ನಟಿ ಸೊನಾಲಿ ಬೇಂದ್ರೆಗೆ ರಾತ್ರೋರಾತ್ರಿ ಫೋನ್ ಓಡಿ ಹೋಗೋಣ ಎಂದಿದ್ರಾ ಸುನೀಲ್ ಶೆಟ್ಟಿ?

ಬಾಲಿವುಡ್ ಖ್ಯಾತ ನಟಿಯರಲ್ಲಿ ಸೊನಾಲಿ ಬೇಂದ್ರೆ ಕೂಡ ಒಬ್ಬರು. 90ರ ದಶಕದಲ್ಲಿ ಸೊನಾಲಿ ಸ್ಟಾರ್ ನಟಿಯಾಗಿ ಬಾಲಿವುಡ್ ನಲ್ಲಿ ಮೆರೆದವರು. ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ಸೊನಾಲಿ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವ ಸೊನಾಲಿ ಸಾರ್ವನಿಕವಾಗಿ ಹೆಚ್ಚು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

1994ರಲ್ಲಿ ಆಗ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸೊನಾಲಿ ಬಳಿಕ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಮೇಜರ್ ಸಾಬ್, ಜಖ್ಮ್, ಸರ್ಫರೋಶ್, ಹಮ್ ಸಾಥ್ ಸಾಥ್ ಹೈ ಸೇರಿದಂತೆ ಅನೇಕ ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಿಕ ಸಂಪಾದಿಸಿದ್ದ ನಟಿ. ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿಯೂ ಅನೇಕ ಸಿನಿಮಾಗಳಲ್ಲಿ ಸೊನಾಲಿ ಬಣ್ಣಹಚ್ಚಿದ್ದಾರೆ.

ಆ ಸಮಯದಲ್ಲಿ ಸೊನಾಲಿ ಮತ್ತು ಸುನೀಲ್ ಶೆಟ್ಟಿ ನಡುವೆ ಗುಸುಗುಸು ಕೇಳಿಬರುತ್ತಿತ್ತು. ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸೊನಾಲಿ ಮತ್ತು ಸುನೀಲ್ ಶೆಟ್ಟಿ ರಕ್ಷಕ್, ಟಕ್ಕರ್, ಸಪೂತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿತ್ತು. ತೆರೆಮೇಲೆ ಇಬ್ಬರನ್ನೂ ನೋಡಿದವರು ನಿಜ ಜೀವನದಲ್ಲೂ ಇಬ್ಬರು ಪ್ರೇಮಮಿಗಳು ಎಂದೇ ಭಾವಿಸಿದ್ದರು. ಇದರಿಂದ ಸುನಿಲ್ ಮತ್ತು ಸೊನಾಲಿ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿತ್ತು ಎನ್ನುವುದನ್ನು ನಟಿ ವಿವರಿಸಿದ್ದಾರೆ.

ಸುನೀಲ್ ಶೆಟ್ಟಿ ಮದುವೆ

ಸುನೀಲ್ ಶೆಟ್ಟಿ ಮದುವೆ

ಇಬ್ಬರ ನಡುವೆ ವದಂತಿಗಳು ಜಾರಾಗಿ ಕೇಳಿಬರುತ್ತಿದ್ದ ಸಮಯದಲ್ಲೇ ಸುನೀಲ್ ಶೆಟ್ಟಿ ಮನಾ ಶೆಟ್ಟಿಯನ್ನು ಮದುವೆಯಾದರು. ಇದು ಅನೇಕರಿಗೆ ಶಾಕ್ ನೀಡಿತ್ತು. ಆಗಿನ್ನು ಸೊನಾಲಿಗೆ ಮದುವೆಯಾಗರಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೊನಾಲಿ, ವದಂತಿಗಳಿಂದ ಇಬ್ಬರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿತು ಎನ್ನುವುದನ್ನು ವಿವರಿಸಿದ್ದಾರೆ.

