್ ಸಿಂಗರ್ ಅಲ್ಲದೇ ಇದ್ದರೂ ಪರ್ಮನೆಂಟ್ ಬಾತ್ ರೂಮ್ ಸಿಂಗರ್. ಇದೇ ವರ್ಷ ರಿಲೀಸ್ ಆಗಿದ್ದ 'ರಿಯೋ' ಚಿತ್ರದಲ್ಲಿ ಎರಡು ಸಾಲನ್ನ ಹಾಡಿ ಮೋಡಿ ಮಾಡಿದ್ದ ಸೋನಾಕ್ಷಿಗೆ, 'ತೇವರ್' ಚಿತ್ರದಲ್ಲಿ ಪೂರ್ಣ ಪ್ರಮಾಣದ ಗಾಯಕಿಯಾಗುವ ಅವಕಾಶ ಸಿಕ್ಕಿದೆ. ಆ ಮೂಲಕ ಅವರ ಬಹುದಿನಗಳ ಬಯಕೆ ಈಡೇರಿದೆಯಂತೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Sonakshi Sinha2

ಅಸಲಿಗೆ ಸೋನಾಕ್ಷಿಗೆ ಹಾಡುವ ಚಾನ್ಸ್ ಕೊಟ್ಟಿದ್ದು ಸಂಗೀತ ನಿರ್ದೇಶಕ ಇಮ್ರಾನ್ ಖಾನ್. ಮುಂಬೈನ ಸ್ಟುಡಿಯೋವೊಂದರಲ್ಲಿ 'ತೇವರ್' ಚಿತ್ರದ ಟೈಟಲ್ ಸಾಂಗ್ 'ಲೆಟ್ಸ್ ಸೆಲೆಬ್ರೇಟ್'ಗೆ ಖುದ್ದು ಇಮ್ರಾನ್ ಖಾನ್ ದನಿಯಾಗಿ, ರೆಕಾರ್ಡ್ ಮಾಡುತ್ತಿದ್ದರು. ಹಾಡಲ್ಲಿ ಫೀಮೇಲ್ ವಾಯ್ಸ್ ಇದ್ದರೂ, ಗಾಯಕಿಯೊಬ್ಬರು ಮಿಸ್ ಆಗಿದ್ದರು. ಆಗ ಅದಕ್ಕೆ ಯಾರು ಹಾಡಲಿದ್ದಾರೆ ಅಂತ ಸೋನಾಕ್ಷಿ ಕುತೂಹಲದಿಂದ ಪ್ರಶ್ನಿಸಿದಾಗ ''ನೀವೇ'' ಅಂತ ಇಮ್ರಾನ್ ಹೇಳಿದ್ರಂತೆ. [ಪ್ರಭುದೇವ ಜೊತೆ ತಾರೆ ಸೋನಾಕ್ಷಿ ಕುಚ್ ಕುಚ್]

ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಸೋನಾಕ್ಷಿ, ಕೇವಲ ನಾಲ್ಕು ಗಂಟೆಗಳಲ್ಲೇ ಹಾಡನ್ನ ಅಭ್ಯಾಸ ಮಾಡಿ ಮೈಕ್ ಹಿಡಿದಿದ್ದಾರೆ. ನಂತ್ರ ಹಾಡನ್ನ ಕೇಳಿ ಖುಷಿಯಾಗಿರುವ ಸೋನು, ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.


ನಟನೆ ಜೊತೆ ಪಬ್ಲಿಸಿಟಿ ಮತ್ತು ಅವಾಗವಾಗ ಇಂಥ ಪ್ರಯೋಗಗಳು ನಡೆಯುತ್ತಿದ್ದರೆ ನಟೀಮಣಿಯರು ಚಾಲ್ತಿಯಲ್ಲಿರುತ್ತಾರೆ ಅನ್ನುವುದು ಬಾಲಿವುಡ್ ನ ರೆಡಿಮೇಡ್ ಫಾರ್ಮುಲಾ. ಅದನ್ನ ಈಗಾಗಲೇ ಆಲಿಯಾ ಭಟ್ ಮತ್ತು ಶ್ರದ್ಧಾ ಕಪೂರ್ ಸಾಬೀತು ಪಡಿಸಿದ್ದಾರೆ. ಇದೇ ಸಾಲಿಗೆ ಇದೀಗ ಸೋನಾಕ್ಷಿ ಸೇರಿದ್ದಾರೆ ಅಷ್ಟೆ! (ಏಜೆನ್ಸೀಸ್)

English summary
Bollywood Actress Sonakshi Sinha has turned singer for her up-coming movie Tevar. Sonakshi Sinha who was always passionate about singing, has found herself in a recording studio, doing a actual playback.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada