ನನ್ನ ಗಂಡನ ಕೈಯಿಂದ ಪಾರಾಗಿದ್ದು ಸೋನಾಲಿ ಬೇಂದ್ರೆ ಮಾತ್ರ- ಗೋವಿಂದ ಪತ್ನಿ ಸುನಿತಾ

ಚಿತ್ರರಂಗದಲ್ಲಿ ಬಗೆ ಬಗೆಯ ಜನ ಇರ್ತಾರೆ. ಒಬ್ಬೊಬ್ಬರಿಗೆ ಇಲ್ಲಿ ಒಂದೊಂದು ಹುಚ್ಚು. ಕೆಲವರಿಗೆ ಇಲ್ಲಿ ಹಣದಾಸೆ.. ಇನ್ನೂ ಕೆಲವರಿಗೆ ಹೆಣ್ಣಿನ ಮೇಲೆ ವ್ಯಾಮೋಹ. ಅವಕಾಶ ಕೊಡುವ ನೆಪದಲ್ಲಿ ಕೆಲವರು ಇಲ್ಲಿ ನಾಯಕಿಯರನ್ನು ಮಂಚಕ್ಕೆ ಕರೆದರೆ, ಇನ್ನೂ ಕೆಲವರು.. ತಮ್ಮ ಚಿತ್ರದ ನಾಯಕಿಯ ಜೊತೆ ಚೆಲ್ಲಾಟವಾಡುತ್ತಾರೆ. ತಮ್ಮತ್ತ ನಾಯಕಿಯನ್ನು ಸೆಳೆಯಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ.

ಒಬ್ಬರಲ್ಲ.. ಇಬ್ಬರಲ್ಲ.. ಬದಲಿಗೆ ತಮ್ಮ ಜೊತೆ ಕೆಲಸ ಮಾಡುವ ನಟಿಯರನ್ನು ಇವರು ನೋಡುವ ದೃಷ್ಟಿಕೋನ ಬದಲಾಗುವುದೇ ಇಲ್ಲ. ಈ ಸಾಲಿನಲ್ಲಿ ಗೋವಿಂದ ಕೂಡ ಇದ್ದಾರೆ ಎನ್ನುವುದೇ ಸದ್ಯದ ಶಾಕಿಂಗ್ ಸತ್ಯ. ಈ ವಿಚಾರವನ್ನು ಬೇರೆ ಯಾರು ಅಲ್ಲ ಬದಲಿಗೆ ಅವರ ಪತ್ನಿ ಸುನಿತಾ ಹೇಳಿರುವುದು ಸದ್ಯದ ಅಚ್ಚರಿ ಕೂಡ ಹೌದು.

Sonali Bendre Was Spared Sunita Ahuja s Shocking Revelation About Govinda s Flirting

ಹೌದು, ಗೋವಿಂದ.. ಪೈಕಿ ಅಂದಕಾಲತ್ತಿಲ್‌ನ ಬಾಲಿವುಡ್‌ನ ''ಹೀರೋ ನಂಬರ್ ಒನ್''. 90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು.

ಸದ್ಯ ಬದಲಾದ ಕಾಲಘಟ್ಟದಲ್ಲಿ ಗೋವಿಂದಗೆ ಹಿಂದಿ ಚಿತ್ರರಂಗದಲ್ಲಿ ಮಾಡಲು ಕೆಲಸ ಇಲ್ಲ. ಕರೆದು ಇವರಿಗೆ ಅವಕಾಶವನ್ನು ಕೊಡುವರು ಕೂಡ ಬಾಲಿವುಡ್‌ನಲ್ಲಿ ಯಾರು ಇಲ್ಲ. ಯಾಕೆಂದರೆ ಕೆಳಗೆ ಬಿದ್ದರೂ ಕೂಡ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಇವರದ್ದು.

ಹೀಗಾಗಿಯೇ ಹಿಂದಿ ಚಿತ್ರರಂಗದಲ್ಲಿ ಅನೇಕರು ಇವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ತಾವಾಗಿಯೇ ಹೋಗಿ ಅವಕಾಶ ಕೇಳಿದರೆ ತಮ್ಮ ಮರ್ಯಾದೆ ಕಡಿಮೆಯಾಗುತ್ತೆ ಎಂದುಕೊಂಡು ಗೋವಿಂದ ಸದ್ಯ ಮನೆಯಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

Sonali Bendre Was Spared Sunita Ahuja s Shocking Revelation About Govinda s Flirting

ಇಂಥಾ ಗೋವಿಂದಾಗೆ ಇವರ ಪತ್ನಿ ಸುನಿತಾ ಅವರೇ ಸದ್ಯ ತಲೆ ನೋವಾಗಿದ್ದಾರೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಅನೇಕ ದಿನಗಳಿಂದ ಕೇಳಿ ಬರುತ್ತಿದೆ. .ಯಾಕೆಂದರೆ ಇಷ್ಟು ವರ್ಷಗಳ ಕಾಲ ಗೋವಿಂದ ಸಂಪಾದಿಸಿದ ಹೆಸರನ್ನೆಲ್ಲಾ ಮಣ್ಣು ಪಾಲು ಮಾಡಬೇಕೆಂದು ಶಪಥ ಮಾಡಿದಂತೆ ಇರುವ ಸುನಿತಾ ಅಹುಜಾ ಒಮ್ಮೆ ವಿಚ್ಚೇದನ ನೀಡುವುದಾಗಿ ಹೇಳುತ್ತಾರೆ. ಮತ್ತೊಮ್ಮೆ ತಮ್ಮ ಪತಿಯನ್ನು ಕರೆದು ಮುದ್ದು ಮಾಡುತ್ತಾರೆ. ಹಬ್ಬ ಹರಿದಿನ ಆಚರಿಸುತ್ತಾರೆ.