ಪ್ರಾರಂಭದಲ್ಲಿ ತಮಾಷೆಯಾಗಿತ್ತು

ಪ್ರಾರಂಭದಲ್ಲಿ ತಮಾಷೆಯಾಗಿತ್ತು

"ಸುನೀಲ್ ಶೆಟ್ಟಿ ಮತ್ತು ನನಗೆ ಇದು ತುಂಬಾ ಟೆನ್ಷನ್ ಆಗಿತ್ತು. ಪ್ರಾರಂಭದಲ್ಲಿ ಇಬ್ಬರೂ ತುಂಬಾ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದೆವು. ಇಬ್ಬರೂ ನಗುತ್ತಿದ್ದೆವು. ನಿಜಕ್ಕೂ ಫಿನ್ನಿಯಾಗಿತ್ತು. ಆದರೆ ಸ್ವಲ್ಪಸಮಯದ ನಂತರ ಅದು ತಮಾಷೆಯಾಗಿರಲಿಲ್ಲ. ಗಂಭೀರವಾಯಿತು. ಇಬ್ಬರ ವೈಯಕ್ತಿಕ ಜೀವನದ ಮೇಲು ಪರಿಣಾಮ ಬೀರಲು ಪ್ರಾರಂಭವಾಯಿತು. ನಂತರ ಇದು ಸಮಾಷೆಯಾಗಿ ಕಾಣಲಿಲ್ಲ" ಎಂದಿದ್ದರು.

ನಾನು ಒಂಟಿಯಾಗಿದ್ದೆ, ಆದರೆ ಸುನೀಲ್ ಗೆ ಹಾಗಲ್ಲ

ನಾನು ಒಂಟಿಯಾಗಿದ್ದೆ, ಆದರೆ ಸುನೀಲ್ ಗೆ ಹಾಗಲ್ಲ

"ಸುನೀಲ್ ಶೆಟ್ಟಿ ಅವರ ವೈಯಕ್ತಿಕ ಜೀವನ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ನನಗೆ ಗೊತ್ತಿಲ್ಲ. ಯಾಕೆಂದರೆ ಅವರ ಜೊತೆ ನಾನು ಮಾತನಾಡಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬಹುದು. ಆಗ ನಾನು ಒಂಟಿಯಾಗಿದ್ದೆ. ಯಾರಿಗೂ ಉತ್ತರ ಕೊಡುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಸುನೀಲ್ ಶೆಟ್ಟಿ ಅವರ ವೈಯಕ್ತಿಕ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿರಬಹುದು, ಅವರ ವಿವಾಹಿತ ವ್ಯಕ್ತಿ ಎಂದು ನಾನು ಊಹಿಸಬಹುದು" ಎಂದು ಸೊನಾಲಿ ಹೇಳಿದರು.

ರಾತ್ರೋರಾತ್ರಿ ಅಪರಿಚಿತನಿಂದ ಫೋನ್ ಕರೆ

ರಾತ್ರೋರಾತ್ರಿ ಅಪರಿಚಿತನಿಂದ ಫೋನ್ ಕರೆ

ಇದೇ ಸಮಯದಲ್ಲಿ ಸೊನಾಲಿ ತನಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯಿಂದ ಸುನಿಲ್ ಶೆಟ್ಟಿ ಎಂದು ಹೇಳಿಕೊಂಡು ಫೋನ್ ಮಾಡಿ, ಓಡಿ ಹೋಗೋಣ ಎಂದು ಹೇಳಿದ್ದ ಘಟನೆಯನ್ನು ಬಿಚ್ಚಿಟ್ಟರು."ರಾತ್ರಿ ಎರಡು ಗಂಟೆಗೆ ನಿಮಗೆ ಕರೆ ಬಂದಾಗ ಅದು ತಮಾಷೆಯಾಗಿರಲ್ಲ ಎಂದು ಜನರಿಗೆ ಅರ್ಥವಾಗುವುದಿಲ್ಲ. ಆದರೆ ಕೆಲವು ಮುೂರ್ಖರು ಕರೆ ಮಾಡಿ, ಇದು ಸುನೀಲ್ ಶೆಟ್ಟಿ ಮಾತನಾಡುತ್ತಿರುವುದು ಬನ್ನಿ ನಾವಿಬ್ಬರು ಪರಾರಿಯಾಗೋಣ, ನನ್ನೊಂದಿಗೆ ಓಡಿ ಬಾ ಎಂದು ಅಪರಿತ ವ್ಯಕ್ತಿಯೊಬ್ಬ ಹೇಳಿದ್ದ. ಹೀಗೆ ಹೇಳಿದಾಗ ಖಂಡಿತ ಇದು ತಮಾಷೆಯಾಗಿರಲ್ಲ.

ಸಹೋದರಿಯನ್ನು ಕೇಳುತ್ತಿದ್ದರು

ಸಹೋದರಿಯನ್ನು ಕೇಳುತ್ತಿದ್ದರು

ಜನರು ಕಾಲೇಜಿನಲ್ಲಿ ನನ್ನ ಸಹೋದರಿ ಬಳಿ ಬಂದು ನಿನ್ನ ಅಕ್ಕ ನಟ ಸುನೀಲ್ ಶೆಟ್ಟಿ ಜೊತೆ ಪ್ರೀತಿಯಲ್ಲಿದ್ದಾರಾ? ಎಂದು ಕೇಳಿತ್ತಿದ್ದರು. ಇದು ಕೂಡ ತಮಾಷೆಯಾಗುವುದಿಲ್ಲ ಎಂದು ಸೊನಾಲಿ ಬೇಂದ್ರೆ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ಜೊತೆಗಿನ ಸಂಬಂಧದ ಬಗ್ಗೆ ವಿವರವಾಗಿ ಹಂಚಿಕೊಂಡಿದ್ದರು.

ಸಂಬಂಧಿಕರ ಚುಚ್ಚು ಮಾತು

ಸಂಬಂಧಿಕರ ಚುಚ್ಚು ಮಾತು

ಕೆಲವು ಸಂಬಂಧಿಕರು ಸಹ ನನ್ನ ಪೋಷಕರ ಬಳಿ ಬಂದು, " ಈಗ ನಿಮಗೆ ಬೇಕಾದ ಹಣ ನೀವು ಪಡೆಯುತ್ತಿದ್ದೀರಿ. ನಿಮ್ಮ ಮಗಳು ಯಾವುದೇ ಹೀರೋ ಜೊತೆ ಏನಾದರೂ ಮಾಡುತ್ತಿದ್ದರೆ ಅದು ನಿಮಗೆ ತೊಂದರೆ ಆಗುವುದಿಲ್ಲ. ಎಂದು ಹೇಳಿದ್ದರು. ಈ ರೀತಿ ನನಗೆ ತುಂಬಾ ಪ್ರಭಾವ ಬೀರುತ್ತಿತ್ತು. ಜನರು ಹೀಗೆ ಮಾತನಾಡುವಾಗ ನಾನು ಅದನ್ನು ದ್ವೇಷಿಸುತ್ತಿದ್ದೆ. ನಾನು ನಿಜಕ್ಕೂ ಅಪ್ ಸೆಟ್ ಆಗಿದ್ದೆ" ಎಂದು ಹೇಳಿದರು.

ಶೂಟಿಂಗ್ ನಲ್ಲಿ ಸುನೀಲ್ ನನ್ನನ್ನು ಮುಟ್ಟಲು ನಿರಾಕರಿಸಿದರು

ಶೂಟಿಂಗ್ ನಲ್ಲಿ ಸುನೀಲ್ ನನ್ನನ್ನು ಮುಟ್ಟಲು ನಿರಾಕರಿಸಿದರು

"ನಾನು ಮತ್ತು ಸುನೀಲ್ ಫೋಟೋಶೂಟ್ ಮಾಡಿಸುತ್ತಿದ್ದೆವು, ಎಲ್ಲರೂ ಆಗ ಓಹ್ ಅವರು ಒಬ್ಬರಿಗೊಬ್ಬರು ತುಂಬಾ ಆರಾಮಾಗಿ ಇದ್ದಾರೆ ಎನ್ನುತ್ತಿದ್ದರು. ಶೂಟಿಂಗ್ ನಲ್ಲಿ ಸುನೀಲ್ ನನ್ನನ್ನು ಅಪ್ಪಿಕೊಳ್ಳುವ ದೃಶ್ಯವಿತ್ತು. ಆದರೆ ನಾನು ದೂರ ಹೋಗುತ್ತಿದ್ದೆ, ಸುನಿಲ್ ಕೂಡ ನನ್ನನ್ನು ಮುಟ್ಟಲು ನಿರಾಕರಿಸುತ್ತಿದ್ದರು. ವದಂತಿಯಿಂದ ಇಬ್ಬರ ಮೇಲೆ ಎಷ್ಟು ಪರಿಣಾಮ ಬೀರಿತ್ತು ಎಂದು ನಾವು ಅರಿತುಕೊಂಡೆವು" ಎಂದು ಸೊನಾಲಿ ಬೇಂದ್ರೆ ಹೇಳಿದ್ದರು.

More from Filmibeat

English summary
Actress Sonali Bendre once get fake call from the name Suniel Shetty. says this is Suniel Shetty Speaking , Elope with me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X