ಇನ್ನೂ ಕೆಲ ಒಮ್ಮೆ ನನ್ನ ಗಂಡನಿಗೆ ಕೆಲಸ ಇಲ್ಲ ಯಾರಾದರೂ ಕರೆದು ಕೆಲಸ ಕೊಡಿ, ಅವರ ಸುತ್ತ ಮುತ್ತ ಇರುವ ಜನರೇ ಅವರನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತಾರೆ. ಮತ್ತೊಮ್ಮೆ ನನ್ನ ಗಂಡನಿಗೆ ಯುವ ನಟಿಯ ಜೊತೆ ಅಫೇರ್ ಇದೆ ಎಂದು ಹೇಳುವ ಮೂಲಕ ಬಾಂಬ್ ಸಿಡಿಸುತ್ತಾರೆ.

ಹೀಗೆ ಕಾಲ ಕಾಲಕ್ಕೆ ಗೋವಿಂದ ಮಾನಹರಣವನ್ನು ಮಾಡುತ್ತಲೇ ಬರುತ್ತಿರುವ ಸುನಿತಾ, ಸದ್ಯ ನನ್ನ ಗಂಡನ ಕೈಯಿಂದ ಸೋನಾಲಿ ಬೇಂದ್ರೆ ಮಾತ್ರ ಪಾರಾಗಿದ್ದು ಎಂದು ಸೋನಾಲಿ ಬೇಂದ್ರೆ ಅವರ ಸಮ್ಮುಖದಲ್ಲಿಯೇ ಹೇಳಿದ್ದಾರೆ.

ಹೌದು, ಹಿಂದಿ ಕಿರುತೆರೆ "ಪತಿ ಪತ್ನಿ ಔರ್ ಪಂಗಾ'' ಎಂಬ ಕಾರ್ಯಕ್ರಮ ಬರುತ್ತಿದೆ. ಗಂಡ-ಹೆಂಡತಿಯನ್ನು ಕೂರಿಸಿ ಅವರಿಗೆ ಟಾಸ್ಕ್‌ಗಳನ್ನು ನೀಡುವ ರಿಯಾಲಿಟಿ ಶೋ ಇದು. ಸೋನಾಲಿ ಬೇಂದ್ರೆ ಮತ್ತು ಮುನಾವರ್ ಫಾರೂಕಿ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಗೋವಿಂದ ಪತ್ನಿ ಸುನಿತಾ ಇತ್ತೀಚೆಗೆ ವಿಶೇಷ ಜಡ್ಜ್‌ ಆಗಿ ಬಂದಿದ್ದರು. ಈ ಸಮಯದಲ್ಲಿ ಹಳೆಯ ದಿನಗಳನ್ನೆಲ್ಲಾ ಮೆಲುಕು ಹಾಕಿದ ಸುನಿತಾ ನನ್ನ ಗಂಡ ಗೋವಿಂದ ತಮ್ಮ ಜೊತೆ ಕೆಲಸ ಮಾಡಿದ ಬಹುತೇಕ ಎಲ್ಲ ನಾಯಕಿಯರ ಜೊತೆ ಫ್ಲರ್ಟ್ ಮಾಡಿದ್ದಾರೆ. ತಮ್ಮತ್ತ ಸೆಳೆಯುವ ಸರ್ಕಸ್ ಮಾಡಿದ್ದಾರೆ. ಆದರೆ ನನ್ನ ಗಂಡನ ವರ್ತನೆಗಳಿಗೆ ಸೊಪ್ಪು ಹಾಕದ ಏಕೈಕ ಮಹಿಳೆ ಅಂದರೆ ಅದು ಸೋನಾಲಿ ಬೇಂದ್ರೆ ಮಾತ್ರ ಎಂದು ಹೇಳಿದ್ದಾರೆ.

ಅಂದ್ಹಾಗೇ ಗೋವಿಂದ ಮತ್ತು ಸೋನಾಲಿ ಬೇಂದ್ರೆ ''ಆಗ್''.. ''ಅಪ್ನೇ ಧಮ್ ಪರ್''.. ''ಜಿಸ್ ದೇಶ್ ಮೇ ಗಂಗಾ ರೆಹತಾ ಹೈ''.. ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ಆ ಪೈಕಿ ''ಆಗ್'' ಸೋನಾಲಿ ಅವರ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡಿತ್ತು. ಈ ವಿಚಾರವನ್ನು ಖೂಡ ಸುನಿತಾ ಈ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.


ಸದ್ಯ ಗೋವಿಂದ ಪತ್ನಿಯ ಈ ಹೇಳಿಕೆಯ ಕುರಿತು ಬಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಚರ್ಚೆ ನಡೆಯುತ್ತಿದ್ದು ತಮ್ಮ ಪತ್ನಿಗೆ ಎಲ್ಲೂ ಸಂದರ್ಶನ ನೀಡದಂತೆ, ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಗೋವಿಂದ ತಡೆಯಬೇಕು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

More from Filmibeat

English summary
In a surprising confession, Sunita Ahuja shares that her husband Govinda never flirted with co-star Sonali Bendre, despite his reputation. Get the full story on their shared history.
Read more about: govinda actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X